ಕನ್ನಡ ಜನರ ಮನೆ ಮನಗಳಲ್ಲಿಇಂದುಗೂ”ಹಾಸ್ಯಚಕ್ರವರ್ತಿ“ಯಾಗಿಉಳಿದಿದ್ದರೆ ನಟ ನರಸಿಂಹರಾಜುಅವರು.ತಮ್ಮ ಹಾವ ಭಾವಗಳಿಂದ, ತಿಳಿ ಹಾಸ್ಯದಿಂದಎಲ್ಲರನ್ನು ನಗಿಸಿ, ನಲಿವಗೆಕಾರಣರಾದನರಸಿಂಹರಾಜು ಅವರ ಬದುಕಿನಲ್ಲಿ ದೊಡ್ಡ ಅವಘಡ ಸಂಭವಿಸಿತ್ತು.
70ರ ದಶಕದಲ್ಲಿ ಅವರ ಹರೆ ಹರೆಯದ ಮಗ ಮೋಟಾರ್ ಬೈಕ್ಓಡಿಸುವಾಗ್ ಘೋರ ಅಪಘಾತ ಸಂಭವಿಸಿಸವಿಗೀಡಾರು. ಪುತ್ರನನ್ನು ಕಳೆದುಕೊಂಡ ನರಸಿಂಹರಾಜು ಅವರಿಗೆ ಯಾರು ಸರಿಮಾಡಲಾಗದ ದೊಡ್ಡ ಗಾಯವಾಗಿತ್ತು. ಸದಾ ಎಲ್ಲರನ್ನುನಾಗಿಸುತ್ತಿದ್ದ ಅವರ ಬದುಕಿನಲ್ಲಿ ತೀವ್ರ ದುಃಖ ನೋವು ಆವರಿಸಿತ್ತು. ಈ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳಲು ಚಿತ್ರರಂಗದ ಎಲ್ಲಾ ಮಹನೀಯರು ನೆರೆದಿದ್ದರು.
ಪರಮಾಪ್ತರಾಗಿದ್ದ ಡಾ. ರಾಜ್ಕುಮಾರ್ಎದುರು, ಆ ಸಂಧರ್ಭದಲ್ಲಿ ನರಸಿಂಹರಾಜು ಒಂದು ಮಾನವಿ ಮಾಡಿಕೊಂಡರು,”ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳಿಗೆ ಮೋಟಾರ್ ಬೈಕ್ಕೊಡಿಸಬೇಡಿ” ನಾನು ಇಂದು ತಂದೆಯಾಗಿ ಅನುಭವಿಸುತ್ತಿರುವ ನೋವು ಬೇರೆ ಯಾವ ತಂದೆಗೂ ಬರಬಾರದು,ಹಾಗಾಗಿದೈವಿಟ್ಟು ಮಾತು ಕೊಡಿ ಎಂದು ಅಣ್ಣಾವ್ರ ಬಳಿ ನರಸಿಂಹರಾಜು ಕೇಳಿದರು..
ಮರುಚಿಂತಿಸದೆ ಡಾ.ರಾಜ್, ನರಸಿಂಹರಾಜು ಅವರನ್ನು ಅಪ್ಪಿಕೊಂಡು ಅವರ ಮಾತಿಗೆ ಒಪ್ಪಿ ಅದನ್ನು ಕಡೆಯವರಿಗುಪಾಲಿಸಿದರು.. ಅವರ ಮಕ್ಕಳಿಗೆ ಅರಿವು ಮೂಡಿಸಿ, ಒಂದು ಹಂತಕ್ಕೆ ಬೆಳೆಯುವ ತನಕ ಯಾವುದೇ ಕಾರಣಕ್ಕೂ ಬೈಕ್ ಮುಟ್ಟಲು ಬಿಟ್ಟಿರಲಿಲ್ಲ..
“ಪುತ್ರ ಶೋಕಮ್ ನಿರಂತರಂ” ಅನ್ನೋ ಮಾತು ಇವರ ಬದುಕಲ್ಲಿ ಸಾಬೀತಾಯಿತು .. ಮಗನ್ನನು ಅಗಲಿದ ಕೊರಗಲ್ಲೆ ,ಹೃದಯಾಘಾತದಿಂದಾಗಿ ನರಸಿಂಹ ರಾಜು ಅವರು ಕೂಡ ಬದುಕಿಗೆ ವಿದಾಯ ಹೇಳುದರು.