90ನೆ ದಶಕದ ಕನ್ನಡ ಸಿನಿಮಾಗಳಿಗೆ ಹೊಸ ಛಾಪು, ಅದ್ದೂರಿತನವ ತಂದಕೊಟ್ಟ ನಿರ್ಮಾಪಕ “ಕೋಟಿ ರಾಮು” ಇಂದು ಸಂಜೆ ದೈವಾಧೀನರಾಗಿದ್ದಾರೆ.
ನಿರ್ಮಾಪಕ ರಾಮು ಅವರಿಗೆ ಕಳೆದ ವಾರ ಕೋವಿಡ್ 19ರ ಸೋಂಕು ಪತ್ತೆಯಾದ ಕಾರಣ ಹೆಚ್ಚಿನ ಚಿಕಿಯ್ಸೆಗಾಗಿ, ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಜೆ 8 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಖ್ಯಾತ ನಟಿ ಮಾಲಾಶ್ರೀ ಇವರ ಪತ್ನಿ, ಈ ದಂಪತಿಗಳಿಗೆ ಇಬ್ಬರು ಮಕ್ಕಳು.
ನಟರಾದ ಶಿವರಾಜ್ ಕುಮಾರ್, ದೇವರಾಜ್, ರವಿಚಂದ್ರನ್,ಸಾಯಿಕುಮಾರ ಉಪೇಂದ್ರ, ದರ್ಶನ್, ಸುದೀಪ್, ಅವರುಗಳ ಜೊತೆಗೆ AK.47, ಸಿಂಹದ ಮರಿ, ಲಾಕಪ್ ಡೆತ್, ಮಲ್ಲಾ, ಕಿಚ್ಚಾ, ಕಲಾಸಿಪಾಳ್ಯ, ಚಾಮುಂಡಿ, ದುರ್ಗಿ ಮತ್ತು ಸರ್ಕಲ್ ಇನ್ಸ್ಪೆಕಟರ್ ಅಂತಃ ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿದ ಕೀರ್ತಿ ಇವರದು. ಇವರ ಸಿನಿಮಾಗಳೆಂದರೆ ಇವತ್ತಿಗೂ ಏನೋ ಒಂದು ದೊಡ್ಡ ವಿಷಯ ಇರ್ತಿತ್ತು ಅದನ್ನ ಅದ್ದೂರಿಯಾಗಿ ತೋರಿಸ್ತಿದ್ರು…. ಲಕ್ಷ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡ್ತಿದ್ದ0ತ ಸಮಯದಲ್ಲಿ ಕೋಟಿ ರೋಪಾಯಿ ಬಂಡವಾಳ ಹಾಕಿ ಹಲವು ಕೋಟಿಗಳಸ್ತಾ ಇದ್ದ ಓರ್ವ ಬುದ್ದಿವಂತ ನಿರ್ಮಾಪಕ ರಾಮು, ಕೋಟಿ ಗಳಿಸಬೇಕು ಅನ್ನೋದಕ್ಕಿಂತ ಸಿನಿಮಾ ಜನಕ್ಕೆ ಹಿಡಿಸಬೇಕು ಅನ್ನೋ ದೊಡ್ಡ ಅಭಿಲಾಷೆ ಅವರಿಗಿತ್ತು. ಸದ್ಭಿರುಚಿಯ ,ಉನ್ನತ ಸಾಹಸ ಪ್ರಧಾನ ಸಿನಿಮಾಗಳ ಮಾಲೀಕ ರಾಮು ಅವರ ಅಗಲಿಕೆಯಿಂದ ಅವರ ಕುಟುಂಬಕಷ್ಟೇ ಅಲ್ಲಾ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಲಾಸ್… ರಾಮು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಚಿತ್ರೋದ್ಯಮ. ಕಾಂ ತಂಡ ಪ್ರಾರ್ಥಿಸುತ್ತದೆ.