“ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆ ತನ” ಅನ್ನೋ ಅಮೃತವಾಣಿ ಕಿಚ್ಚಾ ಸುದೀಪ್ ಅಭಿನಯದ ಸ್ವಾತಿಮುತ್ತು ಸಿನಿಮಾದ ಹಾಡಿನ ಸಾಲಲ್ಲಿ ಕೇಳಿದ್ವಿ ಅಂದಿಗಷ್ಟೇ ಅಲ್ಲ ಇಂದಿಗೂ ಕೂಡ ಆ ಮಾತು ಸತ್ಯವೆಂದು ಸಾಬೀತು ಪಡಿಸಿದೆ, ಕೋಟಿಗೊಬ್ಬ 3 ಸಿನಿಮಾದ ಭರ್ಜರಿ ಗೆಲುವು ಅದರ ಪ್ರತಿಬಿಂಬವಾಗಿದೆ….
ಕೋಟಿಗೊಬ್ಬ 3 ಚಿತ್ರವನ್ನ ತಡೆಹಿಡಿಯಲು ಸೋಲಿಸಲು ನಡೆದ ಹಲವು ಷಡ್ಯಂತ್ರ, ಕಿಡಿಗೇಡಿಗಳ ಕುತಂತ್ರ ಹುನ್ನಾರಗಳ ಒದ್ದು ಕಡೆಗೆ ಗೆದ್ದದ್ದು ಅಭಿಮಾನಿಗಳ ಆತ್ಮವಿಶ್ವಾಸ, ಅಭಿಮಾನದ ಮಹಾಪೂರವೇ ನಿಜ…
ಸುದೀಪ್ ಅವರು ಆನ್ ಸ್ಕ್ರೀನ್ ಅಷ್ಟೇ ಅಲ್ಲ ಆಫ್ ಸ್ಕ್ರೀನಲ್ಲಿಯೂ ಒಬ್ಬ ಹೀರೊ ಆಗಿದ್ದಾರೆ, ತಮ್ಮ ಸಿನಿಮಾದ ನಿರ್ಮಾಪಕರಿಗೆ ಆದ ಸಂಕಷ್ಟವನ್ನ ಬಗೆಹರಿಸಿ, ಧೈರ್ಯ ತುಂಬುವುದರ ಜೊತೆಗೆ ಆರ್ಥಿಕ ಬೆಂಬಲವನ್ನು ಒದಗಿಸಿದ್ದಾರೆ. ಒಮ್ಮೆ ಸಿನಿಮಾದ ಜಾಹೀರಾತಿನಲ್ಲಿ ಸುದ್ದೀಪರನ್ನ ನಿರ್ಮಾಪಕ ಸೂರಪ್ಪ ಬಾಬುರವರು “ಅನ್ನದಾತರ ಅನ್ನದಾತ” ಎಂದು ಆಮೋದಿಸಿದ್ರು ಅದ್ಯಾಕೆ ಅಂತ ನಡೆದೆ ಘಟನೆಗಳೊಂದಂದು ವಿವರಿಸುತ್ತದೆ.
ಇತ್ತ ರಾಜ್ಯದಾದ್ಯಂತ ಅಭಿಮಾನಿಗಳು ನೆಚ್ಚಿನ ನಟನನ್ನ ಬೆಳ್ಳಿ ಪರದೆಯಮೇಲೆ ಕಂಡು ಹೃದಯ ತುಂಬಿಸಿಕೊಳ್ಳಲು ಚಿತ್ರಮಂದಿರಗಳಿಗೆ ಸಾಗರೋಪಾದಿಯಲ್ಲಿ ಬಂದರು. ” ಅಭಿಮಾನದ ಸಂಗಮ”. ಗುರುವಾರ ಬಿಡುಗಡೆಯಾಗಬೇಕಾದ ಸಿನಿಮಾ ಒಂದು ದಿನ ತಡವಾಗಿ ಬಿಡುಗಡೆ ಯಾದ್ರು ಸಹ ಸಂಭ್ರಮ, ಸಡಗರ ಸಿನಿಮಾದ ವಾಣಿಜ್ಯಕ್ಕೆ ಯಾವುದೇ ತಡೆ ಅಥವಾ ನಿರ್ಬಂಧ ಹೇರಲು ಆಗಲಿಲ್ಲ… ಬಿಡುಗಡೆಯಾದೆ ಎಲ್ಲೆಡೆ ಕಂಡಾಟ ಸಹಿತ ಜನಭರಿತ ಪ್ರದರ್ಶನ ಕಂಡು ಬರೋಬ್ಬರಿ 35 ಕೋಟಿ ರೂಪಾಯಿಗಳಿಸಿ ಧಾಖಲೇ ಬರೆದಿದೆ. ಇದೆ ಅಲ್ಲವೇ ನಿಜವಾದ “ವಿಜಯದಶಮಿ”. ಕರ್ನಾಟಕದ ಜನ ಸಿನಿಮಾನ ಮೆಚ್ಚಿ ಗೆಲ್ಲಿಸಿದ್ದು ನೀನೇ ಕೋಟಿಗೊಬ್ಬ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.