ಭರವಸೆಯ ನಟರು -ಶರತ್ ಲೋಹಿತಾಶ್ವ

ಚಿತ್ರರಂಗದಲ್ಲಿ ಪೋಷಕ ನಟ ಹಾಗೂ ಖಳನಟರಾಗಿ ಮಿಂಚಿದ “ಲೋಹಿತಾಶ್ವ” ರವರ ಸುಪುತ್ರ ಶರತ್ ಲೋಹಿತಾಶ್ವ ರವರು ತಮ್ಮ ತಂದೆಯ ಹಾದಿಯಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ, ನಗಿಸಿ, ಖಳನಟರಾಗಿ , ಪೋಷಕ ನಟರಾಗಿ ತಮ್ಮ ವಿಶಿಷ್ಟವಾದ ಕಂಠದ ಮೂಲಕ ಮನೆಮಾತಾದ ನಮ್ಮ ಕನ್ನಡ ನಾಡಿನ ಕಲಾವಿದರಿಗೆ

ಜನುಮ ದಿನದ ಶುಭಾಶಯಗಳು .

ಇವರು ಬಹುಶಃ ಭಾರತ ಚಿತ್ರರಂಗದಲ್ಲಿ ಕನ್ನಡವಲ್ಲದೆ ಎಲ್ಲಾ ಭಾಷೆಗಳಲ್ಲಿ ಅಭೀನಯಿಸಿ ಹೆಸರಾಗಿದ್ದಾರೆ.

ನಮ್ಮ ಕನ್ನಡ ಭಾಷೆಯಲ್ಲಿ ಹೆಚ್ಚು ನಟಿಸಿ ಕನ್ನಡಿಗರ ಪ್ರೀತಿ ಸಂಪಾದಿಸಿದ್ದಾರೆ, ಹುಲಿಯಾ ಚಿತ್ರದ ರಾಮ ಪಾತ್ರ, ಪೋಲೀಸ್ ಸ್ಟೋರಿ ಧಮ೯ ಪಾತ್ರ (ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತೆ ನಟನೆ) ಸುಂಟರಗಾಳಿಯ ಜನನಾಯಕ ಪಾತ್ರ, ಆ ದಿಪಗಳು ಕೊತ್ವಾಲ್ ರಾಮಚಂದ್ರ ಪಾತ್ರ, ರಾಮ್ ಚಿತ್ರದ ಚಿಕ್ಕಮಲ್ಲಯ್ಯ ಪಾತ್ರ (ಕಾಮಿಡಿ ಜೊತೆ ಖಳನಟ) ನೋಡುಗರಿಗೆ ಕಚಗುಳಿ ಇಟ್ಟದ್ದು, ಸಂಜು ವೆಡ್ಸ್ ಗೀತ ಚಿತ್ರದ ಪೋಲೀಸ್ ಪಾತ್ರ, ಭೀಮಾ ತೀರದಲ್ಲಿ ಮಲ್ಲಪ್ಪ ಪಾತ್ರ, ಕಡ್ಡಿಪುಡಿ ಚಿತ್ರದಲ್ಲಿ ಶಂಕರಪ್ಪ ಪಾತ್ರ, ಪವರ್ ಚಿತ್ರದಲ್ಲಿ ಮಂತ್ರಿ ನರಸಿಂಹ ಪಾತ್ರ, ಸವಾರಿ 2 ನಲ್ಲಿ ಪೋಲೀಸ್ ಕಮಿಷನರ್ ಪಾತ್ರ, ಡಿಕೆ ಚಿತ್ರದ ಎಂಪಿ ಶಿವೇಗೌಡ (ಕಾಮಿಡಿ ಮತ್ತು ಖಳನಟ), ರನ್ನ ಚಿತ್ರದ ವೀರಪ್ಪ ಪಾತ್ರ, ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಕೋಚ್ ಪಾತ್ರ, ಒಡೆಯ ಚಿತ್ರದ ಬೆಟ್ಟಪ್ಪ ಪಾತ್ರ, ಬಜಾರ್ ಚಿತ್ರದ ಯಜಮಾನ್ ಪಾತ್ರ, ಬಿಚ್ಚುಗತ್ತಿ ಚಿತ್ರದ ಓಬಣ್ಣ ನಾಯಕ ಹೀಗೆ ಹತ್ತು ಹಲವಾರು ಪಾತ್ರಗಳು ಅವರ ನಟನೆಗೆ ಸಾಕ್ಷಿಯಾದವು.ಇಲ್ಲಿ ಕೆಲವು ಚಿತ್ರಗಳನ್ನು ಮಾತ್ರ ಹೆಸರಿಸಿದ್ದೇನೆ.

ಇಂಥ ನಟನೆಯುಳ್ಳ ಕಲಾವಿದರಿಗೆ ಪರಭಾಷೆಯಲ್ಲೂ ಅವಕಾಶ ಸಿಗುತ್ತಿರುವುದು ಹೆಮ್ಮೆಯ ವಿಚಾರ, ನಮ್ಮ ನಾಡಿನವರ ನಟನೆಗೆ ಪರಭಾಷೆಯವರು ಮೆಚ್ಚುಗೆ ವ್ಯಕ್ತಪಡಿಸುವುದು ಗಮನಾರ್ಹ, ಅಲ್ಲಿಯ ಭಾಷೆ ಕಲಿತು ಪಾತ್ರಕ್ಕೆ ತಕ್ಕ ಹಾಗೆ ನಟಿಸುವುದು ಇವರ ನಟನೆಯ ಶ್ರಧ್ಧೆಗೆ ಪ್ರೇರಣೆ ಎಂದು ಹೇಳಬಹುದು, ಎದುರ್ ನೀಚಲ್, ವೇಲೈಕ್ಕಾರನ್, ತಿರುನಾಳ್, ಭೈರವ, ಸತ್ರಿಯನ್, ಜೈ ಲವಕುಶ, ಕರುಪ್ಪನ್, ಉಳ್ಕುತ್ತು, ಅರವಿಂದ ಸಮೇತ, ಸಾಹೋ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರ ನಟನೆಗೆ ಸಾಕ್ಷಿ ಇವರಿಗೆ ದೊರೆತ ಪ್ರಶಸ್ತಿಗಳು.

ಉತ್ತಮ ಖಳನಟ ಪ್ರಶಸ್ತಿ -ಆ ದಿನಗಳು -2008-ಉದಯ ಸನ್ ಫೀಸ್ಟ್

ಉತ್ತಮ ಖಳನಟ ಪ್ರಶಸ್ತಿ -ಆ ದಿನಗಳು -ಫಿಲಂ ಫೇರ್ 2008

ಉತ್ತಮ ಪೋಷಕ ನಟ ಪ್ರಶಸ್ತಿ -ಮತ್ತೆ ಸತ್ಯಾಗ್ರಹ -ಕನಾ೯ಟಕ ಸಕಾ೯ರ

ಇಂಥ ಕಲಾವಿದರನ್ನು ನೋಡುವ ಆಸೆ ಕಡೆಗೂ “ಶ್ಯಾಡೋ” ಚಿತ್ರದ ಸಮಾರಂಭದಲ್ಲಿ ಭೇಟಿ ಮಾಡುವ ಹಾಗಾಯಿತು, ಅವರ ಜೊತೆ ತೆಗೆಸಿದ ಒಂದು ಫೋಟೋ ನೆನಪಿಗಾಗಿ.

ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚು ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ನಮ್ಮ ಕನ್ನಡ ಚಿತ್ರರಂಗ ಎಲ್ಲಾ ಭಾಷೆಗಳಲ್ಲಿ ಇವರು ನಟಿಸಿ ಮಿಂಚಲಿ ಎನ್ನುವುದು ನನ್ನ ಆಶಯ .

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply