ಮಲ್ಲಿ ಮದುವೆ

ಬಡವ ಶ್ರೀಮಂತರ ನಡುವಣ ಕಂದಕದ ಈ ಕಥೆಯ ಕರ್ತೃ ತಮಿಳುನಾಡಿನ  ಮಾಜಿ ಮುಖ್ಯಮಂತ್ರಿ ಶ್ರೀ ಸಿ.ಎನ್. ಅಣ್ಣಾದೊರೆ ಅವರು!


ಬಡವರ ರಕ್ತ ಹೀರುವ ಸಾಹುಕಾರ. ಅವನ ಬಡ್ಡಿ ವಸೂಲಿಯ ತರೀಕಾಗಳನ್ನು ತಡೆಯಲಾರದೇ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಆನಂದನ ತಂದೆಯೂ ಒಬ್ಬ. ಅಪ್ಪನ ಸಾಲ ತೀರಿಸಲು ಹಣದೊಂದಿಗೆ ಓಡಿ ಬಂದ ಆನಂದನಿಗೆ ಕಂಡದ್ದು ಅವನ ತಂದೆಯ ಶವ. ನೇಣಿಗೆ ಶರಣಾಗಿರುತ್ತಾನೆ ಆತ.

ಸಿಟ್ಟಿನಿಂದ ಸಾಹುಕಾರನನ್ನು ಕೊಲ್ಲಲು ಹೋದಾಗ ಅವನಿಗೆ ಎದುರಾಗುವವನು ಗೋವಿಂದ. ಅವರಿಬ್ಬರಿಗೂ ಒಂದು ಹೆಣ ಸಿಗುತ್ತದೆ. ಅದು ಥೇಟ್ ಆನಂದನಂತೆಯೇ ಇರುವ ಪರಮಾನಂದನದು.

ಸಾಹುಕಾರನ ಮಗಳು ಸರಸಾ ಮಹಾ ಅಹಂಕಾರಿ. ಮಗ ಶಂಕರ ತನ್ನ ಮನೆಯ ಕೆಲಸದಾಕೆ ಮಲ್ಲಿಯನ್ನು ಪ್ರೀತಿಸುತ್ತಾನೆ. ಸರಸಾಳ ದುರ್ನಡತೆಗೆ ಸದಾ ಬಲಿಯಾಗುವವಳು ಮಲ್ಲಿ. ಸಾಹುಕಾರನ ಸಹಾಯಕ ತಿರುಪತಿ ಒನ್ ಲೈನರ್‍ಗಳನ್ನು ಹೊಡೆಯುವುದು ಮಜಾ ಕೊಡುತ್ತದೆ.

ಕಥೆ ಅಲ್ಲಿ ಇಲ್ಲಿ ಸುತ್ತಿ ಕೊನೆಗೆ ಶುಭಂ.

ಆನಂದನಾಗಿ ರಾಜ್‍ಕುಮಾರ್ ದುಷ್ಟ ಪತಿಯಾಗಿ ಪತ್ನಿಯನ್ನು ಗೋಳು ಹುಯ್ದುಕೊಳ್ಳುತ್ತಾರೆ. ದುಷ್ಟ ಸಾಹುಕಾರನ ಮಗಳು ಸರಸಾಳನ್ನೇ ಮದುವೆಯಾಗಿ ಅವಳಿಗೆ ಬುದ್ಧಿ ಕಲಿಸುವ ಪಾತ್ರ. ಉದಯಕುಮಾರ್ ಈ ನಾಟಕದ ಸೂತ್ರಧಾರಿ ಗೋವಿಂದನಾಗಿ ನಟಿಸಿದ್ದಾರೆ. ಬಾಲಕೃಷ್ಣ ಧರಿಸುವಂತಹ ದುಷ್ಟ ಸಾಹುಕಾರನ ಪಾತ್ರ ಇಲ್ಲಿ ಮಾಡಿರುವುದು ಕೆ.ಎಸ್.ಅಶ್ವತ್ಥ್. ರಾಜಾಶಂಕರ್ ಶಂಕರನಾಗಿ, ಸಾಹುಕಾರ್ ಜಾನಕಿ ಸರಸಾಳಾಗಿ, ಲೀಲಾವತಿ ಮಲ್ಲಿಯಾಗಿ ನಟಿಸಿದ್ದಾರೆ. ತಿರುಪತಿಯಾಗಿ ನರಸಿಂಹರಾಜು.

ಪಿ.ಸುಶೀಲ ಪಿಬಿಎಸ್ ‘ಒಲವಂತೆ ಗೆಲುವಂತೆ’ ರಾಜಾಶಂಕರ್, ಲೀಲಾವತಿಗೆ, ‘ಆಡೋಣ ಬಾ ಬಾ ಗೋಪಾಲ’ ಎಸ್. ಜಾನಕಿ ಹಾಡು ಸಾಹುಕಾರ್ ಜಾನಕಿಗೆ, ‘ಮದುವೆ ಎಂಬ ಸಂತೆಗೆ ಮಾರಲೆಂದು ಮೆಲ್ಲಗೆ’ ಪಿ. ಸುಶೀಲ ಲೀಲಾವತಿಗೆ ಹಾಡಿದ್ದಾರೆ. ಉಳಿದ ಐದು ಹಾಡುಗಳು ಅಷ್ಟು ಕೇಳಿಲ್ಲ ನಾನು. ನನ್ನ ನಿನ್ನ ಸಲ್ಲಾಪವೆಲ್ಲ, ಮಹಾಪುರುಷರೆ ಪ್ರೇರಕ ಶಕ್ತಿ ಎರಡೂ ಎಸ್ ಜಾನಕಿ. ನಿನ್ನಾ ಸೇರಿದಾಗ ಹಾಡು ಪಿ.ಸುಶೀಲ ಮತ್ತು ಪಿಬಿಎಸ್.

ಕುಡಿದು ತೂರಾಡುತ್ತಾ ರಾಜ್, ಉದಯ್ ಜಿಕೆವೆಂಕಟೇಶ್ ಮತ್ತು ಪಿಬಿಎಸ್ ಧ್ವನಿಗಳಲ್ಲಿ ನಗುವೇ ನಾಕ ಅಳುವೇ ನರಕ ಒಂದು ರೀತಿ ಚೆನ್ನಾಗಿದೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply