ಯುವರತ್ನ ಸಿನಿಮಾಗೆ ತೊಂದರೆ

ಕರ್ನಾಟಕ ಸರ್ಕಾರ ನೆನ್ನೆ ರಾತ್ರಿ ಹೊಸ ನಿರ್ಬಂಧವನ್ನ ಹೇರಿದೆ ಅದರ ಪ್ರಕಾರ 50% ಜನ ಮಾತ್ರ ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ವೀಕ್ಷಿಸಬಹುದು, ಕೊರೊನಾದ ಎರಡನೇ ಅಲೆಯನ್ನ ತಡೆಯಲು ರಾಜ್ಯ ಸರಕಾರವು ಈ ನಿರ್ಧಾರವನ್ನ ಕೈಗೊಂಡಿದೆ. ಚಿತ್ರಮಂದಿರದ ಮಾಲೀಕರಿಗಾಗಲಿ, ವಾಣಿಜ್ಯ ಮಂಡಲಿಯ ಸದಸ್ಯರಿಗಾಗಲಿ ಯಾವುದೇ ಮುಂಗಡ ಮಾಹಿತಿ ನೀಡಿದ, ಸಂಜೆ ಆದೇಶವನ್ನು ಹೊರಡುಸಿ ನಾಳೆಯಿಂದಲೆ ಇದು ಜಾರಿಗೊಳ್ಳಲಿದ್ದು ಈ ನಿಲುವಿಗೆ ಎಲ್ಲರು ಬದ್ಧರಾಗಬೇಕು ಎಂದು ಏಕಾಏಕಿ ಭಾರವ ಹೇರಿದ.

ಯುವರತ್ನ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಗೆಯಾಗಿ ಎಲ್ಲೆಡೆ ಒಳ್ಳೆ ಪ್ರತಿಕೆಯೇ ದೊರಕಿದ್ದು, ಹೆಚ್ಚಾಗಿ ಫಾಮಿಲಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ, ಭಾನುವಾರದ ವರೆಗೂ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ಗಳ ಮುಂಗಡ ಬುಕಿಂಗ್ ಕೂಡ ಆಗಿದ್ದು ಈ ನಿರ್ಧಾರ ಜಾರಿಗೊಂಡಲ್ಲಿ ವರ್ಷಗಳ ಕಾಲ ಸತತವಾಗಿ ಶ್ರಮಿ ಸಿನಿಮಾ ತಯಾರಿಸಿದ ಇಡೀ ಸಿನಿಮಾ ತಂಡಕ್ಕೆ, ವಿತರಕರಿಗೆ ಹಾಗು ಸಿನಿಮಾ ಪ್ರದರ್ಶಕರಿಗೆ ಬಹಳ ನಷ್ಟ ಸಂಕಷ್ಟವಾಗಲಿರುವುದು, ಗಾಯ ಮಾಡಿ ಅದರಮೇಲೆ ಉಪ್ಪು ಹಾಕಿದಂತಿರುವುದು. ಲಾಕ್ದೋನ್ ಬಳಿಕ ಕನ್ನಡ ಸಿನಿಮಾ ಉದ್ಯಮ ಈಗ ತಾನೇ ಕಣ್ತೆರೆದು ನೋಡುತ್ತಿರುವ ಸಮಯದಲ್ಲಿ ವಿನಾ ಕಾರಣ ಅಂಧಕಾರ ಸೃಷ್ಟಿಸಲಾಗಿದೆ.. ಮಾಧ್ಯಮದೊಂದಿಗೆ ಮಾತಾಡಿದ ಅಪ್ಪು ಅವರು ಇದರ ಸುಧಾರಣೆಯಾಗಲೇಬೇಕು ಅದಕ್ಕಾಗಿ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ತಯಾರಿದ್ದೀನಿ ಎಂದರು..

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply