ಬುಲ್ಲೆಟ್ ಪ್ರಕಾಶ್ ಇನ್ನಿಲ್ಲ!

ಹಾಸ್ಯ ಕಲಾವಿದ “ಬುಲ್ಲೆಟ್ ಪ್ರಕಾಶ್”  ಗ್ಯಾಸ್ಟ್ರಿಕ್ ಸಮಸ್ಯೆ ಇಂದ ಒಂದೆರೆಡು ವಾರಗಳ ಕಾಲದಿಂದ ಬಳಲುತ್ತಿದ್ದರು. ಕಳೆದ ಶುಕ್ರವಾರ ಹೊಟ್ಟೆ ನೋವು ತೀವ್ರವಾದ ಕಾರಣ ಬೆಂಗಳೂರಿನ ಶಿವಾಜಿ ನಗರದ,ಫೋರ್ಟಿಸ್ ಆಸ್ಪತ್ರೆಗೆ ಅವರನ್ನು ಅಡ್ಮಿಟ್ ಮಾಡಲಾಯಿತು.

ಮೊದಲಿಗೆ ಕೇವಲ ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ ಅಂತ ಅಂದುಕೊಂಡಿದ್ದರು, ಅಲ್ಲಿ ಹೋದ ಮೇಲೆ ವೈದ್ಯರು ಸಂಪೂರ್ಣ ತಪಾಸಣೆ ಮಾಡಿದ ಬಳಿಕ ತಿಳಿದಿದೆ ಅವರ ಕಿಡ್ನಿ ಮತ್ತು ಲಿವರ್ನಲ್ಲಿ ಸಮಸ್ಯೆ ಇದ್ದು ಅದು ಕಡೆ ಹಂತಕ್ಕೆ ತಲುಪಿದೆ ಉಸಿರಾಟದ ತೊಂದರೆ ಕೂಡ ಇತ್ತು.ಅವರ ಆರೋಗ್ಯದ ಪರಿಸ್ಥಿತಿ ಈ ಮಟ್ಟಿಗೆ ಚಿಂತಾ ಜನಕವಾಗಿದ್ದು ಬುಲ್ಲೆಟ್ ಪ್ರಕಾಶ್ ರನ್ನ “ವೆಂಟಿಲೇಟರ್”ನಲ್ಲಿ(ಕೃತಕ ಉಸಿರಾಟದ ವ್ಯವಸ್ಥೆ) ಇರಿಸಿದ್ದರು. ವೈದ್ಯರ ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕರಾಣ ಇಂದು ಸುಮಾರು 4:30 ಸಮಯಕ್ಕೆ ಕಡೆ ಉಸಿರೆಳೆದರು.

ಮೊನ್ನೆ ಏಪ್ರಿಲ್ 2ಕ್ಕೆ 44 ವಸಂತಕ್ಕೆ ಕಾಲಿಟ್ಟಿರುವ ಬುಲ್ಲೆಟ್ ಪ್ರಕಾಶ್.500 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು,ರವಿಚಂದ್ರನ್,ಶಿವರಾಜಕುಮಾರ್, ಸುದೀಪ್,ದರ್ಶನ್ ಮತ್ತು ಪುನೀತ್ ಸೇರಿದಂತೆ ಎಲ್ಲ ನಾಯಕರ ಜೊತೆಗೆ ಕಾಮಿಡಿ ಸಾತ್ ಕೊಟ್ಟ ಕಲಾ ಜೀವ ಇದು.ಸಾಧು ಕೋಕಿಲ ಮತ್ತು ರಂಗಾಯಣ ರಘು ಒಟ್ಟಿಗೆ 200ಕ್ಕಿಂತಲೂ ಅಧಿಕ ಚಿತ್ರಗಳಲ್ಲಿ ಅಭಿನಯ.ಇವರ ಹಾವಭಾವಗಳು ಇವರ ದೊಡ್ಡ ಶಕ್ತಿಯಾಗಿತ್ತು,ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ನಿಸ್ಸೀಮರು “ಬುಲ್ಲೆಟ್ ಪ್ರಕಾಶ್”. ಅವರೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಐತಲಕಡಿ” ಅನ್ನೋ ಸಿನಿಮಾ ನಿರ್ಮಿಸಿದ್ದರು. ಇನ್ನು ಮುಂದೆ ಅವರು ನೆನಪಷ್ಟೇ ಎಬುವುದು ಸಿನಿ ಪ್ರಿಯರಿಗೆ ಮತ್ತು ಅವರ ಗೆಳೆಯರಿಗೆ ನೋವಿನ ಸಂಗತಿ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇವೆ. …

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply