ಸಹೋದರರ ಕುರಿತಾಗಿ ಚಿತ್ರರಂಗದಲ್ಲಿ ಸಾಕಷ್ಟು ಗೀತೆಗಳು ಬಂದಿವೆ, ಒಂದಕ್ಕಿಂತ ಒಂದು ವಿಭಿನ್ನ ಆದರೂ ಸೋದರ ವಾತ್ಸಲ್ಯ ತೋರಿಸುವ ಗೀತೆ, ಸಿಪಾಯಿ ಚಿತ್ರದ “ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ, ದಿಗ್ಗಜರು ಚಿತ್ರದ “ಕುಚಿಕು ಕುಚಿಕು ನಾವು ಚಡ್ಡಿ ದೋಸ್ತಿ ಕಣೊ ಕುಚಿಕು “, ಆಪ್ತಮಿತ್ರ ಚಿತ್ರದ “ಕಾಲವನ್ನು ತಡೆಯೋರು ಯಾರೂ ಇಲ್ಲ “, ರಾಬಟ್೯ ಚಿತ್ರದ “ಎ ಬ್ರದರ್ ಫ್ರಂ ಅನದರ್ ಮದರ್ “, ಶುಭಮಂಗಳ ಚಿತ್ರದ “ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ “.
ಚಿತ್ರರಂಗದಲ್ಲಿ ಎಲ್ಲಾ ಕಲಾವಿದರು ಒಂದೇ, ಸ್ಟಾರ್ ವಾರ್ ಬೇಡ, ಮುನಿಸ್ಥಾಪ ಇರಬಾರದು, ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿ ಮಾಡಿಕೊಂಡು ಪವಿತ್ರ ಸ್ನೇಹವನ್ನು ಕಳೆದುಕೊಳ್ಳಬಾರದು, ಚಿತ್ರರಂಗದಲ್ಲಿ ಕುಚಿಕು ಅಂದ್ರೇನೆ ರೆಬಲ್ ಸ್ಟಾರ್ ಅಂಬರೀಷ್ ಮತ್ತು ವಿಷ್ಣುವರ್ಧನ್, ನಿಜ ಜೀವನದಲ್ಲಿಯೂ ಸ್ನೇಹಿತರೇ, ಅಣ್ಣಾವೃ ಮತ್ತು ತಮ್ಮ ವರದಪ್ಪ ರವರೂ ಅಷ್ಟೇ ಉತ್ತಮ ಸ್ನೇಹ ವಾತ್ಸಲ್ಯಕೈ ಎಗ್ಸಾಂಪಲ್. ಸುದೀಪ್ ಮತ್ತು ದಶ೯ನ್ ವಿಷ್ಣುವರ್ಧನ್ ಮತ್ತು ಅಂಬರೀಷ್ ಇದ್ದ ಹಾಗೆ, ಶಿವಣ್ಣ, ಪುನೀತ್ ರಾಜ್, ರಾಘವೇಂದ್ರ ರಾಜ್ ಇವರೂ ಸಹ ಒಳ್ಳೆಯ ಸ್ನೇಹಿತರು, ಯುವ ರಾಜ್, ವಿನಯ್ ರಾಜ್, ಧೀರನ್ ರಾಮ್ ಕುಮಾರ್ ಎಲ್ಲರೂ ಸಂಪಾದಿಸಿರುವ ಆಸ್ತಿ ಸಹೋದರ ಸಂಬಂಧ.
ಸಹೋದರ ಸಂಬಂಧ ಜೊತೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲ ಇನ್ನೊಬ್ಬರ ಬಗ್ಗೆ ಯಶಸ್ಸನ್ನು, ಒಳ್ಳೆಯದನ್ನು, ಕಷ್ಟ ಸುಖದಲ್ಲಿ ಬಾಗಿಯಾಲು ಬಯಸುವವರು , ಒಳ್ಳೆಯ ಗುಣ ಇರುವವರು ಸಹೋದರ ಬಾಂಧವ್ಯ ಬೆಸೆಯುವರು.
ಎಲ್ಲೇ ಇದ್ದರೂ ಮಿತ್ರರ ಬಗ್ಗೆ ಸದಾ ಆಶೀವಾ೯ದ ಮಾಡುವವರು.
ಭಾಗ್ಯ ಎನ್ನಲೇ ಪುಣ್ಯ ಎನ್ನಲೇ ನಿನ್ನನ್ನು ಕಂಡು ಬೆರಗಾದೆನು.. 🙏