‘ಪ್ರೇಮದ ಕಾಣಿಕೆ’

ಡಾ. ರಾಜ್‌ಕುಮಾರ್ ಹೊಸ ತರಹದ ಪಾತ್ರದಲ್ಲಿ. ನಾಯಕಿ ಪಾತ್ರಧಾರಿಯನ್ನು ಹೆದರಿಸಿ ಅಂಕೆಯಲ್ಲಿ ಇಟ್ಟುಕೊಳ್ಳುವ ಯತ್ನದ ನೇಪಥ್ಯ ನಮಗೆ ನಂತರ ತಿಳಿಯುತ್ತದೆ. ತನ್ನ ಮುದ್ದು ಮಗಳನ್ನು, ತಾನು ಜೈಲು ಸೇರಿ ನೇಣಿಗೆ ಹೋದರೂ, ಇವಳು ನೋಡಿಕೊಳ್ಳಬಲ್ಲಳೆಂದು ನಂಬಿಕೆ ಅವನಿಗೆ ಬೇಕಿತ್ತು.

ಏಕೆಂದರೆ ರಾಜ್ ಪಾತ್ರ ಒಬ್ಬ ಕೊಲೆಗಾರ (ಹಾಗೆಂದು ತಿಳಿದಿರುತ್ತಾನೆ ನಾಯಕ)
ಒಂದು ಫ್ಲ್ಯಾಶ್‌ಬ್ಯಾಕ್. ಶಿಮ್ಲಾದಲ್ಲಿ ನಾಯಕ ಅವನ ಪತ್ನಿ ಖುಷಿ ಆಗಿರುವಾಗ ವಜ್ರಮುನಿ ಆಗಮನ. ಮಗುವನ್ನು ಎತ್ತಿ ಎಸೆದು (ಮಗು ನಮ್ಮ ಕನ್ನಡ ಚಿತ್ರರಂಗದ ಅಪ್ಪು! ಎರಡು ವರ್ಷ ಇರಬಹುದು. ಆಗ ಮಾಸ್ಟರ್ ಲೋಹಿತ್) ಪತ್ನಿಯನ್ನು ರೇಪ್ ಮಾಡುತ್ತಾನೆ. ಅವಳು ಸಾಯುತ್ತಾಳೆ. ನಾಯಕ ಓಡುವ ರೈಲಿನಲ್ಲಿ ವಜ್ರಮುನಿಯ ಕೊಲೆ ಮಾಡುತ್ತಾನೆ (ಎಂದುಕೊಂಡಿರುತ್ತಾನೆ). ಕೊನೆಗೆ ನಿಜವಾದ ಕೊಲೆಗಾರನ ತಪ್ಪೊಪ್ಪಿಗೆ.
ಶೋಲೆ, ದೀವಾರ್ ಚಿತ್ರಗಳ ಚಿತ್ರನಾಟಕ ಬರೆದ ಸಲೀಂ – ಜಾವೇದ್ ಪ್ರೇಮದ ಕಾಣಿಕೆ ಚಿತ್ರಕಥೆ ಬರೆದಿದ್ದಾರೆ.

ಉಪೇಂದ್ರ ಕುಮಾರ್ ಅವರ ನಾ… ಬಿಡಲಾರೆ ಎಂದೂ ನಿನ್ನ, ನಗುವೆಯಾ ಹೆಣ್ಣೆ ನಾನು ಜಾರಿ… ರಾಜ್ ವಾಣಿ ಜಯರಾಂ ಮತ್ತು ರಾಜ್ ಎಚ್ ಪಿ ಗೀತಾ ಯುಗಳ ಗೀತೆಗಳು… ಪಿಬಿ ಅವರ ಚಿನ್ನ ಎಂದೂ ನಗುತಿರು ಜಾನಕಿಯಮ್ಮ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಎಲ್ಲ ಹಾಡುಗಳೂ ಜನಪ್ರಿಯ.

ಇದು ಯಾರು ಬರೆದ ಕಥೆಯೋ ಮತ್ತು ಬಾನಿಗೊಂದು ಎಲ್ಲೆ ಎಲ್ಲಿದೆ ರಾಜ್ ಮಧುರ ಕಂಠದ ಪ್ಯಾಥೋಸ್ ಮತ್ತು ತತ್ವ ಗೀತೆಗಳು.
ಆರತಿ ಮತ್ತು ರಾಜ್ ಬೆಕ್ಕು ಇಲಿ ಆಟ ನೋಡಲು ಚಂದ. ಜಯಮಾಲ ಪತ್ನಿಯ ಪಾತ್ರದಲ್ಲಿ ಎರಡು ಡ್ಯೂಯೆಟ್.

ಒಟ್ಟಿನಲ್ಲಿ ಮನರಂಜನೆ ಸಸ್ಪೆನ್ಸ್ ಎಲ್ಲವೂ ಚೆನ್ನ.
ಅಂದ ಹಾಗೆ ರಾಜ್ ಬಬ್ಬರ್ ಸುಲಕ್ಷಣ ಪಂಡಿತ್ ತಾರಾಗಣದಲ್ಲಿ ಕೆಲವು ವರ್ಷಗಳ ನಂತರ ರಾಝ್ ಎಂದು ಹಿಂದಿಯಲ್ಲಿ ಹೊರತಂದರು ಈ ಪ್ರೇಮದ ಕಾಣಿಕೆ ಚಿತ್ರವನ್ನು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply