ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ “ರಾಜರತ್ನ” ಸಿನಿಮಾದ ಚಿತ್ರೀಕರಣ ಮುಗಿದುದೆ, ಎಂಟ್ರೆ ಹಾಡಿನ ಚಿತ್ರೀಕರಣಕ್ಕಾಗಿ ತೆಲುಗಿನ ಡಾನ್ಸ್ ಮಾಸ್ಟರ್ ಆದ “ಜಾನಿ” ಅವರು ಅಪ್ಪುಗಾಗಿ ಬೊಂಬಾಟ್ ಸ್ಟೇಪ್ಸ್ ನಿಯೋಜಿಸಿದ್ದಾರೆ.
ಮತ್ತೊಂದೆಡೆ ಚೇತನ್ ಕುಮಾರ್ ನಿರ್ದೇಶನದ “ಜೆಮ್ಸ್” ಸಿನಿಮಾದ ಕೆಲಸ ಕೂಡ ಭರ್ಜರಿಯಾಗಿ ಸಾಗಿದೆ, ಸಿನಿಮಾಗಾಗಿ ಪುನೀತ್ ಅವರು ಹೊಸ ಲುಕ್ಕನ್ನ ತಾಳಲಿದ್ದು ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಇದಾಗಿರುತ್ತೆ.
ಇವಿಷ್ಟು ಪುನೀತ್ ಅಭಿನದ ಸಿನಿಮಾಗಳ ಸುದ್ದಿ, ಇತ್ತ ಅವ್ರು ನಿರ್ಮಿಸುತ್ತಿರುವ ಸಿನಿಮಾಗಳ ಪಟ್ಟಿಯು ದೊಡ್ಡದಾಗಿಯೇ ಇವೆ. “PRK PRODUCTIONS” ಹಸರಿನಲ್ಲಿ ಪತ್ನಿ ಅಶ್ವಿನಿ ಒಟ್ಟಿಗೆ ಈಗಾಗಲೇ 4 ಸಿನಿಮಾಗಳು ಬಂದಿವೆ. ನವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತ ಹೊಸ ಕಥೆಗಳಿಗೆ ವೇದಿಕೆ ನೀಡುವ ಕೆಲಸ ಮಾಡ್ತಿದ್ದಾರೆ ಪುನೀತ್. ದಿಯ ಸಿನಿಮಾದ ನಾಯಕ “ಪೃಥಿ ಅಂಬರ್“,ಮುಂದಿನ ನಿಲ್ದಾಣ ಖ್ಯಾತಿಯ “ವಿರಾಟ್” ಇಬ್ಬರಿಗೂ ಪ್ರತ್ಯೇಕವಾಗಿ 2 ಸಿನಿಮಾಗಳನ್ನ ನಿರ್ಮಿಸುತ್ತಿದ್ದಾರೆ, ಒಟ್ಟಾರೆ ಪುನೀತ್ ಸ್ವಂತ ಬ್ಯಾನ್ನರ್ ಇಂದ ಇನ್ನು ಮುಂದೇ ವರ್ಷಕ್ಕೆ 3 ಸಿನಿಮಾಗಳನ್ನ ತಯಾರು ಮಾಡಿ ಜನರಿಗೆ ಪ್ರಸ್ತುತ ಪಡಿಸುವುದು ಅವರ ಲಕ್ಷ್ಯವಾಗಿದೆ.