ನಿರ್ದೇಶಕರು– ವಿನೋದ್ ಅನಂತೋಜು.
ಸಂಗೀತ– ಆರ್. ಹೆಚ್ .ವಿಕ್ರಂ
ಚಿತ್ರದ ಕಥೆ ತೀರಾ ಸರಳ. ಚಿತ್ರದ ನಾಯಕ ರಾಘವ ಮಧ್ಯಮವರ್ಗದ ಸಾಧಾರಣ ಯುವಕ .
ಗೋಪಾಲ ಅವನ ಪ್ರಾಣ ಸ್ನೇಹಿತ .ಅವನಿಗೆ ಜ್ಯೋತಿಷ್ಯ ಎಂದರೆ ಮಹಾ ನಂಬಿಕೆ.
ಕಾಲೇಜು ಓದುವ ದಿನಗಳಿಂದ ರಾಘವನ ಮಾವನ ಮಗಳು ಸಂಧ್ಯಾ ಹಾಗೂ ರಾಘವ ಪರಸ್ಪರ ಇಷ್ಟಪಡುತ್ತಿರುತ್ತಾರೆ.ಆತನ ತಂದೆ ದುಡುಕು ಸ್ವಭಾವದ ಮನುಷ್ಯರು. ಸಂಧ್ಯಾಳ ತಂದೆಯೋ ದುರಾಸೆಯ ಪಾಕಡಾ ಸ್ವಭಾವದ ಮನುಷ್ಯ .ಸಂಧ್ಯಾ ಕಾಲೇಜು ಮುಗಿಯುತ್ತಾ ಬರುತ್ತಿರುವಾಗ ತನ್ನ ಮನಸ್ಸಿನ ಮಾತನ್ನು ರಾಘವನಿಗೆ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ರಾಘವ ಆತುರ ಬಿದ್ದು ರಸ್ತೆಯಲ್ಲಿಯೇ ಸಂಧ್ಯಾಳಿಗೆ ಐ ಲವ್ ಯು ಹೇಳುವಾಗ ಸಂಧ್ಯಾಳ ತಂದೆ ಅದನ್ನು ಕಂಡು ಅವಳನ್ನು ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಾರೆ .ಅಂದಿನಿಂದ ರಾಘವನಿಗೆ ಮತ್ತು ಸಂಧ್ಯಾಳಿಗೆ ಮೌನ ಸಂಘರ್ಷ ಶುರುವಾಗುತ್ತದೆ. ಅವರಿಬ್ಬರ ನಡುವೆ ಮಾತುಕತೆ ಮುರಿದು ಬೀಳುತ್ತದೆ.
ಗೋಪಾಲ ಮೊಬೈಲ್ ಅಂಗಡಿಯನ್ನು ಇಟ್ಟಿದ್ದರಿಂದ ದೊಡ್ಡ ಮೊಬೈಲ್ ಶಾಪಿನಲ್ಲಿ ತನ್ನ ಅಂಗಡಿಗೆ ಮೊಬೈಲ್ ಗಳನ್ನು ಖರೀದಿಸಲು ಹೋಗುತ್ತಿರುತ್ತಾನೆ .ಅಲ್ಲಿಯೇ ಕೆಲಸ ಮಾಡುವ ಗೌತಮಿಯೊಂದಿಗೆ ಪ್ರೇಮದಲ್ಲಿ ಬೀಳುತ್ತಾನೆ .ಅವಳ ಹುಟ್ಟಿದ ದಿನಾಂಕ ಹಾಗೂ ಸಮಯವನ್ನು ತನ್ನ ಅವಳ ಜಾತಕಗಳನ್ನು ಹೊಂದಿಸಲು ತೆಗೆದುಕೊಳ್ಳುತ್ತಾನೆ.
ರಾಘವನ ತಂದೆ ಒಂದು ಚಿಕ್ಕ ಪ್ರಮಾಣದ ಹೋಟೆಲನ್ನು ಅದೇ ಹಳ್ಳಿಯಲ್ಲಿ ನಡೆಸುತ್ತಿರುತ್ತಾರೆ. ರಾಘವನ ತಾಯಿ ಬಾಂಬೆ ಚಟ್ನಿ ಮಾಡುವುದರಲ್ಲಿ ಪರಿಣತರು .ರಾಘವ ಆಕೆಯ ಬಳಿಗೆ ಚಟ್ನಿ ಮಾಡುವುದನ್ನು ಕಲಿತು ಅದರಲ್ಲಿ ನಿಪುಣನಾಗಿ ತಂದೆಗೆ ಹೋಟೆಲ್ ನಲ್ಲಿ ಸಹಾಯ ಮಾಡುತ್ತಿರುತ್ತಾನೆ. ಆದರೆ ಮಹತ್ವಾಕಾಂಕ್ಷಿಯಾದ ರಾಘವನಿಗೆ ಗುಂಟೂರಿನಲ್ಲಿ ಸ್ವಂತ ಹೋಟೆಲ್ ಇಟ್ಟು ತನ್ನ ಬಾಂಬೆ ಚಟ್ನಿಯ ರುಚಿಯನ್ನು ಎಲ್ಲರಿಗೂ ತೋರಿಸಬೇಕೆಂಬ ಆಗ ಮಹದಾಸೆ ಇರುತ್ತದೆ .
ಆದರೆ ರಾಘವನ ತಂದೆಗೆ ಅದು ಇಷ್ಟವಿರುವುದಿಲ್ಲ.ಅದಕ್ಕಾಗಿ ರಾಘವ ತಂದೆಗೆ ದುಂಬಾಲು ಬಿದ್ದು ಹೋಟೆಲ್ ಮಾಡಲು ಒಪ್ಪಿಸುತ್ತಾನೆ.ಸಂಧ್ಯಾಳ ತಂದೆಯ ಖಾಲಿಬಿದ್ದಿದ್ದ ಅಂಗಡಿಯನ್ನು ಭೋಗ್ಯಕ್ಕೆ ತೆಗೆದುಕೊಳ್ಳಲು ರಾಘವ ಹೋಗುತ್ತಾನೆ .ಹಣಕ್ಕಾಗಿ ಗೋಪಾಲನ ದೊಡ್ಡಪ್ಪನ ಬಳಿ ಚೀಟಿ ಹಾಕಿಟ್ಟಿದ್ದ ಹಣವನ್ನು ತೆಗೆದುಕೊಳ್ಳಲು ರಾಘವನ ತಂದೆ ನಿರ್ಧರಿಸುತ್ತಾರೆ. ಆದರೆ ಅದೇ ಸಮಯದಲ್ಲಿ ಗೋಪಾಲನ ದೊಡ್ಡಪ್ಪ ಸುಮಾರು ಜನಕ್ಕೆ ಚೀಟಿ ಹಣವನ್ನು ಕೊಡಲಾಗದೆ ಪರಾರಿಯಾಗುತ್ತಾರೆ.
ಬೇರೆ ದಾರಿಯಿಲ್ಲದೆ ಸಮಯದಲ್ಲಿ ಸಂಧ್ಯಾ ಮತ್ತು ಅವನ ನಡುವೆ ಮೊದಲಿನ ಪ್ರೇಮ ಮತ್ತೆ ಚಿಗುರೊಡೆಯುತ್ತದೆ. ರಾಘವನ ತಂದೆ ಹಳೆಯ ಜಮೀನನ್ನು ಸಂಧ್ಯಾಳ ತಂದೆಗೆ ಮಾರಿ ಭೋಗ್ಯದ ಹಣವನ್ನು ಹೊಂದಿಸಿ ಕೊಡುತ್ತಾರೆ.ಸಂಧ್ಯಾಳ ತಂದೆಗೆ ಮಗಳನ್ನು ದೊಡ್ಡ ಹುದ್ದೆಯಲ್ಲಿರುವ ಶ್ರೀಮಂತರಿಗೆ ಕೊಡಬೇಕೆಂಬ ಆಸೆ .ಅದಕ್ಕಾಗಿ ಹಲವಾರು ವರಗಳ ಅನ್ವೇಷಣೆಯಲ್ಲಿ ಇರುತ್ತಾರೆ.ಆದರೆ ಸಂಧ್ಯಾಳಿಗೆ ರಾಘವನನ್ನು ಮದುವೆಯಾಗಬೇಕೆಂಬ ಆಸೆ ಮಾತ್ರ ಅಳಿಯುವುದಿಲ್ಲ.
ರಾಘವ ತನ್ನ ಕನಸಿನ ಹಿಂದೆ ಬಿದ್ದು ಗುಂಟೂರು ಸೇರುತ್ತಾನೆ. ಹೊಸ ಹೋಟೆಲನ್ನು ಸಡಗರ ಸಂಭ್ರಮದಿಂದ ಶುರುಮಾಡುತ್ತಾನೆ.
ಅವನಿಗೆ ಹೊಸ ಸಾಹಸದಲ್ಲಿ ಎದುರಾಗುವ ಅಡಚಣೆಗಳೇನು??!!!ಅವನ ಹೊಸ ಹೋಟೆಲ್ ಯಶಸ್ವಿಯಾಗಿ ನಡೆಯುತ್ತದೆಯೇ??!!!ಪರಾರಿಯಾದ ಗೋಪಾಲನ ಚಿಕ್ಕಪ್ಪ ವಾಪಸ್ ಬರುವರೇ??!!!ಸಂಧ್ಯಾ ಮತ್ತು ಅವನ ನಡುವಿನ ಪ್ರೇಮ ಫಲಿಸಿ ವಿವಾಹದಲ್ಲಿ ಕೊನೆಗೊಳ್ಳುತ್ತದೆಯೇ??!!!ಗೋಪಾಲ ಮತ್ತು ಗೌತಮಿಯ ವಿವಾಹ ನೆರವೇರುತ್ತದೆಯೇ??!!!
ಎಂಬೆಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಚಲನ ಚಿತ್ರವನ್ನು ನೋಡಿ. ಅಲ್ಲಲ್ಲಿ ಬೀಪ್ ಮಾಡುವ ಸಂಭಾಷಣೆಗಳು ಇದ್ದರೂ ಸಹ ಯಾಕೋ ಮಾಡಿಲ್ಲ .ಅದೊಂದು ಮುಜುಗರದ ಸಂಗತಿ .ಅದನ್ನು ಬಿಟ್ಟರೆ ಮಧ್ಯಮವರ್ಗದ ಕನಸುಗಳಿಗೆ ಬೀಳುವ ಎಲ್ಲೆಗಳು.. ಅಂಕುಶಗಳನ್ನು…. ಯಶಸ್ವಿಯಾಗಿ ಚಿತ್ರಿಸಿದ್ದಾರೆ.ವಿಜಯ್ ದೇವರಕೊಂಡನ ತಮ್ಮ ಆನಂದ್ ದೇವರಕೊಂಡ ರಾಘವನ ಪಾತ್ರದಲ್ಲಿ ತುಂಬಾ ಸಹಜವಾಗಿ ಅಭಿನಯಿಸಿದ್ದಾರೆ. ಸಂಧ್ಯಾಳ ಪಾತ್ರದಲ್ಲಿ ಕನ್ನಡಿಗಳಾದ ವರ್ಷಾಳ ಅಭಿನಯ ಕೂಡಾ ಅಷ್ಟೇ ಚೆನ್ನಾಗಿದೆ.ಎಲ್ಲಾ ಪಾತ್ರಧಾರಿಗಳು ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಒಂದು ಸಲ ಸರಾಗವಾಗಿ ನೋಡಿಸಿಕೊಂಡು ಹೋಗುವ ಸಿನಿಮಾ.