ಭಾರತ ಚಿತ್ರರಂಗದ ಪಾಲಿಗೆ ಕರಾಳ ವರ್ಷ- ೨೦೨೦

R Nagesh

( ಮುಂದುವರೆದ ಭಾಗ )

ಅನಿವಾರ್ಯ ಪರಿಸ್ಥಿತಿಯಿಂದ ಬಂದ್ ಆದೇಶ ಮುಂದುವರೆಯಿತು.

ಈ ಕಾರಣದಿಂದ ಪ್ರದರ್ಶಿಸಲ್ಪಡುತ್ತಿದ್ದ ಚಿತ್ರಗಳು ಮತ್ತು ಬಿಡುಗಡೆಗೆ ಸಿದ್ಧಗೊಂಡಿದ್ದ ಚಿತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರಿತಲ್ಲದೆ ಚಿತ್ರ ಮಂದಿರಗಳ ಬಂದ್ ನ ಪರಿಣಾಮ  ನಮ್ಮ ದೇಶದ ಚಿತ್ರರಂಗ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ನಷ್ಟವನ್ನು ಅನುಭವಿಸಿದೆ. ಇಷ್ಟೆಲ್ಲ ಕಠಿಣ ಕ್ರಮ ಕೈಗೊಂಡರೂ ವೈರಸ್ ನ ನಿಯಂತ್ರಣ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಆಗಲೇ ಅಧಿಕ ಬಜೆಟ್ ನ ಕೆಲವು ಚಿತ್ರಗಳು ಚಿತ್ರೀಕರಣದ ಹಂತದಲ್ಲಿದ್ದವು.

ಆದರೆ ಈ ವೈರಸ್ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡ ಸರ್ಕಾರವು  ಹಿರಿ ತೆರೆ ಮತ್ತು ಕಿರು ತೆರೆಯ ಎಲ್ಲ ತರಹದ ಚಟುವಟಿಕೆಗಳನ್ನು , ಚಿತ್ರೀಕರಣವನ್ನು ಸ್ಥಗಿತಗೊಳಿಸಿದ ಪರಿಣಾಮ ಕೇವಲ ಚಿತ್ರ ಮಂದಿರಗಳ ಬಂದ್ ನಿಂದ ಆದ ನಷ್ಟಕ್ಕೆ ಚಿಂತೆಗೊಳಗಾಗಿದ್ದ ಚಿತ್ರ ರಂಗ.  ಚಿತ್ರೀಕರಣ ಸ್ಥಗಿತದ  ಆದೇಶದಿಂದ  ತತ್ತರಿಸಿತು.

ಅದರಲ್ಲೂ ಚಿತ್ರಗಳ ಚಿತ್ರೀಕರಣ ಅರ್ಧಕ್ಕೆ ಸ್ಥಗಿತವಾದಾಗ ಆಗುವ ನಷ್ಟ, ತೊಂದರೆ ಕುರಿತು ನಿಮಗೆ ತಿಳಿದಿದೆಯಾ?

ಅಷ್ಟು ದಿನಗಳ ಕಾಲ ನಡೆಸಿದ ಚಿತ್ರೀಕರಣದ ವೆಚ್ಚ, ಕಲಾವಿದರಿಗೆ, ಕಾರ್ಮಿಕರಿಗೆ ನೀಡುವ ಸಂಭಾವನೆ, ವಾಸ್ತವ್ಯ, ಪ್ರಯಾಣದ ಖರ್ಚು ಇಷ್ಟು ದೊಡ್ಡ ಪ್ರಮಾಣದಲ್ಲಿ  ಹಾನಿಯುಂಟಾದರೆ ಆ ನಿರ್ಮಾಪಕನ ಗತಿಯೇನು? ಇದೇ ರೀತಿ ಹಲವಾರು ನಿರ್ಮಾಪಕರು  ತಮ್ಮ ಚಿತ್ರಗಳ ಚಿತ್ರೀಕರಣ ಸ್ಥಗಿತದಿಂದ ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸಿದ್ದಾರೆ. ಅದರಲ್ಲೂ ನಮ್ಮ ಚಿತ್ರ ರಂಗದ ಕಾರ್ಮಿಕರ ಸ್ಥಿತಿಯು ಶೋಚನೀಯವಾಗಿದ್ದು  ಪ್ರತಿ ದಿನವೂ ಪಡೆಯುವ ಸಂಭಾವನೆಯ ಮೇಲೆ ಇವರ  ಜೀವನ ಅವಲಂಬನೆಯಾಗಿದೆ.

ಈ ಸ್ಥಗಿತದ  ಆದೇಶ  ಈ ಕಾರ್ಮಿಕರ ಉದ್ಯೋಗವನ್ನು ಕಸಿದು ಕೊಂಡಿತು. ಕೆಲಸವಿಲ್ಲ, ಆಹಾರದ ಅಭಾವ, ಅಕ್ಷರಶಃ ನರಕದ ಜೀವನ ಇವರನ್ನು ನಂಬಿಕೊಂಡ ಇವರ ಕುಟುಂಬದ ಪರಿಸ್ಥಿತಿಯನ್ನು ಊಹಿಸಲು ಕಷ್ಟವಾಗುತ್ತದೆ. ಆದರೆ ಈ ಸಮಯದಲ್ಲಿ ಚಿತ್ರ ರಂಗದ ಹಿರಿಯ ಮತ್ತು ಕಿರಿಯ ಕಲಾವಿದರು ಮಾಡಿದ ಸಹಾಯದಿಂದ  ಹಲವಾರು ಕುಟುಂಬಗಳಿಗೆ ಸಹಾಯವಾಯಿತು. ಆದರೆ ಚಿತ್ರ ಮಂದಿರಗಳು ಬಂದ್ ಆಗಿ ಮೂರು ತಿಂಗಳಿಗೂ ಹೆಚ್ಚು ಕಾಲವಾಗಿದ್ದು ಯಾವಾಗ ತೆರೆಯುತ್ತದೆ ಎನ್ನುವ ಮಾಹಿತಿಯು ಇಲ್ಲ,

ಒಂದು ವೇಳೆ ತೆರೆದರು ಕೂಡ ಪ್ರೇಕ್ಷಕರು ಬರುವುದರ ಕುರಿತು ಖಚಿತವಾಗಿ ಹೇಳಲು ಸಾಧ್ಯವಿಲ್ಲ

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply