ಕಳೆದ ವಾರದಿಂದ ಒಂದರ ಹಿಂದೆ ಮತ್ತೊಂದು ಹೊಸ ಪೋಸ್ಟರ್ ಗಳು ಬಿಡುಗಡೆಯಾಗ್ತಾ ಇವೆ.ಇನ್ನು 2 ತಿಂಗಳಲ್ಲಿ ಸುಮಾರು 10 ದೊಡ್ಡ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.
ಶಿವಣ್ಣ ಅಭಿನಯದ ಹರ್ಷ ಮಾಸ್ಟರ್ ನಿರ್ದೇಶನದ ಭಜರಂಗಿ-2 ಸಿನಿಮಾದ ಮೋಷನ್ ಪೋಸ್ಟರ್ ಹೊರಗೆ ಬಿಟ್ಟಿದ್ದಾರೆ, ಸಿನಿಮಾದಲ್ಲಿನ ಖಳನಾಯಕನ ಪರಿಚಯ ಮಾಡಿಸಿದ್ದಾರೆ,ಭಜರಂಗಿಯಲ್ಲಿನ ಖಳನಾಯಕ ಸೌರವ್ ಲೋಕಿ ಈಗ “ಜಗರ್ವ“. ರೌದ್ರಾಕಾರವಾಗಿ ಭೀಕರವಾಗಿ ಉಪಟಳ ನೀಡೋ ದುಷ್ಟನಿಗೆ ಕಣ್ಣಿನ ನೋಟದಿಂದಲೇ ಅವನ ದೇಹ ಆತ್ಮವನ್ನ ಸುಟ್ಟು ಹಾಕುವ ಹಾಗೆ ಶಿವಣ್ಣ ನಿಟ್ಟಿಸಿ ನೋಡಿದ್ದರೆ. ಅದಕ್ಕೆ ಅರ್ಜುನ್ ಜನ್ಯಾರ ಸಂಗೀತ್ ಸಂಯೋಜನೆ ಇನ್ನಷ್ಟು ಬೆರಗು ತಂದಿದೆ. ಸಿನಿಮಾದ ಟೈಟಲ್ ಟ್ರಾಕ್ ಕೂಡ ರಿಲೀಸ್ ಮಾಡಿ ರಾಮ ಭಂಟ ವೀರಾಂಜನೇಯ ಪರಮಭಕ್ತರಿಗೆ ಪರಮಾತ್ಮನನ್ನು ಹಾಡಿ ಹೊಗಳಿ ಸ್ಮರಿಸಲು ಮತ್ತೊಂದು ಅಮೋಘವಾದ ಹಾಡು ಸಿಕ್ತು.
ಫೆಬ್ರವರಿ 16ನೆ ತಾರೀಕು ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟು ಹಬ್ಬದಂದು ರಾಬರ್ಟ್ ಸಿನಿಮಾದವರು ಅವರಿಗೆ ಉಡುಗೊರೆಯಾಗಿ ಸ್ಪೆಷಲ್ ಟೀಸರ್ ರಿಲೀಸ್ ಮಾಡಲಿರುವ ಸುದ್ದಿ ತಿಳಿದ ತಕ್ಷಣ ಅಭಿಮಾನಗಳಲ್ಲಿ ಎಲ್ಲಿಲ್ಲದ ಸಂತಸ ಬಂದಿದೆ. ಸಿನಿಮಾದಲ್ಲಿ ವಿಲ್ಲನ್ ಪಾತ್ರ ಮಾಡುತ್ತಿರುವ ತೇಲುಗಿನ ಖ್ಯಾತ ನಟ ಜಗಪತಿ ಬಾಬು ಅವರ ಚಿತ್ರವೊಂದನ್ನ ಪ್ರಕಟಿಸಿದ್ದಾರೆ. ಚದುರಂಗದ ಹಲಗೆ ಮುಂದೆ ಕುಳಿತು ಏನೋ ದೊಡ್ಡದಾಗೆ ಸಂಚು ಹೂಡುವ ಯೋಚನೆಯಲ್ಲಿ ಮುಳುಗಿದಂತೆ ಕಾಣುತ್ತಾರೆ…
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಲವು ಪೋಸ್ಟರ್ ಗಳು ಫಸ್ಟ್ ಲುಕ್ ಗಳು ಬಿಡುಗಡೆಯಾಗಳಿದ್ದು ಸಾಂಡಲವುಡ್ ನಲ್ಲಿ ಇನ್ನು ಮುಂದೆ ಸಿನಿಮಾ ಹಬ್ಬ ಅಬ್ಬರ ಜೋರಾಗಿರಲಿದೆ