ಬಾಲಿವುಡ್ ಚಿತ್ರರಂಗದಲ್ಲಿ ವಿಜ್ರಂಭಿಸುತ್ತಿರುವ ಕನ್ನಡ ಕುವರ ನಟ ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ ಭಾರತ ಚಿತ್ರರಂಗದ ನಟ, ನಿರ್ಮಾಪಕ ಮತ್ತು ಉದ್ಯಮಿಯಾಗಿಯು ಪ್ರಸಿದ್ಧಿ ಪಡೆದಿದ್ದು ಮೂಲತಃ ನಮ್ಮ ಕರ್ನಾಟಕ ರಾಜ್ಯದ ಮಂಗಳೂರಿನವರು ಆಗಿರುವರು. ಅಲ್ಲದೆ ಕನ್ನಡ,  ತಮಿಳು, ಮಲಯಾಳಂ ಮತ್ತು ಇಂಗ್ಲೀಷ್   ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಇವರು ಪಂಚ ಭಾಷಾ ನಟರು ಮತ್ತು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವವರು ಎಂದು ಹೇಳಿದರೆ ತಪ್ಪಾಗಲಾರದು.  

ಅಗಸ್ಟ್ ೧೧, ೧೯೬೧ ರಂದು ನಮ್ಮ ಕರ್ನಾಟಕ ರಾಜ್ಯದ ಮಂಗಳೂರು ಜಿಲ್ಲೆಯ ಮುಲ್ಕಿ ಯಲ್ಲಿ ತುಳು ಬಂಟ ಕುಟುಂಬದಲ್ಲಿ ಜನಿಸಿದ ಇವರ ಮೊದಲ ಹೆಸರು ಸುನಿಲ್. ಇವರ ತಂದೆಯ ಹೆಸರು ವೀರಪ್ಪ ಶೆಟ್ಟಿ, ಹೋಟೆಲ್ ಉದ್ದಮಿಯಾಗಿದ್ದರು. ಇವರು ೧೯೯೨ ರಲ್ಲಿ ನಟಿ ದಿವ್ಯ ಭಾರತಿ ಜೊತೆ ಬಲ್ವಾನ್ ಎಂಬ ಸಾಹಸ ಪ್ರಧಾನ ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ಇವರ ಮೊದಲ ಚಿತ್ರದಲ್ಲಿ ಸಾಹಸ ದೃಶ್ಯಗಳು ಎಷ್ಟು ಅಪಾಯಕಾರಿಯಿತ್ತೆಂದರೆ  ಸಾಹಸ ದೃಶ್ಯಗಳಿಂದಲೇ ಈ ಚಿತ್ರ ಬಾಲಿವುಡ್ ಬಾಕ್ಸಾಫೀಸಿನಲ್ಲಿ ಅತ್ಯ ಅದ್ಭುತ ಯಶಸ್ಸನ್ನು ಪಡೆಯಿತು.

ನಂತರ ದಿಲ್ ವಾಲೆ, ಅಂತ್, ಮೊಹ್ರಾ, ವಕ್ತ್ ಹಮಾರಾ ಹೇ, ರಕ್ಷಕ್, ಕೃಷ್ಣ,ಸಪೂತ್, ಭಾಯಿ,ವಿನಾಷಕ್, ಹಮ್ ಹೇ ಬೇಮಿಸಾಲ್,ಕಾಲಾ, ಶೂಟ್ ಔಟ್ ಎಟ್ ಲೋಖಂಡವಾಲಾ ಇತ್ಯಾದಿ ಚಿತ್ರ ಸೇರಿ ನಟಿಸಿದ ಸಾಹಸ ಪ್ರಧಾನ ಚಿತ್ರಗಳಿಗೆ ಸೀಮಿತವಾಗಿರಲಿಲ್ಲ. ದ್ವೀ ಪಾತ್ರದಲ್ಲಿ ನಟಿಸಿದ ಗೋಪಿ ಕಿಷನ್, ಆವಾರಾ ಪಾಗಲ್ ದಿವಾನಾ, ದಿವಾನಾ ಹುಯೇ ಪಾಗಲ್,ಹೇರಾ ಫೇರಿ, ಫಿರ್ ಹೇರಾ ಫೇರಿ,ಯೇ ತೇರಾ ಘರ್,ಮೇರಾ ಘರ್ ದಂತಹ ಅನೇಕ ಹಾಸ್ಯ ಭರಿತ ಚಿತ್ರಗಳಲ್ಲಿ ನಟಿಸಿ ಹಾಸ್ಯ ಪಾತ್ರಗಳಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೆ ಮೇಹೂನಾ,ದಡ್ಕನ್,ಎ ಜೆಂಟಲ್ ಮೆನ್,ಖೇಲ್ ಮತ್ತು ಇತ್ತೀಚಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ ದರ್ಬಾರ್ ನಲ್ಲಿ ಕೂಡ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು  ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಕಳೆದ ವರ್ಷ ಕಿಚ್ಚ ಸುದೀಪ್ ಅಭಿನಯದ ಕನ್ನಡ ಚಿತ್ರ ಪೈಲ್ವಾನ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಇವರು ತಮ್ಮ ಪಾಪಕಾರ್ನ್ ಮೋಷನ್ ಪಿಕ್ಚರ್ ಲಾಂಛನದ ಅಡಿಯಲ್ಲಿ ಖೇಲ್, ರಕ್ತ್ ಮತ್ತು ಭಾಗಂ ಭಾಗ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪದಲ್ಲಿ ಕೂಡ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ರೀತಿಯಾಗಿ ಇಪ್ಪತ್ತೆಂಟು ವರ್ಷಗಳ ಚಿತ್ರ ರಂಗದ ಜೀವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿರುವ ಇವರು ಸಹರಾ ವಾಹಿನಿಯಲ್ಲಿ ಬಿಗ್ ಲೂಸರ್ ಜೀತೆಗಾ ಮತ್ತು ಟೀವಿಯಲ್ಲಿ ಅಸ್ಲಿ ಚಾಂಪಿಯನ್ ಹೇ ದಮ್? ಎನ್ನುವ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಮಾಡಿದ್ದಾರೆ. ಅಲ್ಲದೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಮುಂಬಯಿ ಹೀರೋಸ್ ತಂಡದ ನಾಯಕರಾಗಿದ್ದಾರೆ.

೨೦೧೩ ವರೆಗೂ ಚಿತ್ರ ರಂಗದಲ್ಲಿ  ಸುನಿಲ್ ಶೆಟ್ಟಿ ಎಂದೇ ಪ್ರಸಿದ್ಧಿ ಪಡೆದಿದ್ದು ೨೦೧೪ ರಲ್ಲಿ ಸಂಖ್ಯಾಶಾಸ್ತ್ರದ ಕಾರಣದಿಂದ  ಸುನೀಲ್ ಶೆಟ್ಟಿ ಎಂದು ಬದಲಾಯಿಸಿಕೊಂಡರು. ಖಾಸಗಿ ಜೀವನದಲ್ಲಿ ಸರಳತೆಗೆ ಮಹತ್ವ ಕೊಡುವ ಇವರು ಕಿಕ್ ಬಾಕ್ಸಿಂಗ್ ನಲ್ಲಿ ಬ್ಲ್ಯಾಕ್ ಬೆಲ್ಟ್ ನ್ನು ಪಡೆದಿದ್ದಾರೆ ಹಾಗೂ  ಉಡುಪಿಯ ಖಾದ್ಯವನ್ನು ನೀಡುವ ಸ್ವಂತ ಹೋಟೆಲ್ ಉದ್ಯಮಿಯು ಆಗಿರುವರು.

೧೯೯೧ ನೇ ಇಸ್ವಿಯಲ್ಲಿ ಮನ ಶೆಟ್ಟಿಯನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಮಗಳು  ಅಥಿಯಾ ಶೆಟ್ಟಿ ತಮ್ಮ ಚಿತ್ರ ರಂಗದ ಪಯಣವನ್ನು ಬಾಲಿವುಡ್ ಚಿತ್ರರಂಗದ ಹಿರಿಯ ನಟ ಆದಿತ್ಯ ಪಂಚೋಲಿಯ ಮಗ ಸೂರಜ್ ಪಂಚೋಲಿಯ ಜೊತೆ ನಟಿಸಿದ ೨೦೧೫ ರಲ್ಲಿ ತೆರೆ ಕಂಡ ಹೀರೋ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದ್ಧು ಮಗ ಅಹನ್ ಶೆಟ್ಟಿ ಬಾಲಿವುಡ್ ಚಿತ್ರರಂಗದ ಪಾದಾರ್ಪಣೆಯ ಸಿದ್ಧತೆಯಲ್ಲಿದ್ದಾರೆ. ಇವರ ಪತ್ನಿ ಮನ ಶೆಟ್ಟಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಎನ್.ಜಿ.ಒ. ಸಂಸ್ಥೆಯನ್ನು ನಡೆಸುತ್ತಿದ್ದಾರೆ

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply