ಸಾಲಾಗಿ ಹ್ಯಾಟ್ರಿಕ್ಹಿಟ್ ಸಿನಿಮಾ ನೀಡಿದ ಬಳಿಕ ಆಕ್ಷನ್ ಪ್ರಿನ್ಸ್ “ಧ್ರುವ ಸರ್ಜಾ” ಡೈರೆಕ್ಟರ್ ನಂದ ಕಿಶೋರ್ ಜೊತೆಗೆ “ಪೊಗರು” ಅನ್ನೋ ದೊಡ್ಡ ಮಾಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗಗಿ ಹೊಸ ರೀತಿಯ ಫೈಟ್ಟ್ರೈನಿಂಗ್ ಪಡೆದು ಜೊತೆಗೆ ದೇಹವನ್ನದಂಡಿಸಿ,ಪೈಲ್ವಾನನಂತೆಆಗಿದ್ದಾರೆ.
ಸಿನಿಮ ಮುಗಿದು ಬಿಡುಗಡೆಗೆ ಸಜ್ಜಾಗಿದೆ, ಪರಿಸ್ಥಿತಿಕಾರಣವಾಗಿ ಸಿನಿಮಾದ ಬಿಡುಗಡೆ ತಡವಾಯಿತು. ಪೊಗರು ಮುಗಿದ ಹಿನ್ನಲೆಯಲ್ಲೇ ಧೃವಸರ್ಜಾ ಮತ್ತು ನಂದ ಕಿಶೋರ್ಜೋಡಿಯಾಗಿ ಮತ್ತೊಂದು ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದಾರೆ ಆ ಸಿನಿಮಾಗಿ ಉದಯ್.ಕೆ. ಮೆಹ್ತಾ ಬಂಡವಾಳ ಹೂಡಲಿದ್ದಾರೆ.
ಅವರಹೊಸ ಸಿನಿಮಾಗೆ ಸಂಬಂದಿಸಿದ ಎಲ್ಲಾ ಮಾಹಿತಿ ಸಾಧ್ಯದಲ್ಲೆ ಹೊರ ಬರಲಿದೆ.
ಅಣ್ಣ ಚಿರುಸರ್ಜಾ, ಹೊಸ 2-3 ಸಿನಿಮಾದಲ್ಲಿ ನಟಿಸಿದ್ದರು, ಅವರ ಪಾಲಿನ ಚಿತ್ರೀಕರಣ ಕೂಡ ಮುಗಿಸಿದ್ದರು ಆದ್ರೆ ವಾಯ್ಸ್ ಡಬ್ ಮಾಡಿರಲಿಲ್ಲ. ಈಗ ಅಣ್ಣನ ಸಿನಿಮಾಗೆ ಧ್ವನಿ ನೀಡಲು “ಧ್ರುವ” ತಯಾರಾಗಿದ್ದಾರೆ, ಅವುಗಳಲ್ಲಿ ಮೊದಲನೆಯದಾಗಿ “ರಾಜ ಮಾರ್ಥಾ0ಡ” ಅನ್ನೋ ಸಿನಿಮಾಗೆ ಜುಲೈ 1 ರಿಂದ ಡಬ್ಬಿಂಗ್ ಕೆಲಸ ಪ್ರಾರಂಭ ಮಾಡಲಿದ್ದಾರೆ.
ಈ ಹಿಂದಿ ಶಂಕರ್ ನಾಗ್ಆಕಾಲಿಕ ಮರಣ ಹೊಂದಿದ್ದರು, “ನಿಗೂಢ ರಹಸ್ಯ” ಅನ್ನೋ ಅವರ ಕಡೆಯ ಸಿನಿಮಾದ ಶೂಟಿಂಗ್ ಮುಗಿದಿತ್ತು ಆದ್ರೆ ಅವರ ಪಾತ್ರಕ್ಕೆ ಡಬ್ಬಿಂಗ್ ಆಗಿರಲಿಲ್ಲ ನಂತರ ಸೋದರರಾದ ಅನಂತ್ನಾಗ್ಡಬ್ಬಿಂಗ್ ಮಾಡಿಕೊಟ್ಟರು ಅನ್ನೋದು ಇತಿಹಾಸ.