ಬಾಲಿವುಡ್ ಚಿತ್ರರಂಗದ ಹಾಸ್ಯ ಚಕ್ರವರ್ತಿ ನಟ ಜಾನಿ ಲಿವರ್

 ( ಮುಂದುವರೆದ ಭಾಗ )

ನಂತರ ಆರ್ಕೆಸ್ಟ್ರಾ ಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಕೊಡಲು ಪ್ರಾರಂಭಿಸಿದ ಇವರು ಕ್ರಮೇಣ ಆನಂದ್ ಜಿ,ಕಲ್ಯಾಣ್ ಜಿ ಜೊತೆ ಸೇರಿಕೊಂಡು ವಿಶ್ವಾದ್ಯಂತ ಸಂಚರಿಸಿ ಹಲವಾರು ಶೋಗಳನ್ನು ನಡೆಸಿಕೊಟ್ಟರು. ಅದರಲ್ಲೂ ೧೯೮೨ ರಲ್ಲಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಎಂದು ಪ್ರಸಿದ್ಧಿ ಪಡೆದಿರುವ ನಟ ಅಮಿತಾಬ್ ಬಚ್ಚನ್ ಜೊತೆ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಇವರ ವೃತ್ತಿ ಬದುಕಿಗೆ ಒಂದು ಮಹತ್ತರ ತಿರುವು ಪಡೆಯಲು ಕಾರಣವಾಯಿತು.

ಒಂದು ದಿನ ಹೀಗೆಯೇ ಅನಿರೀಕ್ಷಿತವಾಗಿ ನಟ ಸುನೀಲ್ ದತ್ ರನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿತು. ಇವರ ಪ್ರತಿಭೆಯನ್ನು ಗುರುತಿಸಿದ ನಟ ಸುನೀಲ್ ದತ್ ತಮ್ಮ ಚಿತ್ರದಲ್ಲಿ ನಟಿಸಲು ಒಂದು ಪಾತ್ರವನ್ನು ಕೊಟ್ಟರು. ಈ ರೀತಿಯಾಗಿ ನಟ ಸುನೀಲ್ ದತ್ ರ ಕೃಪೆಯಿಂದ ದರ್ದ್ ಕಾ ರಿಶ್ತಾ ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದರು. ಆದರೆ ಈ ಚಿತ್ರದ ಮೂಲಕ ತಮ್ಮ ಬಣ್ಣದ ಬದುಕನ್ನು ಪ್ರಾರಂಭಿಸಿದ ಇವರು ಅನೇಕ ಚಿತ್ರಗಳಲ್ಲಿ ನಟಿಸಿದರೂ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ.

ಅದೇ ಸಮಯದಲ್ಲಿ ಬಾಲಿವುಡ್ ಚಿತ್ರರಂಗದ ಬಾದಶಾಹ ಶಾರುಖ್ ಖಾನ್ ನಟನೆಯ ಬಾಜಿಗರ್ ಚಿತ್ರದಲ್ಲಿ ನಿರ್ವಹಿಸಿದ ಮರೆಗುಳಿ ಸರ್ವೆಂಟ್ ಪಾತ್ರದಿಂದ ಒಂದೇ ರಾತ್ರಿಯಲ್ಲಿ ಜನ ಪ್ರಿಯ ಹಾಸ್ಯ ನಟರಾಗಿ ಗುರ್ತಿಸಿಕೊಂಡರು. ಅಲ್ಲದೇ ಚಿತ್ರವು ಕೂಡ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆಯುವುದರೊಂದಿಗೆ ಇವರು ಕೂಡ ಮೊದಲ ಬಾರಿಗೆ ಯಶಸ್ಸನ್ನು ಕಂಡರು. ನಂತರದ  ಚಿತ್ರಗಳ ಮೂಲಕ ಆರಂಭವಾದ ಇವರ ಹಾಸ್ಯದ ರಸ ದೌತಣ ಇಂದಿಗೂ ನಿಂತಿಲ್ಲ.

ಇವರು ನಟಿಸಿದ  ಇಂಟರ್ನ್ಯಾಷನಲ್ ಕಿಲಾಡಿ ಮತ್ತು ಫಿರ್ ಬಿ ದಿಲ್ ಹೈ ಹಿಂದೂಸ್ಥಾನಿ ಚಿತ್ರದಲ್ಲಿ ಟೀವಿ ರಿಪೋರ್ಟರ್, ಹಲೋ ಬ್ರದರ್ ಚಿತ್ರದಲ್ಲಿ ಕಾಮಿಡಿ ಪೋಲೀಸ್, ಟೋಟಲ್ ಧಮಾಲ್ ನಲ್ಲಿ ಹೆಲಿಕ್ಯಾಪ್ಟರ್ ಪೈಲೆಟ್, ಗೋಲ್ ಮಾಲ್ ೩, ಫಿರ್ ಹೇರಾಫೇರಿ ಚಿತ್ರದಲ್ಲಿ ಕಾಮಿಡಿ ವಿಲನ್, ನಟ ಬಾಬಿ ಡಿಯೋಲ್ ನಟನೆ ಕರೀಬ್,ಬಾದಲ್,ಹೌಸ್ ಫುಲ್ ೪, ಕ್ರೋಧ್,ಸಪೂತ್, ಜೋರುಂ ಕಾ ಗುಲಾಮ್, ತೇಜಾಬ್, ಕಟ್ಟಾಮಿಟ್ಟ, ಔಜಾರ್, ಮೇಲಾ, ಕೋಯಿ ಮಿಲ್ ಗಯಾ,ಹಂಗಾಮಾ, ಬ್ಯಾಂಡ್ ಬಾಯ್, ಬಾದಶಾಹಾ, ಕರಣ ಅರ್ಜುನ್,ಜುಡ್ವಾ ೨, ದಿಲ್ ವಾಲೆ, ಮಶೀನ್,ಸಿಂಗ್ ಸಾಬ್ ದಿ ಗ್ರೇಟ್, ಲವ್ ಡೇ, ಹೌಸ್ ಫುಲ್ ೨, ಎಂಟರ್ಟೈನ್ಮೆಂಟ್, ಆವಾರಾ ಪಾಗಲ್ ದಿವಾನಾ, ದೀವಾನಾ ಹುಯೇ ಪಾಗಲ್, ಪ್ಲೇಯರ್ಸ್, ಯಾಮ್ಲಾ ಪಾಗ್ಲಾ ದಿವಾನಾ, ಯಾಮ್ಲಾ ಪಾಗ್ಲಾ ದಿವಾನಾ ೨, ಮಸ್ತಿ ಎಕ್ಸ್ ಪ್ರೆಸ್, ಜಿದ್ದಿ ಪಡೋಸಾನ್, ಹಮಾರಾ ದಿಲ್ ಆಫ್ ಕೆ ಪಾಸ್ ಹೇ, ಬಾಸ್, ಸೇರಿ ಸುಮಾರು ೩೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರರಂಗದಲ್ಲಿ ಇವರ ಕ್ರೇಜ್ ಹೇಗಿದೆ ಗೊತ್ತಾ?

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply