ಕಿರಿಕ್ ಪಾರ್ಟಿ ಸಿನಿಮಾದಿಂದ ಖ್ಯಾತಿ ಪಡೆದ ನಟ “ಅರವಿಂದ ಐಯ್ಯರ್” ನಟಿಸಿ, ಕಾರ್ತಿಕ್ಸಿರಗುರ್ ನಿರ್ದೇಶಿಸಿರುವ “ಭೀಮ ಸೇನ ನಳ ಮಹಾರಾಜ” ಅನ್ನುವ ಶೀರ್ಷಿಕ ಅಡಿಯಲ್ಲಿ ಹೊಸ ಚಿತ್ರ ತಾಯಾರಾಗಿದೆ. ಚಿತ್ರಕ್ಕೇ ರಕ್ಷಿತ್ ಶೆಟ್ಟಿ ಮತ್ತು ಯುವ ನಿರ್ಮಾಪಕ ಪುಷ್ಕ ರ್ಮಲ್ಲಿಕಾರ್ಜುನಯ್ಯ ನಿರ್ಮಾಣದ ಹೊಣೆ ಹೊತ್ತಿರುವರು.
ಈ ಸಿನಿಮಾದಲ್ಲಿ ನಾಯಾಕ(ಅರವಿಂದ್ಐಯ್ಯರ್) ಬಾಣಸಿಗನಾಗಿ ಕಾಣುವರು ಅಂದರೆ ಅಡುಗೆ ಭಟ್ಟನ ಪಾತ್ರ. ಮಹಾಭಾರತದಲ್ಲಿ ಬರುವ ಭೀಮನು ಅದ್ಭುತವಾಗಿ ಅಡುಗೆ ಮಾಡುತ್ತಿದ್ದನಂತೆ, ಅಂತೆಯೇ ನಳ ಮಹಾರಾಜನು ಒಬ್ಬ ಪಾಕಪ್ರವೀಣ. ಅದರ ಸಲುವಾಗಿ ಕಥೆಯಲ್ಲಿ ಬರುವ ಪಾತ್ರಕ್ಕೆ ಹೋಲುವಂತೆ ಈ ಟೈಟಲ್ಇಡಲಾಗಿದೆ.
ನಾಯಕಿಯಾಗಿ “ಆರೋಹಿ ನಾರಾಯಣ್” ನಟಿಸಲಿದ್ದಾರೆ.
ಚಿತ್ರದ ರೀ ರೆಕಾರ್ಡಿಂಗ್ ಕೂಡ ಮುಗಿದಿದ್ದು ಸಂಗೀತ ನಿರ್ದೇಶಕ ಚರಣ ರಾಜ್ ಅವರ ಕೈ ಚಳಕದಿಂದನಳನಪಾಕಕ್ಕೆ ಇಂಗು-ತೆಂಗಿನ ಒಗ್ಗರಣೆ ಹಾಕಿ ಪಾಕವನ್ನ ನೋಡಲು ಆಕರ್ಷಕವಾಗಿ, ಸವಿಯಲುರುಚಿಕರವಾಗಿ ಮಾಡಿದ್ದಾರೆ ಎನ್ನುವುದು ಸಿನಿಮಾದ ತುಣುಕುಗಳನ್ನನೋಡಿದವರ ಅಭಿಪ್ರಾಯ.
“ಭೀಮ ಸೇನ ನಳ ಮಹಾರಾಜ” ಸಿನಿಮಾ ತಂಡಕ್ಕೆ ಶುಭವಾಗಲಿ, ಚಿತ್ರವು ಯಶಸ್ವಿಯಾಗಲಿ ಎಂದು ಚಿತ್ರೋದ್ಯಮ. ಕಾಂಹರಸುತ್ತದೆ