AMAZON PRIME O.T.T ಯಲ್ಲಿ ಬಿಡುಗಡೆಯಾಗಿದೆ.(120mins)
ತಾರಾಗಣ:- ಅರವಿಂದ್ಅಯ್ಯರ್, ಆರೋಹಿ ನಾರಾಯಣ, ಅಚ್ಯುತ್ ಕುಮಾರ್, ಆದ್ಯಾ, ವಿಜಯ್ ಚೆಂದೂರ್ ಮತ್ತು ಚಿತ್ರಾಲಿ.
ನಾಲಿಗೆ ಚಪ್ಪರಿಸುವಂತಹ ಸ್ವಾದ, ಕಿವಿಗೆ ಮುದ ಕೊಡುವ ಸ್ವರ, ಮನಸ್ಸಿಗೆ ಹಿತ ನೀಡುವ ಸಾಹಿತ್ಯ, ಕಣ್ಣಿಗೆ ತಂಪುಣಿಸುವ ದೃಶ್ಯಾವಳಿ ಎಲ್ಲವೂ ಹದವಾಗಿ ಬೆರೆತು ತಯಾರಾದ ಪಂಚಾಮೃತವೇ “ಭೀಮಸೇನ ನಳಮಹಾರಾಜ“. 8 ತಿಂಗಳಿಂದ ಹೊಸ ಕನ್ನಡ ಸಿನಿಮಾಗಳಿಲ್ಲದೆ, ಮನೋರಂಜನೆಗಾಗಿ ಹಳಸಲು ಸೇವಿಸುತ್ತಿದ್ದ ಪ್ರೇಕ್ಷಕನ ಪಾಲಿಗೆ ಒಮ್ಮೆಲೆ ಬಿಸಿ ಪರಮಾನ್ನವನ್ನು ಸೇವಿಸಿದ ಅನುಭವ ನೀಡಿದೆ.
ರುಚಿಕರವಾದ ಅಡುಗೆ ತಯಾರಾಗಬೇಕಾದರೆ ಅಗತ್ಯವಿರುವುದು ಶುದ್ಧ ಪರಿಕರಗಳಷ್ಟೇ ಅಲ್ಲ, ಜೊತೆಗೆ ಅಡುಗೆ ಮಾಡುವವರ ಮನಸ್ಸಿನಲ್ಲಿ ಶ್ರದ್ಧೆ, ಹೃದಯದಲ್ಲಿ ಪ್ರೀತಿ ಎರಡೂ ಅತ್ಯಗತ್ಯ ಅನ್ನೋಈ ಮಾತುಒಬ್ಬ ವ್ಯಕ್ತಿಯ ಸಂಸಾರ ಸಂಬಂಧಗಳಿಗೂ ಅನ್ವಯಿಸುತ್ತದೆ – ಅನ್ನುವ ಸಾಲನ್ನ ಕಥಾವಸ್ತುವಾಗಿಟ್ಟಿಕೊಂಡು ನಿರ್ದೇಶಕ ಕಾರ್ತಿಕ್ ಸರಗೂರ ವರ್ಣರಂಜಿತವಾಗಿ ಕಾವ್ಯಮವಾಗಿ ಮನಸ್ಸಿಗೆ ನಾಟುವಂತೆ ಹೆಣೆದಿದ್ದಾರೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಸಂಯೋಜಿಸಿರುವ ತಾಳ- ನಾದದಿಂದ ಸಿನಿಮಾ ಇನ್ನಷ್ಟು ಅಹ್ಲಾದ, ಸಿನಿಮಾದ ಹಿನ್ನೆಲೆ ಸಂಗೀತವು ಮತ್ತು ರವೀಂದ್ರನಾಥ ಕ್ಯಾಮೆರಾ ಕೆಲಸ ದಿಂದ ಅಡುಗೆ ತುಂಬಾ ರುಚಿಯಾಗಿ ತಯಾರಾಗಿದೆ.
ಸಿನಿಮಾದ ನಾಯಕ ಅರವಿಂದ್ಅಯ್ಯರ ಭೀಮಸೇನನ ಗದೆಯಷ್ಟೇ ಘನಗಟ್ಟಿಯಾದ ಅಭಿನಯವನ್ನು ನೀಡಿ, ನೋಡುಗರಿಗೆ ಇದು ಅವರ ಮೊದಲನೇ ಸಿನಿಮಾ ಅಂತ ಯಾವುದೇ ಹಂತದಲ್ಲೂಅನ್ನಿಸದ ಹಾಗೆ ನಿಭಾಯಿಸಿದ್ದಾರೆ. ಇನ್ನು ನಾಯಕಿ ಆರೋಹಿ ನಾರಾಯಣ್ ಕೂಡ ಸೇರಿಗೆ ಸವಾಸೆರು ಅನ್ನೋ ಹಾಗೆ ತನ್ನ ಪಾತ್ರವನ್ನ ಚಿತ್ರದ ಉದ್ದಗಲಕ್ಕೂ ಚುರಕಾಗಿ, ಜೀವಂತವಾಗಿ ಇರಿಸಲು ಬೇಕಾದ ಎಲ್ಲಾ ಅಂಶವನ್ನು ನೀಡಿದ್ದಾರೆ. ವಿಶೇಷವಾಗಿ ಈ ಸಿನಿಮಾದಲ್ಲಿ ಅಚ್ಯುತ್ ಅವರ ಪಾತ್ರ ನೋಡ್ತಾಇದ್ರೆ ಒಮ್ಮೆ ಕಣ್ಣು ಕೆಂಪಗಾಗುತ್ತೇ ನಂತರ ಒದ್ದೆಯಾಗುತ್ತೆ, ವಿಜಯ್ ಚೆಂದೂರ್ , ಚಿತ್ರಾಲಿ ಮತ್ತು ಆದ್ಯ ಪ್ರತಿ ಫ್ರೇಮ್ನಲ್ಲುಅದ್ಭುತವಾಗಿಕಾಣಸ್ತಾರೆ..
ಒಟ್ಟಾರೆಯಾಗಿ ಇದು ಪಕ್ಕಾ ಕರ್ನಾಟಕದ, ಕನ್ನಡದವರೆ ತಯಾರಿಸಿದ ನಳ ಪಾಕಕ್ಕೆ ಫುಲ್ ಮಾರ್ಕ್ಸ್..