ಸದಭಿರುಚಿಯ ಸಾಂಸಾರಿಕ ಚಿತ್ರಗಳ ಕೃಷಿಕ ಎಂದೇ ನಮ್ಮ “ಪವರ ಸ್ಟಾರ್ ಪುನೀತ್ ರಾಜ್ಕುಮಾರ್” ಅವರನ್ನ ಕೆರೆಯಬಹದು. ಅಪ್ಪುವಿನ ಬಹುಪಾಲು ಸಿನಿಮಾಗಳು ಸಂಬಂಧಗಳ ಶ್ರೇಷ್ಠತೆಯನ್ನು ಸಾರುತ್ತದೆ.ಇವರು ನಟಿಸಿದ ಸಿನಿಮಗಳಷ್ಟೇ ಅಲ್ಲದೆ, ಖುದ್ದು ನಿರ್ಮಿಸಿರುವ ಕವಲುದಾರಿ, ಮಾಯಾಬಜಾರ ಸಿನಿಮಾಗಳಲ್ಲೂ ಅದು ಬಿಂಬಿತವಾಗಿದೆ..
ಪುನೀತ್ ರಾಜ್ಕುಮರರ ಸಂಸ್ಥೆಯಿಂದ ಇನ್ನೊಂದು ಕೌಟುಂಬಿಕ ಸಿನಿಮಾ ತಯಾರಾಗ್ತಾ ಇದೆ . ಚಿತ್ರಕ್ಕೆ “ಫ್ಯಾಮಿಲಿ ಮಾನ” ಅನ್ನೊ ಶೀರ್ಷಿಕೆ ಇಡಲಾಗಿದೆ. ಕಾಮಿಡಿ ಮಾತ್ತು ಎಮೋಷನಲ್ ಟಚ್ ಇರುವ ಸಿನಿಮಾ ಇದಾಗಿರುತ್ತೆ.
ಸಂಕಷ್ಟ ಕರ ಗಣಪತಿ ಚಿತ್ರದ ಖ್ಯಾತಿಯ ನಟ “ಲಿಖಿತ್ ಶೆಟ್ಟಿ” ಮತ್ತು ನಿರ್ದೇಶಕ “ಅರ್ಜುನ್ ಕುಮಾರ್” ಮತ್ತೊಮ್ಮೆ ಒಂದಾಗಿದ್ದಾರೆ,ಇನ್ನು ಈ ಚಿತ್ರಕ್ಕೆ ನಾಯಕಿಯಾಗಿ ಲವ್ ಮಾಕ್ಟೈಲ್ ಖ್ಯಾತಿಯ “ಅಮೃತ ಐಯ್ಯಂಗಾರ್” ಆಯ್ಕೆಯಾಗಿದ್ದಾರೆ.
ಸದ್ಯ ಕೊರೊನ ಸೋಂಕಿನಿಂದ ಉಂಟಾಗಿರುವ ತುರ್ತು ಪರಿಸ್ಥಿತಿ ಕಳೆದ ನಂತರ ಚಿತ್ರವು ಸೆಟ್ಟೇರಲಿದೆ ಎಂಬ ಮಾಹಿತಿ ಹೊರಬಂದಿದೆ.