ಮರಳಿ ಬಾರದ ಊರಿಗೆ ನಟ ಚಿರಂಜೀವಿ ಸರ್ಜಾ ಹೊರಟಿದ್ದಾರೆ

39 ನೆ ಎಳೆ ವಯಸ್ಸಿನಲ್ಲಿ ತೀವ್ರ ಉಸಿರಾಟದಸಮಸ್ಯೆಯಿಂದಾಗಿ ಇಂದು ಸಂಜೆ 4 ಘಂಟೆಗೆ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ ಚಿರಂಜೀವಿಸರ್ಜಾ…

ಚಿರಂಜೀವಿ ಅನ್ನೋ ಹೆಸರಿಗೆ ತದ್ವಿರುದ್ಧವಾಯ್ತು ಅವರ ಬದುಕು..

ಅರ್ಜುನ್ ಸರ್ಜಾರ ಅಕ್ಕನ ಮಗ, ಧೃವಆರ್ಜಾರ ಸಹೋದರ, ಅಸಂಖ್ಯಾತ ಅಭಿಮಾನಿಗಳ ಹೊಂದಿದ್ದ ಅಜಾನು ಬಾಹು ಸುಮಾರು 20 ಸಿನಿಮಾದಲ್ಲಿ ಅಭಿನಯ ಹಲವು ಪ್ರಶಸ್ತಿ ಜನರ ಅಪಾರ ಪ್ರೀತಿ.. ಈಗ ಎಲ್ಲವು ನೆನಪು ಎಂದರೆ ನಂಬಲು ಅಸಾಧ್ಯವಾಗಿದೆ. ಎರಡು ವರ್ಷದ ಕೆಳಗೆ  ನಟಿ ಮೇಘನರಾಜರನ್ನ ಮದುವೆಯಾಗಿ ದಾಂಪತ್ಯ ಜೇವನಕ್ಕೆಕಾಲಿಟ್ಟಿದ್ದರು.. ಇವರ ಈ ಅಕಾಲಿಕ ಮರಣ ಕುಟುಂಬದವರಿಗೆ ಮತ್ತು ಚಿತ್ರರಂಗಕ್ಕೆ ತೀವ್ರ ನೋವು ಉಂಟುಮಾಡಿದೆ.

ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಮತ್ತು ಕುಟುಂಬದವರಿಗೆ  ಧೈರ್ಯ ನೀಡಲಿ ಎಂದು ಚಿತ್ರೋದ್ಯಮ.ಕಾಂ ಕೋರುತ್ತದೆ

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply