ಮಗಳು ಜಾನಕಿ …ಇನ್ನು ಮುಗಿದ ಅಧ್ಯಾಯ..

ಸದಭಿರುಚಿಯ, ಸೂಕ್ಷ್ಮ,  ವಿಷಯಗಳನ್ನ ಆಯ್ಕೆ ಮಾಡಿ ಅದನ್ನು  ದಾರವಾಹಿ ರೂಪದಲ್ಲಿ ಪ್ರದರ್ಶಿಸುವುದರಲ್ಲಿ T.N. ಸೀತಾರಾಮ ಅವರಿಗೆ ಇಂದಿನ ಮಟ್ಟಿಗೆ ಸರಿ ಸಾಟಿ ಯಾರಿಲ್ಲ ಎಂದರೆ ತಪ್ಪಾಗಲಾರದು. ಅವರ ಧಾರಾವಾಹಿಗಳಲ್ಲಿ ಸ್ವಚ್ಛ್, ಶುದ್ಧವಾದ ಕನ್ನಡ ನದಿಯಂತೆ ಹರಿದು ಕನ್ನಡಿಗರ ಹೃದಯ ಸಾಗರ ಸೇರಿದೆ.

ಅದಕ್ಕೆ ಮಾಯಾಮೃಗ, ಮುಕ್ತ, ಮನ್ವಂತರ ದಾರವಾಹಿಗಳಿಗೆ ಸಿಕ್ಕ ಪ್ರತಿಕ್ರಿಯೆಯೆ ಸಾಕ್ಷಿ, ಅದೇ ಸಾಲಿಗೆ ಸೇರುವ ಅವರ ಮತ್ತೊಂದು ಧಾರಾವಾಹಿಯಂದರೆ “ಮಗಳು ಜಾನಕಿ”, ಸಂಬಂಧಗಳ ಮಹತ್ವ, ಸಮಾಜದ ಮೌಲ್ಯಗಳೆ ಇದರ ಕೇಂದ್ರಬಿಂದು ಅಭಿವ್ಯಕ್ತ ಕುಟುಂಬಗಳ ಇಷ್ಟದ ಉವಾಚ.

ವಿಷಾದದ ವಿಷಯವೆಂದರೆ ಮಗಳು ಜಾನಕಿ ಇನ್ನ ಮುಂದೆ ಪ್ರಸಾರವಾಗುವುದಿಲ್ಲ, ಲಾಕ್ಡೌನ್ ಬಳಿಕ ಕಿರುತೆರೆಯ ವ್ಯವಸ್ಥೆ ಹಾಗು ಕಾರ್ಯ ವೈಖರಿ ಸಂಪೂರ್ಣವಾಗಿ ಬದಲಾಗಿದೆ. ಸೀರಿಯಲ್ಮುಂದುವರಿಸಬೇಡಿ, ಚಿತ್ರೀಕರಣ ಸ್ಥಗಿತಗೊಳಿಸಿ ಎಂದು ವಾಹಿನಿ T.N ಸೀತಾರಾಮ ಅವರಿಗೆ ತಿಳಿಸಿದೆ. ಆದ ಕಾರಣ ಮಗಳು ಜಾನಕಿ ಮುಕ್ತಾಯವಾಗುತ್ತೆ. ಇದನ ತಿಳಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಆಡಷ್ಟು ಬೇಗ ಮತ್ತೊಂದು ಕಥೆ ಶುರು ಮಾಡಿ ಎಂದು ಸೀತಾರಾಮಅವರಿಲ್ಲಿ ಮನವಿ ಮಾಡಿಕೊಂಡಿದ್ದಾರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply