ಚಲನಚಿತ್ರ ನಿರ್ದೇಶಕರು ಮತ್ತು ಕನ್ನಡ ಚಿತ್ರರಂಗದಲ್ಲಿ ಬರಹಗಾರರು ಆಗಿ 23 ಕನ್ನಡ ಜೊತೆಗೆ 1 ತಮಿಳು ಚಿತ್ರ ನಿದೇ೯ಶನ ಮಾಡಿ ಜನಪ್ರಿಯರಾದರು ದಿ. ಎಸ್ ಸಿದ್ದಲಿಂಗಯ್ಯ, ಇವರ ಜನುಮ ದಿನದ ನೆನಪಿಗಾಗಿ ಒಂದು ಸಣ್ಣ ಲೇಖನ..
1936 ತುಮಕೂರಿನ ಶಿರಾ ತಾಲ್ಲೂಕಿನ ತರೂರು ಎಂಬ ಗ್ರಾಮದಲ್ಲಿ ಜನನ, ತಂದೆ ಲಿಂಗಣ್ಣ ತಾಯಿ ಸಿದ್ದಬಸಮ್ಮ, ತಾತ ಹಾಗೂ ಸೋದರ ಮಾವರಿಂದ ಪ್ರಭಾವಕ್ಕೊಳಗಾಗಿ ಕಲೆಯಲ್ಲಿ ಆಸಕ್ತಿ ಬೆಳೆದು ಮೈಸೂರಿನ ನವಜ್ಯೋತಿ ಸ್ಟೂಡಿಯೋ ನಲ್ಲಿ ಸ್ಪಾಟ್ ಬಾಯ್ /ಫ್ಲೋರ್ ಬಾಯ್ ಸೇರಿಕೊಂಡು ನಂತರ ಶಂಕರ್ ಸಿಂಗ್ ಜೊತೆ ಸಹಾಯಕ ನಿದೇ೯ಶಕರಾಗಿ ಕಿರಿಯ ನಟರಾಗಿ ಬಿ ವಿಠಲಾಚಾಯ೯ರ ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅಲ್ಲೇ ಹಾಸ್ಯನಟ ಬಾಲಕೃಷ್ಣ ಅವರ ಪ್ರೋತ್ಸಾಹದಿಂದ ದ್ವಾಕೀ೯ಶ್ ನಿಮಾ೯ಣದಲ್ಲಿ ನಿದೇ೯ಶಕರಾಗಿ ಅವರ ಮೊದಲ ಚಿತ್ರ ಮೇಯರ್ ಮುತ್ತಣ್ಣ ತಯಾರಾಯಿತು.
ಇವರ ನಿದೇ೯ಶನ ಶೈಲಿ ಎಲ್ಲರಿಗೂ ಮೆಚ್ಚುಗೆಯಾಗೋದಕ್ಕೆ ಮೂಲ ಕಾರಣ ಕಥೆಯ ಆಯ್ಕೆ, ಹೆಚ್ಚಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುವರು, ಅದಕ್ಕೆ ಇವರನ್ನು “ಸಮಾಜ ನಿದೇ೯ಶಕರು ” ಆಂತ ಕರೀತಾರೆ.
ಮೊದಲು ಇವರು ನಿದೇ೯ಶಿಸಿದ ಚಿತ್ರ ಡಾ ರಾಜ್ ಕುಮಾರ್ ಅಭಿನಯದ “ಮೇಯರ್ ಮುತ್ತಣ್ಣ ” ಹಳ್ಳಿ ಹುಡುಗ ಓದು ಬರಹ ಕಲಿಯದವ ಪಟ್ಟಣಕ್ಕೆ ಬಂದು ಪಡುವ ಪಾಡು, ಅನ್ನಕ್ಕಾಗಿ ಹೋರಾಟ, ಏನೂ ಇಲ್ಲದವರು ಕೊನೆಯಲ್ಲಿ ಆ ಪಟ್ಟಣದ ಮೇಯರ್ ಆಗೋ ಸಂದಭ೯ ಬಹಳ ಚೆನ್ನಾಗಿ ನಿದೇ೯ಶನ,
“ಹಳ್ಳಿಯಾದರೇನು ಶಿವ ಡಿಲ್ಲಿಯಾದರೇನು ಶಿವ ಜನರೆಲ್ಲ ಒಂದೇ ಶಿವ “.
ಅಣ್ಣಾವ್ರ ಜೊತೆ ನಿದೇ೯ಶನ ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು “ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು ” ಜನಪ್ರಿಯ ಗೀತೆ.
ನಂತರ ಬಂದ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದದ್ದು ಮನೆಯ ಯಜಮಾನ ತೀರಿಕೊಂಡಾಗ ಮನೆ ನಿಭಾಯಿಸಲು ಸಂಬಂಧಿಯಾದ ಯುವ ತರುಣ ತನ್ನ ಆಸೆ ಆಕಾಂಕ್ಷೆಗಳನ್ನು ದೂರವಿಟ್ಟು ಕುಟುಂಬದ ಜವಾಬ್ದಾರಿಯನ್ನು ಹೊತ್ತು ತನ್ನ ಅಕ್ಕನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಎಲ್ಲರ ಹಾಗೆ ಬದುಕಬೇಕೆಂದು ತೋರಿಸಿ ಹಳ್ಳಿಯಲ್ಲಿ ಇದ್ದು ಏನಾದರೂ ಸಾಧಿಸಬೇಕೆಂಬ ಛಲ ಇದ್ದರೆ ಜೀವನದಲ್ಲಿ ಮುಂದೆ ಬರುವುದು ಸಾಮಾನ್ಯ ಮನುಷ್ಯ ಕೊನೆಯಲ್ಲಿ ಬಂಗಾರದ ಮನುಷ್ಯ ರಾಗಿ ತೋರಿಸುವ ಚಿತ್ರ, ಕೊನೇ ದೃಶ್ಯ ಎಂಥವರಿಗೂ ಕಣ್ಣೀರು ಬರಿಸುವುದು.
ಸತತ 2 ವಷ೯ ಪ್ರದಶ೯ನ. ಅಧ್ಬುತ ದಾಖಲೆ ಬರೆದಿದೆ.
ದೂರದ ಬೆಟ್ಟ ಚಿತ್ರದ “ಪ್ರೀತಿನೆ ಆ ದ್ಯಾವೃ ತಂದ ಆಸ್ತಿ ” ಜನಪ್ರಿಯ.
ಸಮಾಜದಲ್ಲಿ ಜಾತಿ ಭೇದ ಭಾವ ಇದ್ದರೆ ಏನೆಲ್ಲಾ ಆಗುತ್ತೆ ಜಾತಿ ಅಂತ ಹೊಡೆದಾಡುವುದರಿಂದ ನಮಗೆ ಏನೂ ಸಿಗದು ಎಂಬ ಸಾರಾಂಶ ‘ಭೂತಯ್ಯನ ಮಗ ಅಯ್ಯು “ಚಿತ್ರ, ಎಂ ಪಿ ಶಂಕರ್ ನಟನೆ ಪ್ರಶಂಸನೀಯ.
ನಾರದ ವಿಜಯ ಹಾಸ್ಯ ಭರಿತ ಚಿತ್ರ ಅನಂತ್ ನಾಗ್ ನಟನೆ ಮೆಚ್ಚುಗೆ.
ಬಿಳಿಗಿರಿಯ ಬನದಲ್ಲಿ, ಪಾರಿಜಾತ, ಸಂಭವಾಮಿ ಯುಗೇ ಯುಗೇ, ಬಾರೇ ನನ್ನ ಮುದ್ದಿನ ರಾಣಿ, ಪ್ರೇಮ ಪ್ರೇಮ ಪ್ರೇಮ ಇತರೆ ಚಿತ್ರಗಳು.
ಮಡದಿ ಧನಲಕ್ಷ್ಮಿ, ಮಕ್ಕಳು ದಿ. ಮುರಳಿ (ಚಿತ್ರ ನಟ). ಸುರೇಶ್.
ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರೇಮ ಪವ೯ ಚಿತ್ರದ ಮೂಲಕ ನಾಯಕ ನಟರಾಗಿ ಪರಿಚಯಿಸಿದರು, ಅಜೇಯ ಇತರ ಚಿತ್ರಗಳಲ್ಲಿ ಮಗ ನಟನೆ ನಂತರ ತಮಿಳು ಚಿತ್ರರಂಗದಲ್ಲಿ ಮುರಳಿ ರವರು ನೆಲೆಯೂರಿದರು.
ಮುರಳಿ ಮಗ ಅದವ೯ ತಮಿಳಿನಲ್ಲಿ ನಾಯಕ ನಟನಾಗಿ ಜನಮನ್ನಣೆ.
ಇವರ ಚಿತ್ರರಂಗದ ಯಶಸ್ಸಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಲಭಿಸಿದೆ.
ಸಿದ್ದಲಿಂಗಯ್ಯ ರವರು ಚಿತ್ರೀಕರಿಸಿದ ಹಾಡು “ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾಗ೯ವು ಕೆಚ್ಚೆದೆ ಇರಬೇಕು’ ಎಂಬ ಸಾಲುಗಳು ನಮ್ಮ ಜೀವನಕ್ಕೆ ಹತ್ತಿರವಾಗಿವೆ.
ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿದ ಹಿರಿಯ ನಿದೇ೯ಶಕರನ್ನು ಇಂದು ನಾವು ಸ್ಮರಿಸೋಣ 🙏