“ವಾಸು ನಾನು ಪಕ್ಕ ಕಮರ್ಷಿಯಲ್” ಸಿನಿಮಾದಲ್ಲಿ ಅನೀಶ್ ತೇಜೇಶ್ವರ್ ಜೊತೆಗೆ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ ನಟಿ ನಿಷ್ವಿಕಾ ನಾಯ್ಡು ಇಂದು ಅವರ 25ನೆ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳೋತ್ತಿದ್ದಾರೆ.
ಈ ಮಧ್ಯೆ ಶರಣ ಅಭಿನಯದ, ಜಡೇಶ K.ಹಂಪಿ ನಿರ್ದೇಶನದ ಹಾಗೂ ತರುಣ್ ಸುಧೀರ್ ನಿರ್ಮಿಸುತ್ತಿರುವ
“ಗುರು ಶಿಷ್ಯರು” ಸಿನಿಮಾಗೆ ನಾಯಕಿಯಾಗಿ, ಶರಣ್ ಜೋಡಿಯಾಗಿ ಆಯ್ಕೆಯಾಗಿದ್ದಾರೆ ನಿಷ್ವಿಕಾ. ಸಿನಿಮಾ ತಂಡದವರು ಬಹಳ ದಿನದಿಂದ ನಾಯಕಿಯ ಹುಡುಕಾಟದಲ್ಲಿದ್ದರು. ಹಳ್ಳಿ ಹುಡುಗಿ , ಪಟ ಪಟ ಅಂತ ಮಾತಾಡುತ್ತಾ ಹಾಲು ಹಾಕುವ ಹುಡುಗಿಯ ಪಾತ್ರವದು.. ಗುರುಶಿಷ್ಯರು ಕಾಮಿಡಿ ಮತ್ತು ಸಾಂಸಾರಿಕ ಚಿತ್ರವಾಗಿದ್ದು ಒಳ್ಳೆ ಮನೋರಂಜನೆ ನೀಡಲು ಸಜ್ಜಾಗ್ತಿದೆ.
ನಟಿಸಿರುವ 5 ಸಿನಿಮಾಗಳಲ್ಲು ವಿವಿಧ ಪಾತ್ರಗಳನ್ನ ನಿಭಾಯಿಸಿದ್ದಾರೆ. ಗ್ಲಾಮರ ರೋಲ್ಗು ಸೈ, ಹಳ್ಳಿ ಹುಡುಗಿಯ ಹೋಮಲಿ ಪಾತ್ರಕ್ಕೂ ಜೈ ಎಂದು ನಂಬಿ ಅವರನ್ನ ಅರಸಿ ಬರುವ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ, ಈ ನಡುವೆ ಹೆಚ್ಚು ಕಾಲ ಫೈಟ್ನಸ್ ಗೆ ಒತ್ತು ನೀಡುತ್ತಿದ್ದು ಜಿಮ್ನಲ್ಲಿ ಕಸರತ್ತು ಮಾಡುವ ವಿಡಿಯೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ “ನಿಷ್ವಿಕಾ”..
ಇನ್ನಷ್ಟು ಒಳ್ಳೆ ಪಾತ್ರಗಳು ಅವರನ್ನರಸಿ ಬರಲೆಂದು ಹೇಳಿ ಚಿತ್ರೋದ್ಯಮ.ಕಾಂ ಕಡೆಯಿಂದ ಹುಟ್ಟ ಹಬ್ಬದ ಶುಭಾಹಾಶಯಗಳು..