ನೇನು ಸೈತಂ

ಭಗತ್ ಸಿಂಗರನ್ನು ಇನ್ನೇನು ನೇಣಿಗೇರಿಸುವ ದಿನಗಳು ಹತ್ತಿರ ಬರುತ್ತಿವೆ. ಭಗತ್ ಸಿಂಗರ ತಾಯಿ ತನ್ನ ಮಗನೊಡನೆ ಕೇಳುತ್ತಾಳಂತೆ – ನಿನ್ನನ್ನು ನೇಣಿಗೇರಿಸುವ ದಿನ/ಸಮಯ ಯಾವಾಗ ಅಂತ ಗೊತ್ತಿಲ್ಲ. ನನಗೆ ಯಾರಾದ್ರೂ ಹೇಳ್ತಾರೆ ತಾನೇ? ಅಂತ ಕಣ್ಣೀರಾಕುತ್ತಾ ಕೇಳುತ್ತಾಳಂತೆ.
ಆಗ ಭಗತ್ ಸಿಂಗ್ ತನ್ನ ತಾಯಿಗೆ ಹೇಳ್ತಾರಂತೆ – ಯೋಚನೆ ಮಾಡಬೇಡಮ್ಮ. ನೇಣಿಗೆ ತಲೆಯೊಡ್ಡುವಾಗ ಕಡೆಯ ಬಾರಿಗೆ ನಾನು ಇನ್ಕ್ವಿಲಾಬ್ ಜಿಂದಾಬಾದ್ ಅಂತ ಜೋರಾಗಿ ಕೂಗ್ತೇನೆ. ಆ ಕೂಗಿನ ಶಕ್ತಿ ಎಷ್ಟಿರುತ್ತೆ ಅಂದರೆ ನಿನಗಷ್ಟೇ ಅಲ್ಲ. ಇಡೀ ಭಾರತಕ್ಕೇ ಕೇಳಿಸುತ್ತದೆ ಅಂತ ದಿಟ್ಟತನದಿಂದ ನುಡಿದಿದ್ದರಂತೆ.

ತೆಲುಗು ಸಿನಿ ಸಾಹಿತಿ ಸುದ್ದಾಲ ಅಶೋಕ್ ತೇಜರವರು ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಟಾಗೋರ್ ಚಿತ್ರದ ನೇನು ಸೈತಂ ಹಾಡಿನಲ್ಲಿ ಸಾಲೊಂದನ್ನು ಅದ್ಭುತವಾಗಿ ರಚಿಸಿದ್ದಾರೆ. 

“భగత్ సింగ్ కడసారి పలికిన ఇంక్విలాబ్ శబ్దానివా”

ರುದ್ರವೀಣ ಚಿತ್ರದ ಮೂಲ ಹಾಡಿನ ರಚನೆಕಾರರು ಸಾಹಿತ್ಯ ದಿಗ್ಗಜ ಶ್ರೀ ಶ್ರೀ ರವರು.  ಅದೇ ಪಲ್ಲವಿಯನ್ನು ತೆಗೆದುಕೊಂಡು, ಆದಷ್ಟು ಒತ್ತಕ್ಷರಗಳಿಂದಲೇ ಕೂಡಿ ಹಾಡು ರಚಿಸಿ ಅಂತ ಹೇಳಿದ್ದ ನಿರ್ದೇಶಕರ ಮಾತಿಗೂ ಬೆಲೆಕೊಟ್ಟು, ಮೂಲ ಸಾಹಿತ್ಯಕ್ಕೂ ಕುಂದುಂಟಾಗದಂತೆ ರಚಿತವಾದ ಅದ್ಭುತ ಹಾಡು. ಸಾಲು-ಸಾಲಿಗೂ ಒತ್ತಕ್ಷರಗಳಿಂದ ಕೂಡಿದ ಹಾಡಿಗೆ ಜೀವ ತುಂಬಿದ್ದು – ಎಸ್ಪಿಬಿ. ಹಾಡಿನ ಲಿಂಕ್ ಇಲ್ಲಿದೆ ನೋಡಿ

ಮೂಲ (ರುದ್ರವೀಣ) ಹಾಡಿನ ಲಿಂಕ್ ಇಲ್ಲಿದೆ ;

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply