ಬ್ರದರ್ ಫ್ರಂ ಅನದರ್ ಮದರ್ 💐💙🦚

ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸರ ಮುದ್ದಿನ ಮಗ ಲೈಫನ್ನು ಚಾಲೆಂಜಾಗಿ ತಗೊಂಡು ಹಲವಾರು ಕಷ್ಟಗಳನ್ನು ಅನುಭವಿಸಿ ಚಾಲೆಂಜಿಗೆ ಚಾಲೆಂಜ್ ಹಾಕಿ ಅಭಿಮಾನಿಗಳ ಹೃದಯ ಗೆದ್ದ ಪ್ರೀತಿಯ ದಾಸ, ಚಾಲೆಂಜಿಂಗ್ ಸ್ಟಾರ್ ದಶ೯ನ್ ರವರಿಗೆ ಜನುಮ ದಿನದ ಶುಭಾಶಯಗಳು 🌹

ಲೈಟ್ ಬಾಯ್ ನಿಂದ ಶುರುವಾದ ಸಿನಿಪಯಣ ಹಲವಾರು ಏಳು ಬೀಳುಗಳನ್ನು ದಾಟಿ ಅಭಿಮಾನಿಗಳ ಹೃದಯದಲ್ಲಿ ಮೆರೆಯುತ್ತಿರುವ ಪ್ರೀತಿಯ ಚಕ್ರವತಿ೯.

ಕನ್ನಡ ಚಿತ್ರರಂಗದ ಅಮಿತಾಬ್ ಬಚ್ಚನ್ ಹೈಟು, ಆರಡಿ ಕಟೌಟು, ಅಭಿಮಾನಿಗಳ ನಲ್ಮೆಯ ದಚ್ಚು.

ನೊಂದವರ ಬಾಳಿಗೆ ಬೆಳಕಾಗುವ, ಪ್ರೀತಿಯ ರೆಬಲ್ ಸ್ಟಾರ್ ಅಂಬಿರವರ ದತ್ತುಪುತ್ರ, ಕಣ೯ನ ಹಾದಿಯಲ್ಲೇ ಸಾಗುವ ಪ್ರೀತಿಯ ಯಜಮಾನ ಯಾರೇನೇ ಹೇಳಿದರೂ ತನ್ನ ಪಾಡಿಗೆ ಇರೋ ಒಂದು ಜೀವನವನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವುದು ಮತ್ತು ತನ್ನ ಮುದ್ದಾದ ಪ್ರಾಣಿಗಳ ಒಡೆಯ, ಕಾರ್ ರೇಸ್ ಎಂದರೆ ಬಲು ಪ್ರೀತಿ, ಸ್ನೇಹಕ್ಕೆ ಬೆಲೆಕೊಡುವ ಗುಣವಂತ ಈ ದಶ೯ನ. ಫೋಟೋಗ್ರಾಫಿ ಇವರ ಹವ್ಯಾಸದಲ್ಲೊಂದು, ವಿವಿಧ ಪ್ರಾಣಿ ಪಕ್ಷಿಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆಹಿಡಿತಾರೆ, ಡಿ ಬಾಸ್ ಅಂತ ಕರೆಯೋದು ಕಾರಣ ಡಿ ದಶ೯ನ್ ಅಂದ್ರೆ ಬಾಸ್ ಎಂಬಥ೯ ಡಿಕ್ಷನರಿಲೀ.. ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ಒಡೆಯ.

ದೇವರಮಗದಲ್ಲಿ ಸಣ್ಣ ಪಾತ್ರ ಶಿವಣ್ಣ ಮತ್ತು ಅಂಬರೀಷ್ ರವರ ಜೊತೆ, ಮೆಜೆಸ್ಟಿಕ್ ಚಿತ್ರದಲ್ಲಿ ಪೂಣ೯ ಪ್ರಮಾಣದ ನಾಯಕದ ಜೊತೆಗೆ ವಿಭಿನ್ನ ಅಭಿನಯ ಪ್ರೇಕ್ಷಕರ ಮನಗೆದ್ದರು, ತಾನು ಪ್ರೀತಿಸಿದ ಹುಡುಗಿಗೆ ತನ್ನ ಪ್ರೀತಿಯನ್ನು ಹೇಳಲಾಗದೆ ತೊಳಲಾಡಿದ ಮತ್ತು ರೌಡಿಸಂ ಕಥೆಯುಳ್ಳ ಪ್ರೇಮ್ ನಿದೇ೯ಶನದ ಚಿತ್ರ ಕರಿಯ, ಹಳ್ಳಿ ಹುಡುಗ ಗಾಯಕನಾಗುವ ಲಾಲಿಹಾಡು, ನಮ್ಮ ಪ್ರೀತಿಯ ರಾಮು, ಬುಲ್ ಬುಲ್, ಗಜ, ಸಾರಥಿ, ಕಲಾಸಿಪಾಳ್ಯ, ಅನಾಥರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಲಂಕೇಶ್ ಪತ್ರಿಕೆ, ಅಣ್ಣಾವೃ, ಶಾಸ್ತ್ರೀ, ಅಯ್ಯ, ಸ್ವಾಮಿ, ಸುಂಟರಗಾಳಿ ,ದತ್ತ, ಭೂಪತಿ, ಸ್ನೇಹನ ಪ್ರೀತಿನ, ಇಂದ್ರ, ನವಗ್ರಹ, ಯೋಧ, ಪೊಕಿ೯,ಬಾಸ್,ಪ್ರಿನ್ಸ್,ಚಿಂಗಾರಿ, ಅಂಬರೀಷ, ಮಿ. ಐರಾವತ, ಬೃಂದಾವನ, ವಿರಾಟ್, ಜಗ್ಗುದಾದ, ಚಕ್ರವರ್ತಿ, ತಾರಕ್, ಯಜಮಾನ ಇನ್ನೂ ಮುಂತಾದ ಹಲವು ಚಿತ್ರಗಳಲ್ಲಿ ನಟಿಸುತ್ತಾ ವಿಶಿಷ್ಟ ಸ್ಥಾನವನ್ನು ಪಡೆದವರು.

“ವಿಜಯಲಕ್ಷ್ಮಿ” ರವರನ್ನು ವಿವಾಹವಾಗಿ ಮುದ್ದಿನ ಮಗ ಮಿನಿ ದಶ೯ನ್ “ವಿನೀಷ್ “ರವರ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ, ಇವರ ಕುಟುಂಬ ಸದಾ ಹೀಗೆ ಇರಲಿ ಎನ್ನೋಣ 🌹

ಬ್ರದರ್ ಫ್ರಂ ಅನದರ್ ಮದರ್ 💐💙🦚
ಬ್ರದರ್ ಫ್ರಂ ಅನದರ್ ಮದರ್ 💐💙🦚

“ಯಾರೇ ಬಂದರೂ ಎದುರ್ಯಾರೆ ನಿಂತರೂ
ಪ್ರೀತಿ ಹಂಚುವ ಯಜಮಾನ
ಕೂಗಿ ಕೂಗಿ ಕೇಳುತೈತೆ
ಇಂದೂ ಝಮಾನ
ನಿಂತಾ ನೋಡು ಯಜಮಾನ “

“ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೇ ಏನು ಇಲ್ಲ
ನೀನೇಕೆ ನಾನಾದೆ ನಾನೇಕೆ ಹೀಗಾದೆ “

“ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗರ ತೇರು
ನಮದು ಬೆವರಿನ ಬಂಡಿ
ನಾವೇ ನರನಾಡಿ ರಾಜಧಾನಿಗೆ
ಅತಿರಥ ಮಹಾರಥ ಸಾರಥಿ “

“ನಿಲ್ಲೇ ನಿಲ್ಲೇ ಕಾವೇರಿ
ಬಿಟ್ಟು ಕೋಡೋದಿಲ್ಲ ಯಾಮಾರಿ
ನಾ ಒಳ್ಳೆ ಹುಡುಗ ಅಲ್ವ
ನಾ ನೋಡಕ್ ಚೆಂದಾಕಿಲ್ವ
ನನ್ ಪ್ರೀತಿ ಮಾಡಕಿಲ್ವ
ಬುಲ್ ಬುಲ್ ಮಾತಾಡಕಿಲ್ವ “

ಇವರ “ರಾಬಟ್೯” ಚಿತ್ರ ಬಿಡುಗಡೆಗೆ ಸಿಧ್ಧವಿದ್ದು ಹಾಡುಗಳಿಂದ ಸೌಂಡ್ ಮಾಡುತಿದೆ, ಮರಿ ಟೈಗರ್ ವಿನೋದ್ ಪ್ರಭಾಕರ್ ರವರೂ ಚಿತ್ರದಲ್ಲಿ ನಟಿಸಿದ್ದಾರೆ, ದಶ೯ನ್ ರ ವಿಭಿನ್ನ ಗೆಟಪ್ , ಸ್ಟೈಲ್, ಫೈಟ್ಸ್ ಅಭಿಮಾನಿಗಳಿಗೆ ಫುಲ್ ಟ್ರೀಟ್, ಈಗಾಗ್ಲೇ ಬಾ ಬಾ ಬಾ ನಾ ರೆಡಿ , ಎ ಬ್ರದರ್ ಫ್ರಂ ಅನದರ್ ಮದರ್ ಹಾಡು ಹಿಟ್ಟಾಗಿದೆ, ಸಂಗೀತ ಮ್ಯಾಜಿಕಲ್ ಕಂಪೋಸರ್ ಅಜು೯ನ್ ಜನ್ಯ ತೆಕ್ಕೆಗೆ ಮತ್ತೊಂದು ಸೂಪರ್ ಹಿಟ್ ಆಗೋದ್ರಲ್ಲಿ ನೋ ಡೌಟ್, ಚಿತ್ರಕ್ಕೆ ತರುಣ್ ಕಿಶೋರ್ ಸುಧೀರ್ ನಿದೇ೯ಶನ, ಬಂಡವಾಳ ಉಮಾಪತಿ ಶ್ರೀನಿವಾಸ್ ರಾಜು, ದಚ್ಚೀ ಅಭಿಮಾನಿಗಳಿಗೆ ಖುಷಿ ತರಲೆಂದು ಅವರ ಹುಟ್ಟಿದ ಹಬ್ಬದ ದಿನ ವಿಶೇಷ ಟ್ರೇಲರ್ ಲಾಂಚ್ ಆಗಿದೆ, ಮಾಚ್೯ 11 ರಂದು ಚಿತ್ರ ತೆರೆಕಾಣಲಿದೆ, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸೋಣ 💐

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply