ಅತಿಯಾದ್ರೆ ಅಮೃತಾನು ವಿಷವಾಗುತ್ತೆ ಅನ್ನೋ ಮಾತು ನಾವೆಲ್ಲಾ ಬಹಳಷ್ಟು ಸರಿ ಕೇಳಿದ್ದೀವಿ, ಅದಕ್ಕೆ ನಿದರ್ಶನವಾಗಿ ಮೊನ್ನೆಯಷ್ಟೇ ಒಂದು ಘಟ ಈ ನಡೆದಿದೆ…
ಬಾಲಿವುಡ್ ನ ಖ್ಯಾತ ನಟಿ ಕಂಗಮಾ ರಣಾವತ್ ಕ್ಯಾಮೆರಾ ಎದುರು ನಿಂತು ನಟಿಸೋಕೆ ಶುರುಮಾಡಿದ್ರೆ “ಅಭಿನಯರಾಕ್ಷಸಿ”ಯೆ ನಿಜ. ಈಕೆ ಆಯ್ಕೆ ಮಾಡ್ತಾ ಇದ್ದ ಸಿನಿಮಾಗಳು ಹೆಚ್ಚಾಗಿ ನಾಯಕಿ ಪ್ರಧಾನವೇ ಆಗಿರ್ತಿತ್ದವು, ಅವುಗಳಲ್ಲಿ ಇವಳ ಪಾತ್ರ ಹೇಗಿರ್ತಿತ್ತು ಅಂದ್ರೆ ಗಯ್ಯಾಳಿಯಾಗಿ, ಧೋರಣೆ ಅಹಂನಿಂದ ಮೆರೆದು ನಾಯಕರನ್ನ ಸೆಡ್ಡು ಹೊಡೆದು ನಿಲ್ಲುವ ದುರಭಿಮಾನಾದ ಹೆಣ್ಣಾಗಿ ಅಥವಾ ಅತಿರೇಕದ ಕೃತ್ಯೆಗೈದು ಎಡವಿ ಮುಗ್ಗರಿಸಿ ಕಡೆಗೆ ಕಣ್ಣಿರಿಡುವ ಅಲ್ಪ ಅಭಲೆಯ ಭಾವನೆಯನ್ನೇ ಪ್ರತಿನಿಧಿಸುತ್ತಿದ್ವು.
ನಟನಾ ಕೌಶಲ್ಯ ತಂದು ಕೊಟ್ಟ ಖ್ಯಾತಿ – ನಿಜ ಜೀವನದಲ್ಲಿ ಮಾಡುವ ಕ್ಯಾತೆಯಿಂದ ಎಲ್ಲೆಡೆ ಹೆಚ್ಚು ಪ್ರಸಿದ್ದಳಾದ್ಲು, ಕೆಲುವು ಸಂಗತಿಗಳಲ್ಲಿ ಕಂಗನಾಳ ನಡೆಯ ಕಂಡು ದಿಟ್ಟ ವನಿತೆ ಅನ್ನಿಸಿದ್ದು ಉಂಟು ಹಾಗೆಯ ಆಕೆಯ ಅರ್ಥ ರಹಿತ ಟೊಳ್ಳು ಮಾತುಗಳನ್ನ ಕೇಳಿ ವಾಕರಿಕೆ ಬರುವಷ್ಟು ಅಸಹ್ಯವು ಆಗಿದ್ದೂ ಉಂಟು.
ನಿಜವಾದ ಕಲಾವಿದರ ಲಕ್ಷಣವೆಂದರೆ ಕಲೆಯನ್ನ ಆಧಾರವಾಗಿಟ್ಟುಕೊಂಡು ಅದರ ಮೂಲಕ ಮನೋರಂಜನೆ ನೀಡುತ್ತ, ಸಾಧ್ಯವಾದ್ದಲ್ಲಿ ಸಮಾಜ ಸುಧಾರಣೆ ಕೆಲಸಗಳಲ್ಲಿ ಭಾಗಿಯಾಗುವುದರ ಜೊತೆಗೆ ತಮ್ಮ ಬದುಕಿನ ಅನುಭವದಿಂದ ಕಲಿತ ಪಾಠದ ಸಾರಾಂಶವನ್ನ ನಾಲ್ವರ ಮಧ್ಯೆ ತಿಳಿಯಾಗಿ ತಿಳಿಯುವಂತೆ ಹಂಚಿಕೊಂಡಾಗ ಜೀವನ ಯುಕ್ತವಾಗುತ್ತೆ, ಸಾರ್ಥಕತೆಯ ಸಂಕೇತವಾಗುತ್ತೆ.
ದೇಶ, ಭಾಷೆ, ಆಡಳಿತ ಸರ್ಕಾರದ ಕಾರ್ಯಲೋಪ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಪ್ರತಿಯೊಬ್ಬರಿಗು ತಮ್ಮದೇಯಾದ ಅಭಿಮಾನ, ವಿಭಿನ್ನ ಅಭಿಪ್ರಾಯ ಗಳು ಇರುವಂತೆ ಸಿನಿಮಾದ ನಟ, ನಿರ್ದೇಶಕರಿಗೂ ಇರುತ್ತದೆ ಆದ್ರೆ ಅವರಿಗಿರುವ ಖ್ಯಾತಿಯನ್ನ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಟೀಕಾ ಪ್ರಹಾರ ಮಾಡುವುದು ಈ ನಡುವೆ ಸರ್ವೆಸಾಮಾನ್ಯವಾಗಿದೆ,ಎಲ್ಲೆಡೆ ಇರುವಂತೆ ಅಲ್ಲೂ ಸಹ ಬಲ ಹಾಗೂ ಎಡ ಪಂಥದವರು ಇದ್ದಾರೆ.
ನಟಿ ಕಂಗನಾ ರಣವತ್ ತಾನು ಹುಟ್ಟಿನಿಂದಲೂ ಬಲಪಂಥೀಯದವಳು ಎಂಬ ಧೋರಣೆಯನ್ನ ಪದೇ ಪದೇ ಸಮಾಜಿಕ ಜಾಲತಾಣಗಳಲ್ಲಿ, ಸಂದರ್ಶನಗಳಲ್ಲಿ ಪ್ರದರ್ಶಿಸತಿದ್ಲು, ಧೋರಣೆಗೂ ಚಿಂತನೆಗೂ ಇರುವ ಕೂದಲೆಳೆಯ ವ್ಯತ್ಯಾಸವನ್ನ ಮರೆತು ಮೆರೆದಳು, ಆಕೆಯ ಟ್ವಿಟ್ಟರ್ ಖಾತೆಯನ್ನು ಒಮ್ಮೆ ನೋಡಿದ್ರೆ ಅದರ ತುಂಬಾ ಬರೀ ದ್ವೇಷ , ತೀವ್ರ ಎಡಪಂತಿಯ ವಿರೋಧದ ಹೇಳಿಕೆ, ಪರೋಕ್ಷವಾಗಿ ಹಿಂಸಾಚಾರ ಪ್ರಚೋದಿಸುವ ಅವಿವೇಕಿತನ, ಸಂಧರ್ಭಕ್ಕೆ ಸಮಂಜಸವಲ್ಲದ ಸಲಹೆಯ ರೂಪದ ಉಡಾಫೆ ಮಾತುಗಳು ಹೀಗೆ ದಿನದಿಂದ ದಿನಕ್ಕೆ ಹೆಚುತ್ತಲೇ ಹೋಯಿತು, ನಿಜವಾದ ಬಲಪಂಥೀಯರಿಗೂ ಈಕೆಯ ಮಾತುಗಳನ್ನ ಕೇಳಿದಾಗ ಮುಜುಗುರ ಸಂಕೋಚ ಉಂಟಾದದ್ದೇ ಅಧಿಕ. “ಮಂತ್ರಕ್ಕಿಂತ ಉಗುಳೇ ಜಾಸ್ತಿ”!!! ಸಾಮಾನ್ಯ ಜನ ದಿನಿನಿತ್ಯವು ಈಕೆಯ ಮಾತು ಕೇಳಿ ಕೇಳಿ ರೋಸೋಗಿದ್ದರು, ತನ್ನ ಟ್ವಿಟ್ಟರ್ ಖಾತೆಯ ಮೂಲಕ ದಿನಕ್ಕೊಂದು ನವನವೀನ ಹಿಂಸೆ ನೀಡುತ್ತಿದ್ದ ಈಕೆಯ ಖಾತೆಯನ್ನ ರದ್ದುಗಳೊಸಲು ಹಲವಾರು ಜನ ರಿಪೋರ್ಟ್ ಮಾಡಿದ್ರು, ಖುದ್ದು ಟ್ವಿಟ್ಟರ್ ಸಂಸ್ಥೆಯೇ ಆದನ್ನ ಪರಿಗಣಿಸಿ, ಅವರ ನಿಯಮ ಉಲ್ಲಂಘನೆ ಕಾರಣವಾಗಿ ಕಂಗನಾಳ ಖಾತೆಯನ್ನ ಅಮಾನತ್ತುಗೊಳಿಸಿತು.. ನಕಲಿ ಶಬ್ಧ ಮಾಡಿತ್ತಿದ್ದ ಖಾಲಿಡಬ್ಬದ ಮುಚ್ಚಳ ತೆರೆಯಿತು…..ನಟರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಟ್ಟು ಸದಭಿರುಚಿಯ ಸಿನಿಮಾ ನೀಡುವತ್ತ ಶ್ರಿಮಿಸಿದರೆ ಸಿನಿಮಾರಂಗಕ್ಕೆ ಒಳ್ಳೇದು … ಅವರ ಎಡ ಬಲ ಚಿಂತನೆಯನ್ನ ಅತಿಯಾಗಿ ಪ್ರದರ್ಶನಕಿಟ್ಟರೆ, ಗೌರವ ಕ್ಷೀಣಿಸೋದಂತೂ ಸತ್ಯ…
ಈಗ ಬಂದ ಮಾಹಿತಿಯ ಪ್ರಕಾರ ನಟಿ ಕಂಗನಾ ಗೆ ಕೋವಿಡ್ 19 ಸೋಂಕು ಧೃಡ ಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ, ಆದಷ್ಟು ಬೇಗ ಗುಣಮುಖರಾಗಿ ಹಿಂತಿರುಗಿ ಒಳ್ಳೆ ಸಿನಿಮಾಗಳು ನೀಡಲೆಂದು ಹಾರೈಸುತ್ತೇವೆ. .