ಬೇಸಿಗೆಯಲ್ಲಿ ತ್ವಚೆಯ ಆರೈಕೆ – ಹೇಗೆ?

ಬೇಸಿಗೆ ಶುರು ಆಯ್ತು ಅಂದರೆ ಸಾಕು. ಸ್ಕಿನ್ ಟ್ಯಾನ್ ,ಸ್ಕಿನ್ ಬರ್ನ್ ಅಂತ ಹತ್ತಾರು ಸಮಸ್ಯೆ ಇದ್ದದ್ದೇ.

ನಾನು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಅಂತ ಯಾವ ಹೆಣ್ಣಿಗೆ ತಾನೇ ಇಷ್ಟ ಇರಲ್ಲ? ಪಾರ್ಲರ್ ಗೆ ಅಂತ ಹಣವನ್ನು ಖರ್ಚು ಮಾಡುವ ಬದಲು ನಮ್ಮ ಮನೆಯಲ್ಲೇ ಇರುವ ದಿನನಿತ್ಯ ಬಳಸುವ ಪದಾರ್ಥಗಳನ್ನು ಬಳಸಿ, ಸ್ವಾಭಾವಿಕವಾಗಿ ನಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನುವವರಿಗೆ ಇಲ್ಲಿದೆ ಟಿಪ್ಸ್ ನೋಡಿ:

ಮೊದಲಿಗೆ ಎಲ್ಲಾ ಹುಡುಗಿಯರ ಸಮಸ್ಯೆ ಎಂದರೆ ಬಿಸಿಲಲ್ಲಿ ಹೋಗಿ ಸ್ಕಿನ್ ಟ್ಯಾನ್ ಆಗಿದೆ ಅನ್ನುವುದು. ಅಂತಹವರಿಗೆ ಕೆಲವು ಸುಲಭ ಟಿಪ್ಸ್

 • ಅಕ್ಕಿ ಹಿಟ್ಟಿಗೆ ಸ್ವಲ್ಪ ಮೊಸರು ಅರಿಶಿನ ಮಿಕ್ಸ್ ಮಾಡಿ ಟ್ಯಾನ್ ಆಗಿರೋ ಕಡೆಗೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಲ್ಲಿ ತೊಳೆದರೆ ಟ್ಯಾನ್ ಕಡಿಮೆ ಆಗುತ್ತೆ. ಒಂದು ಸರಿ ಮಾಡಿ ಸುಮ್ಮನಾದ್ರೆ ಇದರ ಪ್ರಯೋಜನ ಕಡಿಮೆ. ವಾರದಲ್ಲಿ 2 ರಿಂದ 3 ಸರಿ ನಿರಂತರವಾಗಿ ಈ ರೀತಿ ಮಾಡೋದರಿಂದ ಸ್ಕಿನ್ ಟ್ಯಾನ್ ಅನ್ನೋದು ಕ್ರಮೇಣ ಕಡಿಮೆಯಾಗುತ್ತೆ.
 • ಇನ್ನು ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಖ ಎಣ್ಣೆ ಚರ್ಮ ಆಗ್ಬಿಡುತ್ತೆ. ಅದಕ್ಕೆ, ಕಡ್ಲೆ ಹಿಟ್ಟಿಂದ ಮುಖ ತೊಳುದ್ರೆ ಒಳ್ಳೆದು.
 • ಕಾಫಿ ಪೌಡರ್ ಎಲ್ಲಾರ ಮನೇಲೂ ಖಂಡಿತ ಇದ್ದೇ ಇರುತ್ತೆ. ಒಂದು ಟೀ ಸ್ಪೂನ್ ಕಾಫಿ ಪೌಡರ್ ಗೆ ಒಂದು ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ ಇಪ್ಪತ್ತು ನಿಮಿಷ ಬಿಟ್ಟು ತೊಳಿದ್ರೆ ಗ್ಲೊಯಿಂಗ್ ಫೇಸ್ ನಿಮ್ಮದಾಗುತ್ತೆ.

*ಪಪ್ಪಾಯ, ಮೊಸರು, ಜೇನುತುಪ್ಪ ಇಷ್ಟನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಹಾಕಿ ಇಪ್ಪತ್ತು ನಿಮಿಷ ಬಿಟ್ಟು ವಾಶ್ ಮಾಡಿ.

ಇನ್ನು ಬೇಸಿಗೆಲಿ ಕೂದಲನ್ನು ಸಹ ಕಾಪಡ್ಕೊಳ್ಬೇಕಾಗುತ್ತೆ.

ತಲೆ ಹೊಟ್ಟು ಆಗಿದೆ, ಕೂದಲು ತುಂಬಾ ಉದುರುತ್ತೆ, ಬಿಳಿ ಕೂದಲು ಆಗಿದೆ, ಕೂದಲು ಬೆಳೀತಾ ಇಲ್ಲ – ಹೀಗೆ ನಾನಾ ರೀತಿಯ ಸಮಸ್ಯೆ ಬೇಸಿಗೆಯಲ್ಲಿ ಇದ್ದದ್ದೇ. ಬಾಹ್ಯವಾಗಿ ಹೇಗೆ ಆರೈಕೆ ಮಾಡ್ತಿವೋ ಅದಕ್ಕಿಂತ ಮುಖ್ಯವಾಗಿ ಆಂತರಿಕವಾಗಿ ನಮ್ಮ ದೇಹವನ್ನು ಆರೈಕೆ ಮಾಡಿದ್ರೆ ನಮ್ಮ ಸೌಂದರ್ಯ ನ ದೀರ್ಘ ಕಾಲದವರೆಗೂ ಕಾಪಾಡಿಕೊಳ್ಳಬಹುದು.

ಇವೆಲ್ಲಕ್ಕಿಂತ ಮುಖ್ಯವಾಗಿ ನಾವು ತಿನ್ನೊ ಆಹಾರ ನಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತೆ.
ದೇಹದಲ್ಲಿ ವಿಟಮಿನ್ ಕೊರೆತೆಯಿಂದ ತ್ವಚೆ ಹಾಗೂ ಕೂದಲಿನ ಸಮಸ್ಯೆ ಉಂಟಾಗುತ್ತೆ. ಹಾಗಾಗಿ ಒಳ್ಳೆಯ ಆಹಾರ ಪದ್ದತಿ, ಹಣ್ಣು, ತರಕಾರಿ ಹೀಗೇ ಆದಷ್ಟು ಆರೋಗ್ಯಕರವಾದ ಪೌಷ್ಟಿಕ ಆಹಾರ ಸೇವಿಸಬೇಕು. ಎಲ್ಲಾದಕ್ಕಿಂತ ಮುಖ್ಯವಾಗಿ ಹೆಚ್ಚು ನೀರು ಕುಡಿಬೇಕು.

ಇನ್ನು ಕೂದಲಿನ ಸಮಸ್ಯೆಗೆ ಪರಿಹಾರ ಹೇಳೊದಾದ್ರೆ -ವಾರಕ್ಕೆ 3 ರಿಂದ 4 ದಿನ ಕೂದಲನ್ನು ತೊಳಿಬೇಕು.

 • ಮೆಂತೆನ ರಾತ್ರಿ ಇಡಿ ನೆನಸಿ ಮಾರನೇ ದಿನ ಬೆಳಿಗ್ಗೆ ಮೊಸರು ಹಾಕಿ ರುಬ್ಬಿ ತಲೆಗೆ ಹಚ್ಚೊದ್ರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆ ಆಗುತ್ತೆ.
 • ಬಿಳಿ ಕೂದಲಿಗೆ ರಾಸಾಯನಿಕ ಬಣ್ಣ ಹಚ್ಚುವ ಬದಲು ನೈಸರ್ಗಿಕ ವಾಗಿ ಸಿಗುವ ಮೆಹಂದಿ ಹಚ್ಚುವುದರಿಂದ ದೇಹದಲ್ಲಿ ಇರೋ ಉಷ್ಣ ಕಡಿಮೆ ಆಗಿ ದೇಹ ತಂಪಾಗಿರುತ್ತೆ. ಅಷ್ಟೇ ಅಲ್ಲ, ಬಿಳಿ ಕೂದಲು ಮುಚ್ಚುತ್ತೆ.
 • ತಪ್ಪದೇ ನೀವು ರೆಗ್ಯುಲರ್ ಆಗಿ ಬಳಸೋ ಎಣ್ಣೆನ ಸ್ನಾನಕ್ಕಿಂತ ಒಂದು ಗಂಟೆ ಮುಂಚೆ ತಲೆ ಕೂದಲಿಗೆ ಹಚ್ಚಿ ಸ್ನಾನ ಮಾಡಿ. ಎಣ್ಣೆ ಹಚ್ಚದೆ ತಲೆಗೆ ಸ್ನಾನ ಮಾಡೊದ್ರಿಂದ ಕೂದಲು ಒರಟಾಗುವುದಷ್ಟೇ ಅಲ್ಲದೆ ಹಾಗು ಕವಲು ಬರುತ್ತೆ.
 • ಇನ್ನು ಕೂದಲು ಬೇಗ ಉದ್ದ ಬೆಳಿಬೇಕು ಅಂದ್ರೆ ಈರುಳ್ಳಿ ರಸವನ್ನು ತಲೆ ಬುಡಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಈ ರೀತಿ ವಾರಕ್ಕೆ ಮೂರರಿಂದ ನಾಲ್ಕು ಸಲ ಮಾಡಿ.

ಬೇಸಿಗೆಯಲ್ಲಿ ಆರೋಗ್ಯ ಕಾಪಾಡೋಕೆ ಹಾಗೂ ಬಿಸಿಲಿನ ಬೇಗೆಗೆ ದೇಹವನ್ನು ತಂಪಾಗಿಡಲು –

 • ಅತಿ ಹೆಚ್ಚು ನೀರು ಕುಡಿಯಿರಿ.
 • ನಿಂಬೆ ಹಣ್ಣು, ಸೌತೆಕಾಯಿ ಗಳಂತಹ ಪದಾರ್ಥಗಳನ್ನು ಹೆಚ್ಚಾಗಿ ಬಳಸಿ.
 • ರಾಸಾಯನಿಕ ಪೇಯಗಳಿಂದ ದೂರವಿರಿ. ಆದಷ್ಟೂ ಹಣ್ಣು , ಹಣ್ಣಿನ ಜ್ಯೂಸ್, ಮಜ್ಜಿಗೆ ಹಾಗೂ ಹಸಿ ತರಕಾರಿ ಹೆಚ್ಚು ಬಳಸಿ.
 • ಬೆಳಿಗ್ಗೆ ಟೀ ಕಾಫಿ ಬದಲು ರಾಗಿ ಗಂಜಿಗೆ ಮಜ್ಜಿಗೆ ಸೇರಿಸಿ ಕುಡಿಯಿರಿ. ಇದು ನಿಮ್ಮ ದೇಹವನ್ನು ದಿನವಿಡೀ ತಂಪಾಗಿ ಇಡಲು ಸಹಾಯ ಮಾಡುತ್ತೆ ಜೊತೆಗೆ ಬೇಸಿಗೆ ಕಾಲಕ್ಕೆ ದೇಹಕ್ಕೆ ಅಗತ್ಯವಾಗಿ ಬೇಕಾದ ರೀತಿಯ ಶಕ್ತಿ ಕೂಡ ಸಿಗುತ್ತೆ.
 • ದಿನಕ್ಕೆ ಒಂದರ್ಧ ಗಂಟೆಯಾದರೂ ವಾಕ್ ಮಾಡಿ. ಯೋಗ, ಏರೋಬಿಕ್ಸ್ ಇನ್ನೂ ಉತ್ತಮ.
 • ಉಪ್ಪು, ಕಾರ , ಹೊರಗಿನ ತಿಂಡಿ, ಕುರುಕಲು ತಿಂಡಿಗಳಿಂದ ಆದಷ್ಟು ದೂರ ಇರಿ

ನೆನಪಿಡಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ‌. ರಾಸಾಯನಿಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರ ಇರಿ. ನೈಸರ್ಗಿಕವಾದ ಆಹಾರ ಪದಾರ್ಥಗಳು, ನೈಸರ್ಗಿಕ ಸೌಂದರ್ಯ ವರ್ಧಕಗಳನ್ನು ಬಳಸಿ. ಆರೋಗ್ಯವಾಗಿರಿ.

Asha Prasanna Shetty

Asha Prasanna Shetty

ಆಶಾ ಪ್ರಸನ್ನ ಶೆಟ್ಟಿ ತಂದೆ ಚಿಕ್ಕಣ್ಣ ತಾಯಿ ಹನುಮಂತಮ್ಮ. ಪತ್ರಿಕೋದ್ಯಮ ವಿದ್ಯಾರ್ಥಿನಿ ತುಮಕೂರಿನಲ್ಲಿ ವಾಸವಿದ್ದೇನೆ ಹವ್ಯಾಸಿ ಬರಹಗಾರ್ತಿ ಪತ್ರಿಕೋದ್ಯಮ ಕಲಿಯುತ್ತಿರುವಾಗಲೇ ವಿವಿಧ ಅಂಕಣಗಳಿಗೆ ಲೇಖನ ಬರೆದಿದ್ದೇನೆ.. ರಾಜಕೀಯದಲ್ಲಿ ಹೆ‍ಚ್ಚು ಆಸಕ್ತಿ ಬರೆರಿರುವ ಲೇಖನಗಳಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟದ್ದೆ ಹೆಚ್ಚು. ಬಿ.ಕಾಂ ಸಹ ಮುಗಿದಿದೆ,ಮೊದಲಿಂದಲು ಸಾಮಾಜಿಕ ಜಾಲತಾಣ, ಸಿನಿಮಾ ,ಹಾಗೂ ಪ್ಯಾಶನ್ ಬಗ್ಗೆ ಹೆಚ್ಚು ಆಸಕ್ತಿ ಇದ್ದುದ್ದರಿಂದ ಪತ್ರಿಕೋದ್ಯಮ ವಿಭಾಗಕ್ಕೆ ಸೇರಿದೆ. ಸದ್ಯ ಗೃಹಣಿಯಾಗಿದ್ದುಕೊಂಡು ಒಂದು ಸಣ್ಣದಾದ ಗೃಹ ಉದ್ಯಮ ನಡೆಸುತ್ತಿದ್ದೇನೆ.

Leave a Reply