ಡಾ.ರಾಜಕುಮಾರ್, ಬಿ. ಸರೋಜಾದೇವಿ ಯವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ಭಾಗ್ಯವಂತರು ಮತ್ತೆ ತೆರಯ ಮೇಲೆ ರಾರಾಜಿಸಲಿದೆ, ಭಾರ್ಗವ ಅವರು ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ದ್ವಾರಕೀಶ್ರವರು ನಿರ್ಮಾಣ ಮಾಡಿದ್ದರು, ಈಗ ಮತ್ತೆ ಹೊಸ ತಂತ್ರಜ್ಞಾನದ ಮೂಲಕ ಚಿತ್ರವೂ ಬಿಡುಗಡೆಯಾಗುತ್ತಿದೆ.
ಎಂ ಮುನಿರಾಜುರವರು ಈ ಚಿತ್ರವನ್ನು ಹೊಸ ತಂತ್ರಜ್ಞಾನದ ಮೂಲಕ ಚಿತ್ರಕ್ಕೆ ಮೆರಗು ನೀಡಿ ಜುಲೈ 8 ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ, ರಾಜಕುಮಾರವರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜುರವರು ಈ ಹಿಂದೆ ನಾನೊಬ್ಬ ಕಳ್ಳ, ಆಪೆರೇಷನ್ ಡೈಮೆಂಡ್ ರಾಕೆಟ್ , ದಾರಿ ತಪ್ಪಿದ ಮಗ ಚಿತ್ರಗಳನ್ನು ಆಧುನಿಕ ತಂತ್ರಜ್ಞಾನದಿಂದ ಬಿಡುಗಡೆ ಮಾಡಿದ್ದರು.
ಈಗ ಮತ್ತೆ ಹೊಸ ತಂತ್ರಜ್ಞಾನದಿಂದ ಭಾಗ್ಯವಂತರು ಸಿನೆಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದೆ ಸತ್ಯ ಹರಿಚಂದ್ರ ಚಿತ್ರವೂ ಆಧುನಿಕ ತಂತ್ರಜ್ಞಾನದಿಂದ ಬಿಡುಗಡೆಗೊಂಡು ಅಮೋಘ 50 ದಿನಗಳ ಪ್ರದರ್ಶನ ಗೊಂಡಿತ್ತು. ಇವರ ಈ ಶ್ರಮಕ್ಕೆ ತಕ್ಕ ಫಲ ದೊರೆಯಲೆಂದು, ಆಶಿಸೋಣ.