“ಯುವರತ್ನ” ನವ ಆಶಾಕಿರಣ..

ಕನ್ನಡದ ದೊಡ್ಡ ಸಿನಿಮಾಗಳು ಯಾವಾಗ ಬರುತ್ತದೆ? ಚಿತ್ರಮಂದಿರಗಳಲ್ಲಿ ಮತ್ತೆ ಯಾವಗ ಸಂಭ್ರಮಾಚರಣೆ ಆಗುತ್ತೇ?  ಅನ್ನೋ ಪ್ರಶ್ನೆ ಸಿನಿಮಾ ಅಭಿಮಾನಿಗಳಿಗೂ ಮತ್ತು ಖುದ್ದು ಸಿನಿಮಾದವರಿಗು ಯಕ್ಷಪ್ರಶ್ನೆಯಾಗಿತ್ತು, ಕಗ್ಗ0ಟಾಗಿತ್ತು ..

ಈ ಪ್ರಶ್ನೆಗೆ ಸಮಾಧಾನವನ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ” ಸಿನಿ ತಂಡ ಕತ್ತಲ ತೆರೆಎಳೆದಿದ್ದಾರೆ, ಏಪ್ರಿಲ್ 1 2021ಕ್ಕೆ ಯುವರತ್ನ ಸಿನಿಮಾವನ್ನು ನಮಗೆ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಲ್ಲೇ ಪ್ರಸ್ತುತ ಪಡಿಸಲು ಹೊಂಬಾಳೆ ಫಿಲಂಸ್ ನವರು ಸಿದ್ಧರಾಗಿದ್ದರೆ.

ಯುಗಯುಗಾದಿ ಕಳೆದರೂ, ಯುಗಾದಿ ಮತ್ತೆ ಬರಲಿದೆ, ಹಿಂದೂ ಪಂಚಾಂಗದ ಪ್ರಕಾರ ಏಪ್ರಿಲ್ತಿಂಗಳಲ್ಲಿ ಬರಲಿರುವ ಯುಗಾದಿಹಬ್ಬ ಈ ಬಾರಿ ಎಲ್ಲರ ಬದುಕಲ್ಲು ಹೊಸಹುರುಪು, ಹುಮ್ಮಸ್ಸು ಮತ್ತು ಹರುಷವನ್ನ ತರುವದಾಗಿನಂಬಿದ್ದು, ಕನ್ನಡ ಚಿತ್ರರಂಗಕ್ಕೆ “ಯುವರತ್ನ” ನವಯಶಸ್ಸಿನ ನಾಂದಿ ಹಾಡಲಿದೆ ಎಂದು ನಂಬಿದ್ದೇವೆ.. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿ, ದೊಡ್ಡ ತಾರಾಗಣ ಹೊಂದಿರುವ ಈ ಚಿತ್ರಕ್ಕೆ ಭಾರೀ ಕಾತುರ-ನಿರೀಕ್ಷೆ ಹುಟ್ಟು ಹಾಕಿದೆ. 

ರಾಜ್ಯಾದ್ಯಂತ ಕೋವಿಡ್ಡಿನ ಪ್ರಕರಣಗಳು ಕಡಿಮೆಯಾಗಿದ್ದು ಮುಂಬರುವ ದಿನಗಲ್ಲಿ ಸಿನಿಮಾ ಸೇರಿದಂತೆ ಎಲ್ಲವೂ ಸಹ ಜಸ್ಥಿತಿಗೆ ತಲುಪಲಿದೆ.

ಇವುಗಳ ಜೊತೆಗೆ ಮತ್ತೊಂದು ಸುದ್ದಿಹೊರಬಂದು ಹರಿದಾಡಿದೆ. ಅದೇನಂದ್ರೆ ಸ್ಟಾರ್ ನಾಯಕರಾದ ನಟಸಿಂಹ “ಬಾಲಕೃಷ್ಣ” ಅವರ ಚಿತ್ರವೊಂದರಲ್ಲಿ ಪುನೀತ್ ಅಭಿನಯಿಸುತ್ತಿದ್ದಾರೆ..

ಬಾಲಕೃಷ್ಣಅವರ ತಂದೆ NTR  ಅವರಿಗೂ ಡಾ. ರಾಜ್ ಕುಟುಂಬಕ್ಕೂ ಅವಿನಾಭಾವ ಸಂಭಂಧವಿದ್ದು ,ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಾಲಯ್ಯ ಅಭಿನಯದ 100ನೆ ಸಿನಿಮಾವಾದ “ಗೌತಮಿಪುತ್ರಶಾತಕರ್ಣಿ“ಯಲ್ಲಿ ಹಾಡಿನ ಸನ್ನಿವೇಶದಲ್ಲಿ ನಟಿಸಿ ಬಂದಿದ್ರು, ನಂತರ ಅಪ್ಪು ಅಭಿನಯದ ಚಕ್ರವ್ಯೂಹ ಸಿನಿಮಾಗಾಗಿ NTR ಮೊದಲ ಬಾರಿಗೆ ಕನ್ನಡದಲ್ಲಿ ಹಾಡೊಂದನ್ನ ಹಾಡಿದ್ದರು. ಎರಡು ತಲೆಮಾರು ಕಳೆದರೂ ಈ ಎರಡು ಕುಟುಂಬಗಳ ನಡುವೇ ಹಾರ್ದಿಕತೆ ಚೂರೂ ಮಾರ್ಪಾಡಗಿಲ್ಲಅನ್ನೋದು ಹೆಮ್ಮೆಯ ವಿಷಯ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply