ಮುಂಗಾರು ಮಳೆಯಲ್ಲಿ ಗೋಲ್ಡನ್ ಸ್ಟಾರ್ ತಾಯಿಯ ಪಾತ್ರವನ್ನು ಮರೆಯಲು ಸಾಧ್ಯವೇ? ಗಾಳಿಪಟದಲ್ಲಿ ಭಾವನಿ ಮಾತು ಅಮ್ಮನ ನಡುವಿನ ಜಗಳದ ಜುಗಲ್ಬಂದಿ ಯಂತೂ ನಮ್ಮ ಮನೆಗಳಲ್ಲೇ ನಡೆಯುತ್ತಿರುವ ಘಟನೆಯಂತೆಯೇ ಅನಿಸುತ್ತೆ. ಪ್ರತಿ ಮನೆಯಲ್ಲೂ ಅಮ್ಮ- ಮಗಳ ಜಗಳ ಹೀಗೆ ಇರುತ್ತೆ. ಅಷ್ಟರಮಟ್ಟಿಗೆ ಆ ತಾಯಿಯ ಪಾತ್ರಕ್ಕೆ ನ್ಯಾಚುರಲ್ ಲೇಪನ ಲೇಪಿಸಿದ ಕೀರ್ತಿ ಸಲ್ಲಬೇಕಾದದ್ದು ಸುಧಾ ಬೆಳವಾಡಿ ಎಂಬ ಕಲಾವಿದೆಗೆ. ನ್ಯಾಚುರಲ್ ಆಗಿ ನಡೆಯುವ ಸೀನಿನಂತೆ ಅವರ ನ್ಯಾಚುರಲ್ ಡೈಲಾಗ್ ಡೆಲಿವರಿ ಸ್ಟೈಲ್ ಕೂಡ ಅವರ ಪ್ಲಸ್ ಪಾಯಿಂಟ್.
ಭೈರಪ್ಪನವರ ಕಾದಂಬರಿ ಆಧಾರಿತ “ಮತದಾನ”, ಮೊಗ್ಗಿನ ಮನಸು, ಕಾರ್ನಾಡರ ನಿರ್ದೇಶನದ “ಕಾಡು”, ಸೀತಾರಾಮ್ ನಿರ್ದೇಶನದ ಕಾಫಿ ತೋಟ, ಬಚ್ಚನ್, ಗೂಗ್ಲಿ, ಮೀರಾ ಮಾಧವ ರಾಘವ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚಿನ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಹಿರಿಯ ಕಲಾವಿದೆ. ಸುಧಾರವರು ಕನ್ನಡ ಅಭಿನೇತ್ರಿ, ಭಾರ್ಗವಿ ನಾರಾಯಣ್ ಮತ್ತು ಬೆಳವಾಡಿ ನಂಜುಂಡಯ್ಯ ನಾರಾಯಣ್ ರವರ ಮಗಳು. ತಂದೆ, ಬೆಳವಾಡಿ ನಂಜುಂಡಯ್ಯ ನಾರಾಯಣ್ ರಂಗಭೂಮಿಯಲ್ಲಿ ‘ಮೇಕ್ ಅಪ್ ನಾಣಿ’ ಎಂದು ಸುಪ್ರಸಿದ್ಧರಾಗಿದ್ದರು. ಅವರೊಬ್ಬ ಕನ್ನಡ ನಟರಾಗಿದ್ದರು ಸಹಿತ. ಒಡಹುಟ್ಟಿದವರು ಸುಜಾತ, ಪ್ರಕಾಶ್, ಮತ್ತು ಪ್ರದೀಪ್, ಪ್ರಕಾಶ್ ಬೆಳವಾಡಿಯವರು ಭಾರತೀಯ ರಂಗಭೂಮಿ, ಚಲನ ಚಿತ್ರ ಮತ್ತು ಕಿರುತೆರೆಯಲ್ಲಿ ಮೀಡಿಯಾ ಪರ್ಸನ್, ನ್ಯಾಷನಲ್ ಫಿಲಂ ಅವಾರ್ಡ್ ವಿಜೇತರಾಗಿದ್ದಾರೆ.
ಸುಧಾರವರು ಎಂ.ಜಿ.ಸತ್ಯರಾವ್ ರವರನ್ನು ಮದುವೆಯಾಗಿದ್ದಾರೆ. ಸತ್ಯರಾವ್ ಅತ್ಯುತ್ತಮ ಪಟ್ಕಥಾ ಲೇಖಕರು. ಅವರು ಸ್ವದೇಸ್ ಹಿಂದಿ ಚಲನ ಚಿತ್ರಕ್ಕೆ ಪಟ್ಕಥೆಯನ್ನು ಬರೆದು ವಿಖ್ಯಾತರಾಗಿದ್ದಾರೆ. ಈ ದಂಪತಿಗಳ ಮಕ್ಕಳು, ಶಾಂತನು ಮತ್ತು ಸಂಯುಕ್ತ. ಸಂಯುಕ್ತ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕೆಲಸಮಾಡುತ್ತಿದ್ದಾರೆ.
ಇಂತಿಪ್ಪ ಸುಧಾ ಬೆಳವಾಡಿಯವರೊಡನೆ ಚಿತ್ರೋದ್ಯಮದ ವಿದ್ಯಾಶ್ರೀ ನಡೆಸಿದ ಮಾತುಕತೆ
ಚಿತ್ರೋದ್ಯಮ: :-ರಂಗಭೂಮಿಯ ಪ್ರವೇಶ ಆದದ್ದು ಯಾವಾಗ ಮತ್ತು ನಟಿಸಿದ ರಂಗಭೂಮಿ ಪಾತ್ರಗಳು ಯಾವುದು?
ಸುಧಾ ಬೆಳವಾಡಿ : – ನಮ್ಮ ತಂದೆ-ತಾಯಿಗಳು ರಂಗಭೂಮಿಯ ಕಲಾವಿದರು ಹಾಗಾಗಿ ನನಗೆ ರಂಗಭೂಮಿಯ ಪರಿಚಯ ಚಿಕ್ಕವಯಸ್ಸಿನಿಂದಲೇ ಆಗಿತ್ತು ಜೊತೆಗೆ ನಾನು ಶಂಕರ್ ನಾಗ್ ರವರ ನಾಗಮಂಡಲ ,ಕಲಾ ಗಂಗಾ, ಕೈಲಾಸಪರ್ವತ ನಾಟಕಗಳಲ್ಲಿ ಪಾತ್ರ ಮಾಡಿದ್ದೇನೆ. ಪ್ರತಿಯೊಂದು ಪಾತ್ರಗಳು ಕೂಡ ಹೊಸ ಅನುಭವವನ್ನು ನೀಡುತ್ತದೆ.
ಚಿತ್ರೋದ್ಯಮ: :- ರಂಗಭೂಮಿಯ ಕ್ಷೇತ್ರದಲ್ಲಿ ನಿಮಗೆ ತಿರುವು ಕೊಟ್ಟಂತಹ ನಾಟಕ ಯಾವುದು ಆಗ ನಿಮ್ಮ ಅನುಭವ ಹೇಗಿತ್ತು?
ಸುಧಾ ಬೆಳವಾಡಿ:- ರಂಗಭೂಮಿ ಎಂದರೆ ಅದೊಂದು ಜೀವಂತಿಕೆಯ ತವರೂರು. ಪ್ರತಿಯೊಂದು ಪಾತ್ರಕ್ಕೂ ಕೂಡ ಜೀವವನ್ನು ತುಂಬುತ್ತಾರೆ ನೈಜ ಪಾತ್ರಗಳ ನೈಜ ಅನುಭವವನ್ನು ರಂಗಭೂಮಿ ಕಾಣಬಹುದಾಗಿದೆ. ರಂಗಭೂಮಿ ಕಲಾವಿದರಿಗೆ ಸನ್ಮಾನ ಪ್ರಶಂಸೆ ಗಿಂತ ಅಭಿನಯ ಮುಖ್ಯವಾಗಿರುತ್ತದೆ. ರಂಗಭೂಮಿ ಎಂದರೆ ಅದೊಂದು ಹರಿಯುವ ನೀರು, ಲವಲವಿಕೆ ತುಂಬುವ ನಿತ್ಯ ವಿನೂತನ ಚೇತನ ಎಂದಿದ್ದಾರೆ.
ಚಿತ್ರೋದ್ಯಮ::- ನಿಂಮ್ಗೆ ಹೆಸರು ತಂದುಕೊಟ್ಟಂತಹ ಸಿನಿಮಾ ಯಾವುದು? ಮತ್ತು ಸದಾ ನೆನಪಿಸಿಕೊಳ್ಳುವಂತಹ ಸಿನಿಮಾ ಯಾವುದು?
ಸುಧಾ ಬೆಳವಾಡಿ :- ನಾನು ಮೊದಲಿಗೆ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಪಾತ್ರಮಾಡಿದ್ದೂ ಅಂದರೆ ತಾಯಿ ಸಾಹೇಬ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಸ್ವರ್ಣಕಮಲ ಪದಕ ದೊರೆತಿದೆ. ನಂತರ ಮುಂಗಾರುಮಳೆ ಮುಂಗಾರುಮಳೆ ಚಿತ್ರ ಕಮರ್ಷಿಯಲ್ ಆಗಿತ್ತು ನನಗೆ ಸಾಕಷ್ಟು ಹೆಸರನ್ನು ತಂದುಕೊಟ್ಟವು ಚಿತ್ರವಾಗಿದೆ.
ಚಿತ್ರೋದ್ಯಮ: ನಿಮ್ಮ ಮುಂದಿನ ಚಿತ್ರಗಳು ಯಾವುವು?
ಸುಧಾ ಬೆಳವಾಡಿ :- ಸದ್ಯ ಈಗ ನಾನು ಗಾಳಿಪಟ ಪಾರ್ಟ್ 2, ಓ ಮೈ ಗಾಡ್, ಹಗ್ಗ, ವಾರ್ಡ್ ನಂಬರ್ 11, ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ.
ಚಿತ್ರೋದ್ಯಮ: ಸಿನಿಮಾ ಕ್ಷೇತ್ರದಲ್ಲಿ ಬರದಿದ್ದರೆ ಯಾವ ಹುದ್ದೆಯಲ್ಲಿ ಇರಬೇಕು ಅಥವಾ ಏನಾಗಬೇಕೆಂದು ನೀವು ಬಯಸಿದ್ದೀರಿ?
ಸುಧಾ ಬೆಳವಾಡಿ :- ನನಗೆ ಜಾಹಿರಾತು ಕ್ಷೇತ್ರ ಅಂದರೆ ತುಂಬಾ ಇಷ್ಟ ಹಾಗಾಗಿ ನಾನು ಜಾಹೀರಾತೊಂದು ಕ್ಷೇತ್ರದಲ್ಲಿ ಮುಂದುವರೆಯಬೇಕೆಂದು ಬಯಸಿದ್ದೆ. ಇಲ್ಲವಾದರೆ ನಾನು ಅರ್ಥಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದ ದ್ದರಿಂದ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಬೇಕೆಂದು ತುಂಬಾ ಆಸೆ ಪಟ್ಟಿದ್ದು ಆದರೆ ಕೈ ಬೀಸಿ ಕರೆದಿದ್ದು ರಂಗಭೂಮಿ ಕ್ಷೇತ್ರ ಮತ್ತು ಚಿತ್ರರಂಗದ ಕ್ಷೇತ್ರ ಹಾಗಾಗಿ ಚಿತ್ರರಂಗದಲ್ಲಿ ಮುಂದುವರಿಯುತ್ತಿದ್ದೇನೆ
ಚಿತ್ರೋದ್ಯಮ: ಸಂಗೀತ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆಯೇ ಗೀತಾಭ್ಯಾಸ ಮಾಡುತ್ತಿದ್ದೀರಾ?
ಸುಧಾ ಬೆಳವಾಡಿ :- ಹೌದು ನನಗೆ ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಇದೆ ಲಾಕ್ ಡೌನ್ ಕಾರಣದಿಂದಾಗಿ ಸಾಕಷ್ಟು ಸಮಯ ಸಿಕ್ಕಿತ್ತು ಆನ್ಲೈನ್ ಮೂಲಕ ನಾನು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದೇನೆ ಜೊತೆಗೆ ಹಾಡನ್ನು ಸ್ವಪ್ರೇರಿತವಾಗಿ ಕಲಿಯುತ್ತಿದ್ದೇನೆ
ಚಿತ್ರೋದ್ಯಮ: ನಿಮಗೆ ಚಿತ್ರ ನಿರ್ದೇಶಕಿ ಯಾಗಿ ಕೆಲಸ ಮಾಡುವ ಆಸಕ್ತಿ ಇದೆಯೇ? ಯಾವುದಾದರೂ ಸಿನಿಮಾ ಧಾರಾವಾಹಿಯನ್ನು ನಿರ್ದೇಶಿಸಬೇಕೆಂದು ಆಸಕ್ತಿ ಇದೆಯೇ?
ಸುಧಾ ಬೆಳವಾಡಿ :- ಹೌದು ನನಗೆ ತುಂಬಾ ಆಸಕ್ತಿ ಇದೆ. ಉತ್ತಮ ಕಥೆ ಮತ್ತು ಸಂಭಾಷಣೆ ದೊರೆತರೆ ನಾನು ಖಂಡಿತವಾಗಿಯೂ ನಿರ್ದೇಶನವನ್ನು ಮಾಡುತ್ತೇನೆ.
ಪ್ರಸ್ತುತ ಯುವ ಕಲಾವಿದರು ಚಿತ್ರರಂಗದಲ್ಲಿ ತೋರುವ ಆಸಕ್ತಿ ನೋಡಿದರೆ ನನಗೆ ತುಂಬಾ ಖುಷಿಯಾಗುತ್ತದೆ ಕೆಲಸ ಮಾಡುವ ಆಸಕ್ತಿ ನನಗಿದೆ
ಚಿತ್ರೋದ್ಯಮ:: ನಿಮ್ಮ ಜೀವನದ ಪ್ರೇರಣ ಶಕ್ತಿ ಯಾರು?
ಸುಧಾ ಬೆಳವಾಡಿ:- ನನ್ನ ಜೀವನದ ಶಕ್ತಿ, ಪ್ರೇರಣೆ ನನ್ನ ಚೈತನ್ಯ ಎಲ್ಲವೂ ಕೂಡ ನನ್ನ ತಾಯಿ. ಅವರ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಎಷ್ಟು ಚಿತ್ರಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿ ಮಾಡಲು ಸಾಧ್ಯವಾಯಿತು
ಚಿತ್ರೋದ್ಯಮ: ಒಬ್ಬ ನಟಿಯಾಗಿ,ಗೃಹಿಣಿಯಾಗಿ ನಿಮ್ಮ ಕೆಲಸದ ಒತ್ತಡವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ?
ಸುಧಾ ಬೆಳವಾಡಿ :- ಹೌದು ನಾನೊಬ್ಬ ನಟಿ ಮತ್ತು ಗೃಹಿಣಿ ತಾಯಿಯಾಗಿ ಕೂಡ ನಿಜ ಜೀವನದ ಪಾತ್ರ ನಿರ್ವಹಿಸಬೇಕಾಗುತ್ತದೆ.
ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಪಾತ್ರವನ್ನು ಮಾಡುತ್ತಿದ್ದರೂ ಕೂಡ ನಾನು ಬೆಳಿಗ್ಗೆ 6:00 ಗೆ ಹೋಗಿ ಸಂಜೆ ಆದಷ್ಟು ಬೇಗ ಮನೆಗೆ ಹಿಂದಿರುಗುತ್ತೇನೆ. ಮನೆಯವರೊಂದಿಗೆ ಸ್ವಲ್ಪಸಮಯ ಕಾಲವನ್ನು ಕಳೆಯಲು ಜೊತೆಗೆ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಸಮಯದ ಹೊಂದಾಣಿಕೆ ನನಗೆ ಸಹಕಾರಿಯಾಗುತ್ತದೆ.
ಚಿತ್ರೋದ್ಯಮ: ಇಂದಿನ ಯುವಕರಿಗೆ ನಿಮ್ಮ ಸಲಹೆ ?
ಸುಧಾ ಬೆಳವಾಡಿ :-ಶ್ರದ್ದೆ, ಸತತ ಪರಿಶ್ರಮ, ಸಮಯದ ಹೊಂದಾಣಿಕೆ, ಜೊತೆಗೆ ಕುಟುಂಬದ ಪ್ರೋತ್ಸಾಹ ಇದ್ದರೆ ಅಸಾಧ್ಯವದಾದನ್ನು ಸಾಧಿಸಬಹುದು.
ವ್ಯಕ್ತಿತ್ವ :- ಸುಧಾ ಬೆಳವಾಡಿ ಅವರದು ಸಹಜ ಮತ್ತು ಸಾತ್ವಿಕ ವ್ಯಕ್ತಿತ್ವ ಅವರದು. ಸಂದರ್ಶನದ ಸಮಯದಲ್ಲಿ ತುಂಬಾ ಸಹಜವಾಗಿ ಮಾತನಾಡಿದರು. ಜೊತೆಗೆ ಪ್ರೀತಿಯಿಂದ ಒಂದು ಹಾಡನ್ನು ಹಾಡಿ ಎಂದು ಕೇಳಿದ ತಕ್ಷಣ ತಮಗೆ ಇಷ್ಟವಾದ ನಾಗಮಂಡಲ ಚಿತ್ರದ ಹಾಡನ್ನು ಹಾಡಿದರು ನಿಜಕ್ಕೂ ಒಬ್ಬ ನಟಿ ಸಾಮಾನ್ಯ ವ್ಯಕ್ತಿಗಳ ಜೊತೆ ಸಾಮಾನ್ಯರಾಗಿ, ಮಕ್ಕಳ ಜೊತೆ ಮಗುವಾಗಿ ಮಾತನಾಡಿದ್ದು ವೈಯಕ್ತಿಕವಾಗಿ ನನಗಂತೂ ತುಂಬಾ ಸಂತೋಷವನ್ನು ತಂದಿದೆ. ಸುಧಾ ಬೆಳವಾಡಿಯವರ ಮುಂದಿನ ಎಲ್ಲಾ ಚಿತ್ರಗಳಿಗೂ ಚಿತ್ರೋದ್ಯಮ.ಕಾಂ ತಂಡದಿಂದ ಒಂದು ಆಲ್ ದಿ ಬೆಸ್ಟ್.
ವಿದ್ಯಾ ಶ್ರೀ ಬಿ.
ಬಳ್ಳಾರಿ