ಒಂದು ದೊಡ್ಡ ಸಿನಿಮಾ ಬಿಡುಗಡೆಯಾಗುವ ಮುನ್ನ, ಆ ಸಿನಿಮಾದಲ್ಲಿ ನಟಿಸಿದಂತಹ ಕಲಾವಿದರು ಹಾಗೂ ಎಲ್ಲಾ ವಿಭಾಗದ ತಂತ್ರಜ್ಞರು ಒಂದು ವೇದಿಕೆಯಲ್ಲಿ ಸೇರಿ ಆ ಸಿನಿಮಾ ಕುರಿತಾದ ಅನುಭವಗಳು ಮತ್ತು ಆ ಚಿತ್ರದ ಪ್ರಮುಖ ಅಂಶಗಳ ಕುರಿತಾದ ವಿಷಯಗಳನ್ನ ಹಂಚಿಕೊಳ್ಳುತ್ತಾರೆ ಅದನ್ನ ” ಪ್ರೀ ರಿಲೀಸ್ ಈವೆಂಟ್” ಎಂದು ಕರಿಯುತ್ತಾರೆ…. ಇದೇ ತಿಂಗಳ 29ಕ್ಕೆ ಬಿಡುಗಡೆಯಾಗುತ್ತಿರುವ ಭಜರಂಗಿ 2ರ ಪ್ರಿ ರಿಲೀಸ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು… ಚಿತ್ರತಂಡಕ್ಕೆ ಶುಭವ ಕೋರಿ ಹರಸಲು ಸ್ಯಾಂಡಲವುಡ್ನ ತಾರಾಮೇಳವೇ ನೆರೆದಿತ್ತು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಿಷಬ್ ಶೆಟ್ಟಿ, ಶ್ರುತಿ, ಭಾವನಾ ಮೆನನ್, ನಿರ್ದೇಶಕ ಸಂತೋಶ್ ರಾಮ್ ಆನಂದ್ ಹಾಗೂ ದಿನಕರ್ ತೂಗುದೀಪ್. ಈ ಸಮಾರಂಭವೇ ಒಂದು ಸಿನಿಮಾದಷ್ಟು ಮನರಂಜನೀಯವಾಗಿತ್ತು, ಒಂದೆಡೆ ಪುನೀತ್, ಶಿವಣ್ಣ ಮತ್ತು ಯಶ್ ಮೂವರು ಒಂದೇ ವೇದಿಕೆಯ ಮೇಲೆ ಭಜರಂಗಿ ಹಾಡಿಗೆ ಹೆಜ್ಜೆ ಹಾಕಿ ಕಿಕ್ಕೇರಿಸಿದ್ರು.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ರಿಷಬ್ ಶೆಟ್ಟಿ ಜಯಣ್ಣ ಭೋಗೇಂದ್ರರನ್ನ ಹಾಲಿವುಡ್ನಲ್ಲಿರುವ ವಾರ್ನರ್ ಬ್ರದರ್ಸ್ ತರ ಇವರು ” ವಾರ್ನಿಂಗ್ ಬ್ರದರಸ್”, ಚಿತ್ರದ ಬಜೆಟ್ ಗಡಿ ದಾಟ್ತಾ ಇದೆ ಅಂತ ಆಗಾಗ ಎಚ್ಚರ ನೀಡ್ತಾರೆ ಅಂತ ತುಸು ಹಸ್ಯಮಾಡಿದ್ರು, ಮತ್ತೊಂದೆಡೆ ನಿರ್ದೇಶಕ ಹರ್ಷ ತಾವು ಚಿತ್ರೀಕರಣದ ವೇಳೆ ಅನುಭವಿಸಿದ ಕಷ್ಟಕರವಾದ ಸವಾಲು, ಸಂಭವಿಸಿದ ಅವಘಡಗಳನ್ನ ವಿವರಿಸುತ್ತಾ ಅದನ್ನ ಬಗೆಹರಿಸಲು ಅವರಿಗೆ ಬೆನ್ನೆಲುಬಾಗಿ ಸಾತು ನೀಡಿದ ಶಿವರಾಜ್ಕುಮಾರ್ ಮತ್ತು ನಿರ್ಮಾಪಕ ಜಯಣ್ಣರಿಗೆ ಧನ್ಯವಾದ ಸಲ್ಲಿಸುತ್ತಾ ಭಾವುಕರಾದ್ರು….
ಸ್ಟೇಜ್ ಮೇಲೇ ಬಂದು ಮೈಕ್ ಹಿಡಿದವರೆಲ್ಲಾ ಶಿವಣ್ಣ ಅವರ ಸದ್ಭಾವನೆ ಮತ್ತವರ ಮೌಲ್ಯಗಳನ್ನು ಉದ್ದೇಶಿಸಿ ಗುಣಗಾನ ಮಾಡಿದ್ರು, ಇನ್ನು ಶಿವಣ್ಣನ ವರ್ಚಸ್ಸು ಎನರ್ಜಿ ಹುಮ್ಮಸ್ಸಿಗೆ ಸಾಟಿಯೇ ಇಲ್ಲವೆಂಬ ಮಾತು ಎಲ್ಲರ ಬಾಯಲ್ಲಿ ಕೇಳಿ ಬರುವುದರ ಜೊತೆಗೆ ನಿರ್ದೇಶಕ ಹರ್ಷಾರ ಕಾರ್ಯ ವೈಖರಿ ಹೊಗಳುತ್ತಾ, ಭಜರಂಗಿ-2 ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತೆ, ಕಾಣಲಿ ಎನ್ನುವ ಹಾರೈಕೆ ಪ್ರತಿಧ್ವನಿಸಿತು. ಬೃಹತ್ ತಾರಾಗಣ, ವೈಭೋಗಭರಿತ ದೃಶ್ಯ ಚಿತ್ತಾರ, ಉತ್ತಮ ಕಥೆಯುಳ್ಳ ಭಜರಂಗಿ2 ಸಿನಿಮಾನ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದಿದ್ದಾರೆ.