ಪುಷ್ಪ
ತಾರಾಗಣ:- ಅಲ್ಲು ಅರ್ಜುನ್, ಧನಂಜಯ್, ರಶ್ಮಿಕಾ ಮಂದಣ್ಣ, ಸುನಿಲ್, ಅನಸೂಯ ಭಾರದ್ವಾಜ್, ಫಾಹದ್ ಫಾಸಿಲ್,
ನಿರ್ದೇಶನ:- ಸುಕುಮಾರ.
ಸಂಗೀತ:- ದೇವಿ ಶ್ರೀ ಪ್ರಸಾದ್.
ನಿರ್ಮಾಣ:- ಮೈತ್ರಿ ಫಿಲ್ಮ್ಸ್.
ದೊಡ್ಡ ಹೀರೋಗಳ ಸಿನಿಮಾ ಅಂದ್ರೆ ಅದರಲ್ಲಿ ಕೆಲವು ಅಬ್ಬರ ಸಹಜದ ಮಾತು, ಆದ್ರೆ ಕಥೆಗೆ ಒತ್ತು ಕೊಡದೆ , ಉದ್ದೇಶ ಪೂರಕವಾಗಿ ಹೀರೊ ವೈಭವೀಕರ್ಣ ಮಾಡುತ್ತ, ಅತಿರೇಕದ ಸನ್ನಿವೇಶಗಳನ್ನ ಹುಟ್ಟುಹಾಕಿದ ಕಾರಣ ಪ್ರೇಕ್ಷಕನಿಗೆ ವಾಕರಿಕೆ ಬರೋದು ಖಚಿತ. ಸರಳವಾಗಿ ಹೇಳಬಲ್ಲ ಸಂಧರ್ಭವನ್ನ, ವಿಷಯವನ್ನು ರಬ್ಬರ್ ತರ 3 ಘಂಟೆಗಳ ಕಾಲ ಎಳೆದು ವಿಳಂಬಕ್ಕೆ ಉದಾಹರಣೆಯಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬೆಳೆಯುವ, ಬೆಲೆ ಬಾಳುವ ರಕ್ತ ಚಂದನ ಮರವನ್ನ ಕಡೆದು ಕಳ್ಳ ಸಾಗಾಣಿಕೆ ಮಾಡುವ ದೊಡ್ಡ “ಕಾಡು ಕಳ್ಳರ” ಕಥೆ ಈ ಸಿನಿಮಾದು. ಮರ ಕಡೆಯುವ ಸಾಮನ್ಯ ಕೂಲಿಯಾಗಿ ಬರುವ ಪುಷ್ಪ (ಅಲ್ಲು ಅರ್ಜುನ್) ರಕ್ತ ಚಂದನ ಮರದ ಕಳ್ಳ ಸಾಗಾಣಿಕೆ ಸಾಮ್ರಾಜ್ಯಕ್ಕೆ ದೊರೆಯಾಗುತ್ತಾನೆ. ಇಲ್ಲಿ ಹಲವು ದೊಡ್ಡ ಘಟಾನು ಘಟಿ ತಲೆಗಳನ್ನ ಉರುಳಿಸುತ್ತಾ ಅದೇ ಸ್ವಯಂ ಶ್ಲಾಘನೀಯ ಸಾಲುಗಳನ್ನು ಚೀರುತ್ತಾನೆ. ನಿರ್ದೇಶಕ ಸುಕುಮಾರ ಕಥಾವಸ್ತು ಆಯ್ಕೆ ಪ್ರಕ್ರಿಯೆಯಲ್ಲಿ ಸೋತಿದ್ದರು, ಚಿತ್ರದ ಕೆಲವು ಪ್ರಸಂಗಗಳನ್ನ ಅದ್ಭುತವಾಗಿ ಹೆಣೆದಿದ್ದು ಬಿಡಿಯಾದ ಮನೋರಂಜನೆ ನೀಡ್ತಾರೆ. ಅಭಿಮಾನಿಗಳಿಗೆ ಇಶ್ಟ ಆಗೋ ಹಾಗೆ ಅಲ್ಲೂ ಅರ್ಜುನ್ ಎಂದಿನಂತೆ ಕುಣಿದು ಫೈಟ್ ಮಾಡಿದ್ದಾರೆ. ಇನ್ನುಳಿದಂತೆ ಕನ್ನಡದ ಡಾಲಿ ಧನಂಜಯ್, ತೆಲುಗಿನ ಹಾಸ್ಯ ನಟ ಸುನಿಲ್ ಮತ್ತು ಫಾಹದ್ ಫಾಸಿಲ್ ಅವರವರ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾಸ್ ಹಾಡುಗಳಿಗೆ ಸೈ , ಹಳ್ಳಿ ಸೊಗಡಿನ ಸುವ್ವಿ ರಾಗಕ್ಕೂ ಜೈ ಅನ್ನೋದನ್ನ ನಿರೂಪಿಸಿದ್ದಾರೆ. ಒಟ್ಟಾರೆಯಾಗಿ ಪುಷ್ಪಾ ಸಿನಿಮಾ ನಿರೀಕ್ಷೆಯುಳ್ಳ ನೋಡುಗನಿಗೆ ಹತಾಶ ಮಾಡೋದು ನಿಜ. ” ಈ ಸಿನಿಮಾ ಹೋಮದಲ್ಲಿ ಅಗ್ನಿಯಿದೆ – ಭಕ್ತಿಯಿಲ್ಲ”
chitrodyam.com Rating : 5/10