ಯಾರೇ ಕೂಗಾಡಲಿ

Yaare koogadali

ಯಾರಿವನು.. ಯಾರಿವನು..
…ಇವನ್ಯಾರ ಮಗನೋ ಕಾಣೆ ನಾ ಕಾಣೆ ಈ ಹಾಡು ಮನಸ್ಸಿಗೆ ತುಂಬಾ ಹತ್ತಿರವಾಗೋ ಸಾಲು, ತಮಿಳಿನ ಖ್ಯಾತ ನಿದೇ೯ಶಕರು ಸಮುದ್ರಕಣಿ ನಿದೇ೯ಶನದಲ್ಲಿ ಬಂದ ಪೋರಾಳಿ ಚಿತ್ರವನ್ನು ಕನ್ನಡ ನೇಟಿವಿಟಿ ತಕ್ಕಂತೆ ಚಿತ್ರಿಸಲಾಗಿದೆ, ಕಥೆಯ ಮೂಲ ನಾಯಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಾಯಕಿ ಭಾವನ, ಹಾಸ್ಯ ನಟರು ಹಾಗೂ ಸಹ ಕಲಾವಿದರಾಗಿ ಯೋಗೇಶ್, ಸಾಧು ಕೋಕಿಲ , ಅತಿಥಿ ನಟರಾಗಿ ಗಿರೀಶ್ ಕಾರ್ನಾಡ್, ಸಹನಟಿ ಸಿಂಧು ಲೋಕನಾಥ್, ಮಾಳವಿಕ ಅವಿನಾಶ್ ಮತ್ತಿತರರು.
ಅಣ್ಣಾವ್ರ ಸಂಪತ್ತಿಗೆ ಸವಾಲ್ “ಯಾರೇ ಕೂಗಾಡಲಿ ” ಶೀಷಿ೯ಕೆ.

ಹಳ್ಳಿಯಲ್ಲಿ ನಡೆಯುವ ಕಥೆ ಆಸ್ತಿಗಾಗಿ ನಾಯಕನನ್ನು ಕೊಲ್ಲುವ ಹುನ್ನಾರ ಖಳನಾಯಕ ರವಿಶಂಕರ್ ವಿಭಿನ್ನ ನಟನೆ, ನಾಯಕನ ಪ್ರೇಯಸಿ ಕೊಲೆಸಂಚು. ನಾಯಕನ ಹೆಸರಿನಲ್ಲಿ ಇರುವ ಸಮಸ್ತ ಆಸ್ತಿ ಹೊಡೆಯಲು ಕುಮಾರ ಹುಚ್ಚ ಅಂತೇಳಿ ಹುಚ್ಚಾಸ್ಪತ್ರೆ ಸೇರಿಸೋದು, ಗಿರೀಶ್ ಕಾರ್ನಾಡ್ ಉತ್ತಮ ಸಂದೇಶ,
ನಾಯಕ ಜೊತೆ ನಟೇಶ ಯೋಗೀಶ್ ಹುಚ್ಚಾಸ್ಪತ್ರೆಯಿಂದ ಪರಾರಿ ಆಗುವ ಸಂದಭ೯ ಜೀವ ಉಳಿಸಿಕೊಳ್ಳಲು ಪಟ್ಟಣಕ್ಕೆ ಬಂದು ಜೀವನ ಮಾಡುವ ಪ್ರತಿಯೊಂದು ಸನ್ನಿವೇಶ ನೋಡುಗರಿಗೆ ಮೆಚ್ಚುಗೆ, ಕೊನೆಯಲ್ಲಿ ಸಂಬಂಧಿಕರು ಪುನೀತ್ ರನ್ನು ಹುಚ್ಚ ಅನ್ನೋದಕ್ಕೆ ಮೂಲ ಕಾರಣ ಏನನ್ನೋದು ಗೊತ್ತಾಗುವುದು.
ಯೋಗೇಶ್ ಪುನೀತ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ಅಲ್ಲೇ ಸಿಂಧು ಲೋಕನಾಥ್ ನೋಡಿ ಯೋಗೀಶ್ ಪ್ರೇಮದಲ್ಲಿ ಬೀಳುವುದು, ಸಿಂಧು ಮನೆಯಲ್ಲಿ ತುಂಬಾ ಕಷ್ಟ ತಾನೇ ಮನೆಯ ಜವಾಬ್ದಾರಿ ಹೊತ್ತು ಯಾವುದೇ ಪ್ರೀತಿ ಪ್ರೇಮಕ್ಕೆ ಜಾಗವಿರದ ಸಂದಭ೯ ಕಡ್ಡಿಪುಡಿ ಚಂದ್ರು ದುಂದುವೆಚ್ಚ ಮಾಡೋದು ಅಕ್ಕನ ಮಗಳಿಗೆ ತೊಂದರೆ ನೀಡೋದು ಕುಡಿಯೋದು ಅಕ್ಕನ ಮಗಳು ಹುಚ್ಚಿ ಅನ್ನೋ ಪಟ್ಟಕ್ಕೆ ತಂದಾಗ ಮನೆಯಲ್ಲಿ ಆಗುವ ಜಗಳವನ್ನು ಅಕ್ಕನ ಮಗಳು ಎಲ್ಲರ ಹಾಗೆ ಅವರೂ ಮನುಷ್ಯರೇ ಎಂದು ತಿಳಿಸುವ ಪ್ರಯತ್ನ..

ಯೋಗೀಶ್ ತನ್ನ ಪ್ರೀತಿಯನ್ನು ಹೇಳಲು ಪಡುವ ಪಾಡು ಚೇಷ್ಟೆ ಹಾಸ್ಯ ಸನ್ನಿವೇಶಗಳು ಜೊತೆಗೆ ಕವನದ ಸಾಲುಗಳು…
ಪುನೀತ್ ಭಾರತಿ ಪಾತ್ರ ನಟಿ ಭಾವನ ಜೀವನದಲ್ಲಿ ಯಾರನ್ನೂ ನಂಬದೆ ಯಾವುದೇ ವಿಷಯದಲ್ಲಿ ಭಯ ತುಂಬಿದ ಹೆಣ್ಣು ಗಂಡಸರೆಂದರೆ ತುಂಬಾ ದೂರ ನಂತರ ಕುಮಾರ ಪುನೀತ್ ಒಳ್ಳೆಯ ಗುಣಗಳನ್ನು ನೋಡಿ ಕೊನೆಯಲ್ಲಿ ಪ್ರೀತಿ ವ್ಯಕ್ತಪಡಿಸುವ ರೀತಿ.. ಮುಗ್ಧ ನಟನೆ ಎಲ್ಲವೂ ಶ್ಲಾಘನೀಯ.
ನಾವು ಜೀವನದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು, ನಮ್ಮಿಂದ ನಮ್ಮ ಜೊತೆ ಇರುವವರು ಬೆಳೆಯಬೇಕು “ಮನಸ್ಸಿದ್ದಲ್ಲಿ ಮಾಗ೯ ಇದ್ದೇ ಇದೆ ” ಎಂಬ ಸಾರಾಂಶ.
ಪುನೀತ್ ರವರನ್ನು ಮೊದಲ ಬಾರಿಗೆ ನೋಡಿದ್ದು ಈ ಚಿತ್ರದ ಚಿತ್ರೀಕರಣದಲ್ಲಿ. ನಿದೇ೯ಶಕರು ಸಮುದ್ರಕಣಿ ಮಧ್ಯಮ ಕುಟುಂಬದ ಕಥೆ ಎಲ್ಲರಿಗೂ ಹಿಡಿಸುವುದು, ಹಸಿವಿಗಾಗಿ ಏನೆಲ್ಲ ಕಷ್ಟ ಪಡುತ್ತೇವೆ, ಹಸಿವು ನೀಗಿಸಲು ಎಷ್ಟೆಲ್ಲ ಹೋರಾಟ ಮಾಡುತ್ತೇವೆ ಅನ್ನೋದನ್ನು ವಿಸ್ತಾರವಾಗಿ ತೋರಿಸಿರೋದು,
ಸಂಗೀತ ವಿ ಹರಿಕೃಷ್ಣ, ಸಾಹಿತ್ಯ ಯೋಗರಾಜ್ ಭಟ್ ಮತ್ತಿತರು, ನಿಮಾ೯ಪಕರು ಪಾವ೯ತಮ್ಮ ರಾಜ್ ಕುಮಾರ್.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply