ಪಾರ್ವತಿ ಕಲ್ಯಾಣ

ಜಯಹೇ ಶಂಕರ ಜಯಾಭಯಂಕರ (ಪಿ. ಲೀಲಾ)
ಗಂಗೆಯ ಧರಿಸಿದನಾ ತಾನು ಚಂದಿರನ ಮುಡಿದವನ (ಎಸ್ ಜಾನಕಿ) ಬಾಲೆಯ ಮೊರೆಯಿದು (ಎಸ್ ಜಾನಕಿ)
ನವ ವಸಂತ ನಗುತ ಬಂದ (ಎಲ್ ಆರ್ ಈಶ್ವರಿ)
ವನಮಾಲೀ ವೈಕುಂಠಪತೀ (ಪಿಬಿಎಸ್ ಬೆಂಗಳೂರು ಲತಾ ), ಜಯಾ ಶಂಕರ ಭಾವಗೋಚರ (ಬಿ ಕೆ ಸುಮಿತ್ರಾ)
ಶ್ಯಾಮಾ ಮೋಹನಾ ಮಾಧವಾ (ಪಿಬಿಎಸ್)
ವಿಶ್ವ ವಂದ್ಯ ವಿಘ್ನೇಶ ಗಣೇಶ (ಪಿಬಿಎಸ್ ಖೋರಸ್)

ಇವುಗಳಲ್ಲಿ ಕೆಲವು ಹಾಡುಗಳನ್ನಾದರೂ ಕೇಳಿಯೇ ಇರುತ್ತೀರಿ. (1967)
ಶಿವನ(ರಾಜ್‍ಕುಮಾರ್) ಪತ್ನಿ ಸತಿ (ಚಂದ್ರಕಲಾ) ಪತಿಯ ಸಲಹೆಯನ್ನು ಧಿಕ್ಕರಿಸಿ, ತವರಿಗೆ ಹೋಗಿ ತಂದೆ ದಕ್ಷನಿಂದ ಅಪಮಾನಿತಳಾಗಿ ಯಜ್ಞ ಕುಂಡದಲ್ಲಿ ಬಿದ್ದು ಅಸು ನೀಗುತ್ತಾಳೆ. ಮತ್ತೆ ಹಿಮವಂತ ಮತ್ತು ಮೈನಾದೇವಿಯ (ಜಯಶ್ರೀ) ಪುತ್ರಿ ಪಾರ್ವತಿಯಾಗಿ ಜನಿಸಿ ಶಿವನಿಗಾಗಿ ತಪಸ್ಸು ಆರಂಭಿಸುತ್ತಾಳೆ. ನಾರದನ (ಉದಯಕುಮಾರ್) ಚಿತಾವಣೆಯಿಂದ ಶಿವ ಪಾರ್ವತಿಯನ್ನು ಪರೀಕ್ಷಿಸಲು ಬರುತ್ತಾನೆ…


ತನ್ನ ತಂದೆಯನ್ನು ಕೊಂದ ದೇವೇಂದ್ರನ ಕೊಲ್ಲಲು ತಾರಕಾಸುರ (ಎಂ ಪಿ ಶಂಕರ್) ತಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆಯುತ್ತಾನೆ. ಸತಿ ವಿಯೋಗದಿಂದ ತಪವನ್ನು ಆಚರಿಸುತ್ತಿರುವ ಶಿವಪುತ್ರನಿಂದ ತನಗೆ ಸಾವು ಬರಲಿ ಎನ್ನುತ್ತಾನೆ. ಅವನ ಸಾವಿಗಾಗಿ ಈಗ ತುರ್ತಾಗಿ ಶಿವ ಪಾರ್ವತಿ ಮದುವೆ ಆಗಬೇಕು. ಅದಕ್ಕೆ ನೂರೆಂಟು ವಿಘ್ನ. ಗಣೇಶನ ಸೃಷ್ಟಿ ಕೂಡ ಈ ಚಿತ್ರದಲ್ಲಿದೆ.

ತಾರಕನ ತಾಯಿ ಕಾಳಿಂದಿ (ಪಂಢರೀಬಾಯಿ) ಮೌನವ್ರತ ಆಚರಿಸುತ್ತಿರುವವರೆಗೂ ತಾರಕನಿಗೆ ಶ್ರೀರಕ್ಷೆ. ಅದರ ಭಂಗಕ್ಕೆ ದೇವೇಂದ್ರ ಸಿದ್ಧನಾಗುತ್ತಾನೆ. ಏಕೆಂದರೆ ಅವನು ತಾರಕನಿಂದಾಗಿ ಪದವಿಭ್ರಷ್ಟನಾಗಿ ನಾಗಲೋಕದಲ್ಲಿ ಅವಿತು ಕುಳಿತಿರುತ್ತಾನೆ.

ರಾಜ್‌ಕುಮಾರ್ ಶಿವನಾಗಿ ಕೋಪ ಪ್ರೇಮ ಎಲ್ಲವನ್ನೂ ಚಂದವಾಗಿ ತೋರಿಸಿದ್ದಾರೆ. ಒಬ್ಬ ರಾಜನಂತೆ, ಮುದುಕನಂತೆ ಕೂಡ ಕಾಣಿಸಿಕೊಂಡಿದ್ದಾರೆ.
ಶಚೀದೇವಿಯಾಗಿ ಆರ್ ಟಿ ರಮಾ… ನಂದಿಯಾಗಿ ದಿನೇಶ್ ಗುರುತು ಸಿಕ್ಕಿದರು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply