ಹೆಚ್ಚಾಗಿ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಚಿರಪರಿಚಿತ, ಸುಮಾರು 300 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
🦁ಲೂಸಿಫರ್ : ಮಲಯಾಳಂ ಸಿನಿರಂಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ, ಚಿತ್ರ ಬಾಕ್ಸ್ ಆಫೀಸ್ ನಲ್ಲಿ ವಿಶ್ವದಾದ್ಯಂತ 200 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಪ್ಯಾನ್ ಇಂಡಿಯ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ. ದುರಾಸೆ ಹಾಗೂ ರಾಜಕೀಯ ಕಥಾ ಹಂದರ ಹೊಂದಿರುವ ಸಿನಿಮಾ, ಚಿತ್ರದಲ್ಲಿ ವಿವೇಕ್ ಓಬಿರಾಯ್, ಮಂಜು ವಾರಿಯರ್ ಮತ್ತು ಸಾಯಿ ಕುಮಾರ್ ನಟಿಸಿದ್ದಾರೆ.
🐅ದೃಶ್ಯಂ : ಕನ್ನಡ, ತೆಲುಗು, ಹಿಂದಿಯಲ್ಲಿ ದೃಶ್ಯಂ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದೆ, ಮೊದಲ ಮಲಯಾಯಳಂ ನಲ್ಲಿ ಚಿತ್ರಿಸಿದ್ದು, ಜೀತು ಜೋಸೆಫ್ ಅವರ ಈ ಥ್ರಿಲ್ಲರ್ ಸಿನಿಮಾ ಕುಟುಂಬ ಸಮೇತ ನೋಡುವ ಚಿತ್ರ. ಈ ಸಿನಿಮಾದ ಸೀಕ್ವೆಲ್ ದೃಶ್ಯಂ 2 ಅಮೆಜಾನ್ ಪ್ರೈಂ ನಲ್ಲಿ ಈಗಾಗಲೇ ರಿಲೀಸ್ ಆಗಿದೆ.
🐈ಕನುಪಾಪ : ಸಿನಿಮಾ ಇಂಟೆನ್ಸ್ ಥ್ರಿಲ್ಲರ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದೆ, ಸಿನಿಮಾದ ಕಥೆ ಇರುವುದೇ ಕಣ್ಣು ಕಾಣದ ವ್ಯಕ್ತಿ ಸೈಕೋ ಸೀರಿಯಲ್ ಕಿಲ್ಲರ್ ನಿಂದ ಒಬ್ಬ ಹುಡುಗಿಯನ್ನು ಕಾಪಾಡುವುದು, ಕನ್ನಡದಲ್ಲಿ ಇದೇ ಚಿತ್ರ “ಕವಚ” ಶಿವರಾಜ್ ಕುಮಾರ್ ಅಧ್ಭುತ ನಟನೆ.
🦁ಪುಲಿಮುರುಗನ್ – ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಪ್ರಮುಖವಾಗಿ ಚಿತ್ರಿಸಲಾಗಿದೆ, ಪ್ರೇಕ್ಷಕರನ್ನು ರಂಜಿಸಲು ಬೇಕಾದ ಎಲ್ಲಾ ಅಂಶಗಳೂ ಇವೆ, ಮೋಹನ್ ಲಾಲ್ ರವರ ಅಭಿಮಾನಿಗಳು ನೋಡಲೇಬೇಕಾದ ಚಿತ್ರ.
40 ವಷ೯ದ ಚಿತ್ರಬದುಕಿನಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿವೆ,
💙5 ರಾಷ್ಟ್ರೀಯ ಪ್ರಶಸ್ತಿ
🧡9 ಕೇರಳ ಸಕಾ೯ರ ಮತ್ತು ಫಿಲಂ ಫೇರ್ ಪ್ರಶಸ್ತಿ.
💚ಹಾನರರಿ ಡಾಕ್ಟರ್ ಆಫ್ ಲೆಟರ್ಸ್ ರ್ಶ್ರೀ ಶಂಕರಾಚಾರ್ಯರ ಯೂನಿವರ್ಸಿಟಿ ಆಫ್ ಸಾಂಸ್ಕ್ರಿಟ್ ವತಿಯಿಂದ.
ಕನ್ನಡದಲ್ಲಿ ಪುನೀತ್ ರಾಜಕುಮಾರ್ ಚಿತ್ರದ “ಮೈತ್ರಿ ” ಯಲ್ಲಿ ತಮ್ಮ ನಟನೆಯಿಂದ ಕನ್ನಡಕ್ಕೆ ಇನ್ನೂ ಹತ್ತಿರವಾದವರು.
ತಮಿಳು ತೆಲುಗು ಮತ್ತು ಇತರೆ ಭಾಷೆಯಲ್ಲಿ ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
🌹ತಮಿಳಿನಲ್ಲಿ ಗೋಪುರ ವಾಸಲಿಲ್, ಇರುವರ್, ಪಾಪ್ ಕಾರ್ನ್, ಉನ್ನೈಪೋಯ್ ಒರುವನ್, ವಿಜಯ್ ಜೊತೆ ಜಿಲ್ಲಾ.
🎩ತೆಲುಗಿನಲ್ಲಿ ಗಾಂಡೀವಂ, ಮನ್ಮಥ, ಜನತಾ ಗ್ಯಾರೇಜ್.
👒ಹಿಂದಿಯಲ್ಲಿ ಕಂಪನಿ, ತೇಜ್, ಆಗ್ ಚಿತ್ರಗಳಲ್ಲಿ ನಟನೆ.
ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲಿ ಹಾಗೂ ಇವರ ಎಲ್ಲಾ ಚಿತ್ರಗಳೂ ಯಶಸ್ವಿಯಾಗಲಿ ಎಂದು ಆಶಿಸೋಣ 🌹
ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ 🙏