ತಾರಾಗಣ:- ಆದಿತ್ಯ, ಆಶಿಕ ಸೋಮಶೇಖರ್, ಮುಖ್ಯ ಮಂತ್ರಿ ಚಂದ್ರು, ಜೈ ಜಗದೀಶ್, ಶೋಭನ್,ಚಂದನ ಗೌಡ.
ನಿರ್ದೇಶನ:-ಬಾಲು ಚಂದ್ರಶೇಖರ್.
ಸಂಗೀತ:- ಜಾನಿ ನಿತಿನ್.
ಹಿನ್ನಲೆ ಸಂಗೀತ:- ಅನೂಪ್ ಸೀಳಿನ್
ಸಂಕಲನ:- ಶ್ರೀಕಾಂತ್.
ಮನುಷ್ಯ ಸತ್ತಮೇಲೆ ಅವನು ಮಾಡಿರುವ ಒಳ್ಳೆ ಕೆಲಸ ಕಾರ್ಯಗಳ ಮೇಲೆ ಅವನನ್ನ ಜ್ನ್ಯಾಪಕ ಇಟ್ಕೋಳೋದು, ಕೊಂಡಾಡೋದು ನಡೆಯುತ್ತೆ, ಅದುವೇ ” ಮುಂದುವರಿದ ಅಧ್ಯಾಯ” ಅನ್ನೋ ಡೈಲಾಗಿನಿಂದ ಸಿನಿಮಾ ಪ್ರಾರಂಭವಾಗುತ್ತೆ, ಆ ಮಾತು ಮುಗಿಯುತ್ತಿದಂತೆ ಹಲವು ಕೊಲೆಗಾಳಾಗುತ್ತೆ, ಕೆಲವರು ಕಾಣೆಯಾಗ್ತಾರೆ, ಯಾರ ಕೊಲೆ, ಕೊಲೆಗಾರ ಯಾರು, ಕಾಣೆಯಾದೊರು ಯಾರು??.. ಸಿನಿಮಾದ ಮೊದಲ 5 ನಿಮಿಷದ ಪ್ರಸಂಗವು ಬಹಳ ಕಲಸುಮೇಲೋಗರವಾಗಿರುವಂತೆ ಕಂಡು ಬರುವುದು, ಆದ್ರೆ ಅವೆಲ್ಲದಕ್ಕು ಸಿನಿಮಾ ಸಾಗ್ತಿದ್ದಂತೆ ತಾರ್ಕಿಕ ವಿವರಣೆ ನೀಡಲಾಗಿದೆ.
ನಗರದಲ್ಲಿ ಒಂದು ಮಧ್ಯರಾತ್ರಿ ನಡೆಯುವ ವಿವಿಧ ಘಟನೆಗಳಿಗೆ ಒಂದಕ್ಕೊಂದು ಸಂಭದವಿದ್ದು, ಅದನ್ನ ಪತ್ತೆ ಮಾಡುವ,ಕಳಚಿಕೊಂಡ ಕೊಂಡಿಯ ಜೋಡಿಸುವ ಬುದ್ಫಿವಂತ ಪೊಲೀಸ್ ಇನ್ವೆಸ್ಟಿಗೆಟಿಂಗ್ ಆಫೀಸರ್ “ಬಾಲಾ” ಪಾತ್ರದಲ್ಲಿ ಆದಿತ್ಯ ಬಹಳ ಚುರುಕ್ಕಾಗಿ ಕಾಣಿಸಿದ್ದಾರೆ. ” ಸಾಕ್ಷಿ, ಅಚ್ಚರಿ, ವಿಶ್ವಾಸ, ಕ್ರಾಂತಿ, ಎಲ್ಲವೂ ಒಂದು ರೀತಿಯ ಭಾವನೆಗಳು ಎನ್ನುವುದು ಎಷ್ಟು ಸತ್ಯವೋ ಈ ಸಿನಿಮಾದಲ್ಲಿ ಬರುವ ಕೆಲವು ಪಾತ್ರಗಳ ಹೆಸರು ಕೂಡ ಇದಾಗಿದ್ದು , ಖಂಡಿತವಾಗಿಯೂ ಭಾವ ತುಂಬಿ ಹೆಸರಿನಂತೆ ಅರ್ಥಪೂರ್ಣವಾಗಿ ಅಭಿನಯಿಸಿದ್ದಾರೆ ಅನ್ನೋದಂತೂ ನಿಜ. ರಾಬಾರ್ಟ್ ಪಾತ್ರದಲ್ಲಿ ನಟಿಸಿರುವ ಶೋಭನ್ ಅನ್ನೋ ಮತ್ತೋರ್ವ ಹೊಸ ಪ್ರತಿಭೆ ಗಮನ ಸೆಳೆಯುತ್ತಾರೆ
ಥ್ರಿಲ್ಲರ್ ಸಸ್ಪೆನ್ಸ್ ಆಧಾರಿತ ಕಥೆಯನ್ನ ಸ್ವಾರಸ್ಯಕರವಾದ ಸಿನಿಮಾ ರೂಪದಲ್ಲಿ ಪ್ರಸ್ತುತ ಪಡಿಸಲು ಬೇಕಾದ ಎಲ್ಲಾ ಅಂಷಗಳನ್ನ ಹದವಾಗಿ ಮೇಳೈಸಿದ್ದಾರೆ ನಿರ್ದೇಶಕರು. ರುಚಿಕರವಾದ ಕೇಕಿಗೆ ಕ್ರೀಮ್ ಎಷ್ಟು ಅವಶ್ಯವೋ ಒಂದೊಳ್ಳೆ ಥ್ರಿಲ್ಲರ್ ಸಿನಿಮಾಗೆ ಉತ್ತಮ ಕ್ಲೈಮ್ಯಾಕ್ಸ್ ಕೂಡ ಅಷ್ಟೇ ಅಗತ್ಯ ಅನ್ನೋದನ್ನ ನಿರ್ದೇಶಕ ಬಾಲ ಚಂದ್ರಶೇಖರ್ ಸಾಬೀತು ಮಾಡಿದ್ದಾರೆ, ಪ್ರಾರಂಭದಿಂದ ಕಡೆಯವರೆಗೂ ಎಲ್ಲೂ ಸಹ ಬಿಗಿ ತಪ್ಪದೆ ಚಿತ್ರಕಥೆಯನ್ನ ಹೆಣೆಯುವಲ್ಲಿ ಯಶಸ್ವಿ ಸಾಧಿಸಿದೆ ಇಡೀ ಚಿತ್ರ ತಂಡ.ಅನೂಪ್ ಸೀಳಿನ್ ರ ಹಿನ್ನಲೆ ಸಂಗೀತ ಸಿನಿಮಾಗೆ ಮತ್ತಶ್ಟು ಬೆರಗು ತಂದಿದ್ದು ಸಂಕಲನಕಾರ ಶ್ರೀಕಾಂತರ ಕೈಚಳಕದಿಂದ ಹುರುಪು ಹೆಚ್ಚಿದೆ.
ಎರಡು ಘಂಟೆಗಳ ಕಾಲ ಸದಭಿರುಚಿಯ ಮನೋರಂಜನೆ, ಉತ್ತಮ ಸಿನಿಮಾ ನೋಡಿದಾಗ ಸಿಗುವ ಆತ್ಮತೃಪ್ತಿಯನ್ನ ಈ ಸಿನಿಮಾ ಪೂರೈಸಲಿದೆ.
ಈ ಮಧ್ಯೆ ತಂಗಾಲಿಯಲ್ಲಿ ತೇಲುವಂತೆ ಮಾಡುತ್ತದೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಮತ್ತೆ ಸಂಚಿತ್ ಹೆಗ್ಡೆ ಅವರ ಗಾಯನ
ಚಿತ್ರೋದ್ಯಮ.ಕಾಂ ರೇಟಿಂಗ್ – 8.5/10