ಮೊದಲ PAN ಇಂಡಿಯಾ ಸಿನೆಮಾ.

Presence Across the Nation” ಅನ್ನೋದು PAN ನ ವಿಸ್ತಾರ ರೂಪ, ಅಂದ್ರೆ ಒಂದೇ ಸಿನಿಮಾನ ಭಾರತದ ಹಲವು ಭಾಷೆಗಳಲ್ಲಿ ಡಬ್ ಮಾಡಿ, ಅದನ್ನ  ದೇಶದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡುವರು.ಈನಡುವೆ ಸಿನಿಮಾದ ಪ್ರಚಾರದ ವೇಳೆ ಹೆಚ್ಚಾಗಿ ಕೇಳಿ ಬರುವ ಪದ ಇದಾಗಿದೆ.

ಪ್ರಪಂಚದಲ್ಲೆ ಅತಿ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡುವ ದೇಶ ನಮ್ಮದು,ವರ್ಷಕ್ಕೆ ಅಂದಾಜು 1500 ಸಿನಿಮಾಗಳು.(ಅನ್ಯ ಭಾಷೆಗಳನ್ನು ಸೇರಿ) ಎಲ್ಲಾ ಭಾಷೆಯ ಸಿನಿಮಾ ನೋಡಲು ಭಾರತಾದ ಸಾಮಾನ್ಯ ಸಿನಿ ಪ್ರೇಕ್ಷಕನಿಗೆ ಸಾಧ್ಯವಾಗುವುದಿಲ್ಲ , ಅದಕ್ಕೆ ಕಾರಣ ಭಾಷೆ ಮೊದಲ ತಡೆ ಗೋಡೆಯಾದರೆ, ಎರಡನೆಯದು ಕೆಲವು ಸಿನಿಮಾಗಳನ್ನ ಆಯಾ ಪ್ರಾಂತ್ಯದ ಜನಗಳ ಮನೋಭಿರುಚಿಯನ್ನ ಗಮನದಲ್ಲಿಟ್ಟುಕೊಂಡು ತಯಾರಿಸಿರ್ತಾರೆ, ಉದಾ:- ಕರ್ನಾಟಕದ ಜನರ ಪರಮಾನ್ನವಾದ “ರಾಗಿ ಮುದ್ದೆ” ಜಮ್ಮು ಕಾಶ್ಮೀರದವರಿಗೆ  ಏಕೆ ರುಚಿಸುತ್ತೆ.

ಕೆಲವೊಮ್ಮೆ ಎಲ್ಲರೂ ನೋಡಿ ಆಹ್ಲಾದಿಸುವಂತ ವಿಷಯವುಳ್ಳ ಸಿನಿಮಾ ತಾಯರಾಗುತ್ತೆ ಅವನ್ನ “Universal Films” ಅಂತಾರೆ, ಇತ್ತೀಚೆಗೆ ಕನ್ನಡದಲ್ಲಿ ಬಂದ KGF,  ತೆಲುಗಿನ ಬಾಹುಬಲಿ, ತಮಿಳಿನ ರೋಬೋ ಇತ್ಯಾದಿ.

ಈ PAN INDIA ಸಂಸ್ಕೃತಿಗೆ ನಾಂದಿ ಹೇಳಿದ್ದು  “ಚಂದ್ರಲೇಖ”ಅನ್ನುವ ತಮಿಳಿನ ಚಿತ್ರ. 1948ರಲ್ಲಿ ಬಿಡುಗೆಡೇಯಾದ “ಚಂದ್ರಲೇಖ” ಸಿನಿಮಾದ ನಿರ್ದೇಶನ ಮತ್ತು ನಿರ್ಮಾಣದ ಸಂಪೂರ್ಣ ಜವಾಬ್ದಾರಿನ ಹೋತ್ತಿದ್ದು “ಜಮೀನಿ ಪಿಚರ್ಸ್ ಸ್ಥಾಪಕರಾದ S.S. ವಾಸನ್” ಅವರು.( ಸುಬ್ರಹ್ಮಣ್ಯಂ ಶ್ರೀನಿವಾಸನ್) 1942ರಲ್ಲಿ ಸಿನಿಮಾ ಸೆಟ್ಟೇರಿತ್ತು, M.K ರಾಧಾ, T. R.ರಾಜಕುಮಾರಿ ಹಾಗೂ ರಂಜನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ರು. ಇದೊಂದು ಮನೋರಂಜನೆ ಭರಿತ ಅತಿ ಅದ್ದೂರಿ ಫ್ಯಾಂಟಸಿ ಡ್ರಾಮಾ ಸಿನಿಮಾ ಆಗಿತ್ತು,ಬೃಹತ್ ಸೆಟ್ಗಳು,ಕಲಾವಿದರ ದೊಡ್ಡ ಬಳಗ ಎಲ್ಲಾ ಸೇರಿ ನಿರ್ಮಾಣದ ವೆಚ್ಚ ಅಂದಿನ ದಿನಗಳಲ್ಲೇ 35 ಲಕ್ಷ ರೂಪಾಯಿ ದಾಟಿತ್ತಿ,ವಾಸನ್ ಅವ್ರು ಸಿನಿಮಾಗಾಗಿ ತಮ್ಮಲ್ಲಿದ್ದ  ಎಲ್ಲಾ ಹಣ ಹೂಡಿ ಸಾಲ್ಲದಕ್ಕೆ ತಮ್ಮ ಆಸ್ತಿಯನ್ನು ಸಹ ಗಿರವಿ ಇಟ್ಟಿದ್ದರಂತೆ.ಹಲವು ಅಲೆಗಳನ್ನ ಎದುರಿಸಿ,ಹಳ್ಳಗಳನ್ನ ದಾಟಿದ ತರುವಾಯ ಸಿನಿಮಾ 1948ರಲ್ಲಿ ಬಿಡುಗಡೆಗೆ ಸಿದ್ಧವಾಗಿತ್ತು.

ತಮಿಳ್ ಒಂದರಲ್ಲೇ ಬಿಡುಗಡೆ ಮಾಡಿದ್ರೆ ಖಂಡಿತ 35 ಲಕ್ಷ ರೂಪಾಯಿ ವಸೂಲಿ ಮಾಡಲು ಸಾಧ್ಯವಿಲ್ಲ ಅನ್ನೋ ವಿಷ್ಯ ಅವ್ರಿಗೆ ತಿಳಿದಿತ್ತು, ಆ ಕಾರಣಕ್ಕಾಗಿ ಅವ್ರು ಸಿನಿಮಾನ, ತೆಲುಗಿನಲ್ಲಿ, ಮಲಯಾಳಂ ಜೊತೆಗೆ ಹಿಂದಿಯಲ್ಲಿಯೂ ವಾಯ್ಸ್ ಡಬ್ ಮಾಡಿಸಿದ್ರು. ಹಿಂದಿ ಪ್ರೇಕ್ಷಕನಿಗೆ ಇಷ್ಟವಾಗುವ ಅಂಶಗಳನ್ನು ಕೂಡ ಪ್ರತ್ಯೇಕವಾಗಿ ಹಿಂದಿ ಆವೃತ್ತಿಗೆ ಜೋಡಿಸಿದರು. ಉತ್ತರ ಭಾರತದ ಮೂಲೆ ಮೂಲೆಯಲ್ಲೂ  “ಚಂದ್ರಲೇಖ” ಸಿನಿಮಾದ ಪೋಸ್ಟರ್ ಮತ್ತು ಪ್ರಚಾರದ ಬ್ಯಾನ್ನರ್ ಗಳು ಹರಿದಾಡುತ್ತಿದ್ವು. ಪೋಸ್ಟರ್ ನೋಡಿದ ಪ್ರತಿ ಒಬ್ಬರಿಗೂ ಸಿನಿಮಾ ನೋಡಲೇ ಬೇಕು ಅನ್ನೋ ಕಾತುರ ಆವರಿಸಿತ್ತು.

ಸಿನಿಮಾದ ಪ್ರಚಾರಕ್ಕೆ 3 ಲಕ್ಷ ರೂಪಾಯಿ ಖರ್ಚಾಗಿತ್ತು ಆಗಿತ್ತು. ಅತಿ ದೊಡ್ಡ ಸಾಹಾಸಕ್ಕೆ ಕೈ ಹಾಕಿದ್ರು ವಸಾನ್,1948 ಏಪ್ರಿಲ್ 9ಕ್ಕೆ ಸಿನಿಮಾ ಬಿಡುಗಡೆ  ದೇಶದಾದ್ಯಂತ 3,(ಹಿಂದಿ,ತೆಲುಗು, ತಮಿಳ್) ಭಾಷೆಯಲ್ಲಿ ಒಂದೇ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಯ್ತು,ಸಿನಿಮಾ ಸೂಪರ್ ಹಿಟ್ ಆಯ್ತು. ಭಾರತದಾದ್ಯಂತ  ಪ್ರೇಕ್ಷಕ ಮಹಾಶಯರು, ಸಿನಿಮಾಗೆ ಸಂಬಂಧ ಪಟ್ಟವರು, ಮಾಧ್ಯಮ ಮಿತ್ರರು ಭಾರಿ ಮೆಚ್ಚುಗೆನ ವ್ಯಕ್ತಪಡಿಸಿದ್ರು,ವಾಸನ್ ಅವರ ಗಲ್ಲಾ ಪೆಟ್ಟಿಗೆ ತುಂಬಿತು, ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿತು. ಉತ್ತರ ಮತ್ತು ದಕ್ಷಿಣ ಭಾರತದ ಸಿನಿಮಾಗಳಿಗೆ ‘ಚಂದ್ರಲೇಖ’  ಸೇತುವೆಯಾಯ್ತು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply