ಮರೆಯದ ಮಾಣಿಕ್ಯ – ಶಂಕರ್ ನಾಗ್

“ಸತ್ತ ಮೇಲೆ ಮಲಗೋದು ಇದ್ದೇ ಇದೆ
ಎದ್ದಿದ್ದಾಗ ಏನಾದರೂ ಸಾಧಿಸು “

ಎಂಥ ಮಾತು ಸತ್ಯವಾದ ಮಾತು ಅಲ್ಲವೇ

ಆಟೋ ಅಂದ ಕೂಡಲೆ ನಮಗೆಲ್ಲಾ ನೆನಪಾಗೋದು ಒಬ್ಬರೇ ಆಟೋ ರಾಜ ಕರಾಟೆ ಕಿಂಗ್ ಶಂಕರ್ ನಾಗ್ ಸರ್, ಆಟೋ ಅಭಿಮಾನಿಗಳ ಆರಾಧ್ಯ ದೈವ ‘ಶಂಕರ್ ನಾಗ್ ‘ ರವರ ಜನುಮ ದಿನದ ಶುಭಾಶಯಗಳು 💐💜🌹

ನಮ್ಮ ಬೆಂಗಳೂರಿಗೆ ಮೆಟ್ರೋ ರೈಲು ತರಬೇಕೆಂಬ ಆಸೆ ನಿಮ್ಮದಾಗಿತ್ತು.

ಒಂದಾನೊಂದು ಕಾಲದಲ್ಲಿ ಮಾಲ್ಗುಡಿ ಡೇಸ್ ನಿಂದ ಶುರುವಾದ ನಿಮ್ಮ ಚಿತ್ರ ಪಯಣ ಸಾಗುತ್ತ ಮಿಂಚಿನ ಓಟ ಮೂಗನ ಸೇಡು ಜನ್ಮ ಜನ್ಮದ ಅನುಬಂಧದ ಜೊತೆ ಇಬ್ಬರು ಪ್ರೇಮಿಗಳ ಪ್ರೀತಿ ಎಂಥದು ಎಂಬುದು ತೋರಿಸಿದ ಚಿತ್ರ ಗೀತ “ಕೇಳದೆ ನಿಮಗೀಗ ದೂರದಲ್ಲಿ ಯಾರೊ ” ಎಷ್ಟೋ ಪ್ರೇಮಿಗಳು ತಮ್ಮ ಪ್ರೇಮವನ್ನು ನೆನೆದ ಕ್ಷಣ ಮತ್ತು ಸಂತೋಷಕೆ ಹಾಡು ಸಂತೋಷಕೆ ನನ್ನ ಜೀವ ನೀನು ಹಾಡು ಮರೆಯಲು ಸಾಧ್ಯವಿಲ್ಲ. ಸಾಂಗ್ಲಿಯಾನ ಚಿತ್ರದ ಅವರ ಪೋಲೀಸ್ ನಟನೆ ಎಂಥವರಿಗೂ ಬೆರಗು ಗೊಳಿಸುವ ಹಾಗಿದೆ ಸಿ. ಬಿ. ಐ ಶಂಕರ್ ಚಿತ್ರದ ನಟನೆ ಅಧ್ಭುತ.

ಅಣ್ಣಾವ್ರ ಜೊತೆ ನಟಿಸಿ ನಿದೇ೯ಶಿಸಿದ ಚಿತ್ರ “ಅಪೂರ್ವ ಸಂಗಮ ” ಇಬ್ಬರೂ ನಟರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ “ಭಾಗ್ಯ ಎನ್ನಲೇ ಪುಣ್ಯ ಎನ್ನಲೇ ಈ ಹಾಡು ಎಂದಿಗೂ ಮರೆಯಲಾಗದು. ಶಂಕ್ರಣ್ಣ ನಿದೇ೯ಶಿಸಿದ ಮತ್ತೊಂದು ಯಶಸ್ವಿ ಚಿತ್ರ “ಒಂದು ಮುತ್ತಿನ ಕಥೆ ” ಕಡಲ ತೀರದಲ್ಲಿ ನಡೆಯುವ ಕಥೆ ಪ್ರಪ್ರಥಮವಾಗಿ ಅಂಡರ್ವಾಟರ್ ನಲ್ಲಿ ಚಿತ್ರೀಕರಣಗೊಂಡ ಚಿತ್ರ ಮತ್ತು ಮೇರು ಪವ೯ತ ನಟನೆ ಅಮೋಘ ಸದಾ ಹೊಸ ಪ್ರಯತ್ನ ಪ್ರಯೋಗ ಮಾಡಿ ಅಭಿಮಾನಿಗಳಿಗೆ ರಂಜಿಸಬೇಕೆಂಬುದು ಅವರ ಆಸೆಯಾಗಿತ್ತು.

ಮತ್ತೊಂದು ಚಿತ್ರ ಆಟೋ ಚಾಲಕರ ಹಿನ್ನೆಲೆ ಒಳಗೊಂಡ “ಆಟೋ ರಾಜ” ನೈಜ ಅಭಿನಯಕ್ಕೆ ಸಾಕ್ಷಿ “ನಲಿವ ಗುಲಾಬಿ ಹೂವೆ ಮುಗಿಲ ಮೇಲೇರಿ ನಗುವೆ” ಈ ಹಾಡು ಎಷ್ಟು ಜನಪ್ರಿಯವಾಗಿದೆ . ಸಸ್ಪೆನ್ಸ್ ಚಿತ್ರ ಮಾಡಿದ “ಆಕ್ಸಿಡೆಂಟ್ ” ಮರೆಯಲು ಆಗುವುದಿಲ್ಲ.

ಸಾಮಾನ್ಯ ಜನರ ಜೀವನ ಆಧಾರಿತ ಚಿತ್ರ ನೋಡಿ ಸ್ವಾಮಿ ನಾವಿರೋದು ಹೀಗೆ ಮತ್ತು ಹೊಸ ಜೀವನ ಚಿತ್ರಗಳ ಅಭಿನಯ ಎಂದೂ ಮರೆಯಲಾಗದು “ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲ ” ಗೀತೆ ಯಾರಿಗೂ ಗೊತ್ತಿಲ್ಲ ಅನ್ನೋ ಹಾಗಿಲ್ಲ.

ಪಾದರಸದಂತಹ ನಟರು ನಿದೇ೯ಶಕರು ಹೊಸತನ ಹೊಸ ತಂತ್ರಜ್ಞಾನಕ್ಕೆ ನಾಂದಿ ಹಾಡಿದವರು .

ಕನಾ೯ಟಕ ಸಕಾ೯ರ ಪ್ರಶಸ್ತಿ :-

💐’ಮಿಂಚಿನ ಓಟ’ ಅತ್ಯುತ್ತಮ ಎರಡನೇ ಚಿತ್ರ .
👑’ಮಿಂಚಿನ ಓಟ’ ಅತ್ಯುತ್ತಮ ಚಿತ್ರಕಥೆ.
🎸ಅತ್ಯುತ್ತಮ ಚಿತ್ರ ‘ಆಕ್ಸಿಡೆಂಟ್ ‘
ಅತ್ಯುತ್ತಮ ನಿದೇ೯ಶಕ ‘ಆಕ್ಸಿಡೆಂಟ್ .

🎭ಮಿಂಚಿನ ಓಟ ಐಫಾ ಪ್ರಶಸ್ತಿ.

🤘ಐಫಾ ಅತ್ಯುತ್ತಮ ನಟ ಪ್ರಶಸ್ತಿ ‘ಒಂದಾನೊಂದು ಕಾಲದಲ್ಲಿ ‘.

ಅಣ್ಣ ‘ಅನಂತ್ ನಾಗ್ ‘ರವರು ಕೂಡ ಉತ್ತಮ ನಟ ಇಬ್ಬರೂ ಅಣ್ಣ ತಮ್ಮಂದಿರಹಾಗಿರದೆ ಸ್ನೇಹಿತರಾಗಿದ್ದರು. ತಮ್ಮನ ನಿದೇ೯ಶನ ಮತ್ತು ಕಾಯ೯ಚಟುವಟಿಕೆ ನೋಡಿ ತಾವೇ ಬೆರಗಾಗಿದ್ದು ಉಂಟು,

ನಮ್ಮ ಕನ್ನಡ ಚಿತ್ರರಂಗದ ಯಶಸ್ಸು ಆಸ್ಕರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಆಚರಿಸುವ ಅವಕಾಶ ಸಿಗುತ್ತಿತ್ತೇನೊ ವಿಧಿಯ ಮುಂದೆ ನಾವೆಲ್ಲರೂ ಶೂನ್ಯ ಮತ್ತೊಮ್ಮೆ ಈ ಕರುನಾಡಿನಲ್ಲಿ ಹುಟ್ಟಿಬನ್ನಿ 😢🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply