ಎಲ್ಲಾ ದೆವ್ವದ ಕಥೆಗಳಂತೆ ಇಲ್ಲಿಯೂ ಕತ್ತಲ ರಸ್ತೆಯಿದೆ. ಒಂಟಿ ಪಯಣವಿದೆ. ಆ ಪಯಣದಲ್ಲಿ ಜೊತೆಯಾಗುವ ಒಂದು ಹೆಣ್ಣಿದೆ. ಆ ಹೆಣ್ಣು ಯಾರ ಕಣ್ಣಿಗೂ ಕಾಣದೇ ನಮ್ಮ ನಾಯಕನ ಕಣ್ಣಿಗೆ ಮಾತ್ರ ಕಾಣುತ್ತಿರುತ್ತಾಳೆ. ಪಕ್ಕಾ ಅವಳೇ ದೆವ್ವ ಅಂತ ನಮಗೆ ಅರ್ಥವಾಗುತ್ತದೆ.
ಆದರೆ ನಾಯಕನಿಗೆ ಅರ್ಥವಾಗೋಲ್ಲ.
ಇಬ್ಬರೂ ಕಾರಿನಲ್ಲಿ ಪಯಣಿಸುತ್ತಿರುವಾಗ ಆ ಹುಡುಗಿ ದಾರಿ ಸವೆಯಲು ತಮ್ಮೂರಿನ ಕಥೆ ಹೇಳತೊಡಗುತ್ತಾಳೆ. ಆಕೆಯ ಊರಿನ ಹೆಸರೇ “ಪನ್ಮಂಡ್ರಿ ಕ್ರಾಸ್”.
ಆ ಊರಿನಲ್ಲಿ ಒಬ್ಬಳು ಮಾಟಗಾತಿ ಇರುತ್ತಾಳೆ. ಆಕೆಗೆ ಆ ಊರಿನ ಸೂರ್ಯ ಎಂಬುವವನ ಮೇಲೆ ಮನಸ್ಸಾಗುತ್ತದೆ. ಆದರೆ ಸೂರ್ಯ ಬೇರೆ ಯಾರನ್ನೋ ಪ್ರೀತಿಸುತ್ತಿರುತ್ತಾನೆ. ಆ ವಿಷಯ ಗೊತ್ತಾಗಿ ಮಾಟಗಾತಿ ಸೂರ್ಯ ಪ್ರೀತಿಸುತ್ತಿದ್ದ ಹುಡುಗಿಯನ್ನು ಮಾಟ ಮಾಡಿ ಸಾಯಿಸುತ್ತಾಳೆ. ಆಗ ಊರಿನ ಜನ ಮಾಟಗಾತಿಯನ್ನು ಜೀವಂತ ಸುಟ್ಟುಬಿಡುತ್ತಾರೆ.
ಸತ್ತರೂ ಸಹ ಆ ಮಾಟಗಾತಿ ದೆವ್ವವಾಗಿ ಅಡ್ಡಾಡುತ್ತಿರುತ್ತಾಳೆ. ತಮ್ಮೂರಿನ ಬಳಿ ಬರುವ ಅಂದವಾದ ಹುಡುಗರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತಿರುತ್ತಾಳೆ. ಈಗ ನಮ್ಮ ನಾಯಕ ಕಾರಿನಲ್ಲಿ ಅದೇ ಊರಿನ ಸಮೀಪವಿದ್ದಾನೆ. ಏಕೆಂದರೆ ಡ್ರಾಪ್ ಕೇಳಿದ ಆ ಹುಡುಗಿಯನ್ನು ಅದೇ ಊರಿಗೆ ಡ್ರಾಪ್ ಮಾಡಬೇಕಾಗಿದೆ.
ಈಗ ದೆವ್ವ ಬೇರೆಲ್ಲೋ ಇಲ್ಲ…. ಅವನ ಪಕ್ಕವೇ ಇದೆ!!
ಮುಂದೇನು??
ಶಾರ್ಟ್ ಮೂವಿ ನೋಡಿ ತಿಳಿದುಕೊಳ್ಳಿ. ಕೇವಲ ಹದಿನಾಲ್ಕು ನಿಮಿಷದ ಈ ಕಿರುಚಿತ್ರ ಒಮ್ಮೆ ಹೆದರಿಸಿ ಮತ್ತೊಮ್ಮೆ ಗಾಬರಿಯಿಂದ ಬೆಚ್ಚುವಂತೆ ಮಾಡುತ್ತದೆ. ಶಕ್ತಿಗಳಲ್ಲಿ ಎರಡು ರೀತಿ ಇವೆ. ಒಳ್ಳೆಯ ಶಕ್ತಿ ಮತ್ತು ದುಷ್ಟ ಶಕ್ತಿ. ಅವರೆಡರ ವ್ಯತ್ಯಾಸವನ್ನು ಈ ಶಾರ್ಟ್ ಮೂವಿ ಅರ್ಥ ಮಾಡಿಸುತ್ತದೆ.
Maybe good horror story.review is good.