ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ “ಯುವರತ್ನ”ಸಿನಿಮಾ ಎಪ್ರಿಲ್ 1ಕ್ಕೆ ದೇಶದಾದ್ಯಂತ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾನ ಕಾಣುವ ಕಾತುರ ಪ್ರೇಕ್ಷಕರಲ್ಲಿ ಹೆಚ್ಚಿದೆ. ವಾರದ ಕೆಳಗೆ ಹೊರಬಂದ ಟ್ರೇಲರ್ ವೀಕ್ಷಿಸಿದ್ ಪ್ರತಿಯೊಬ್ಬ ಅಭಿಮಾನಿ ಹೇಳ್ತಿರೋದು ಒಂದೇ ” ಫಸ್ಟ್ ಡೇ ಫಸ್ಟ್ ಶೋ “ಈ ಸಿನಿಮಾನ ನೋಡಲೇಬೇಕು!! ಪುನೀತ್ ಅವರ ಸಿನಿ ಪಯಣದ ಪ್ರಾರಂಭಿಕ ದಿನಗಳಲ್ಲಿ ಇದ್ದ ಹುಮ್ಮಸ್ಸು, ಹುರುಪು ಮರುಕಳಿಸಿದೆ. “ಯುವರತ್ನ” ಶೇರ್ಷಿಕೆ ಯುಕ್ತವಾಗಿದೆ.

“ಯುವ ಹಬ್ಬ
ಕಳೆದ ವಾರದಿಂದ ಸಿನಿಮಾ ಪ್ರಚಾರಕ್ಕೆಂದು ಪುನೀತ್ ರಾಜಕುಮಾರ, ಧನಂಜಯ್, ರವಶಂಕರ್ ಗೌಡ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕರ್ನಾಟಕದ ಹಲವು ಮೂಲೆಗಳಿಗೆ ತೆರಳಿದ್ದಾರೆ, ಹೋದಲ್ಲೆಲ್ಲಾ ಅವರಿಗೆ ಸಿಕ್ಕ ಆಹ್ವಾನ- ಆದರವು ಒಂದು ರೀತಿಯ “ರಾಜಮರ್ಯಾದೆಯೆ ಸರಿ. ಗುಲ್ಬರ್ಗ, ತುಮಕೂರು, ಮೈಸೂರು, ಹುಬ್ಬಳ್ಳಿ, ಮಂಡ್ಯ, ಶಿರಾ, ಬೆಳಗಾಂ ಎಲ್ಲೆಡೆ ಜನರು ಸಾಗರದ ಅಲೆಗಳ ರೂಪದಲ್ಲಿ ಬಂದು ಅಪ್ಪು ಅವರ ಉಪಸ್ಥಿಯನ್ನ ಆಹ್ಲಾದಿಸಿದರು, ಹಿಂದಿನ ಕಾಲದಲ್ಲಿ ಮನೆಗೆ ಬಂದ ಅಥಿಗಳನ್ನ ಸತ್ಕರಿಸುವ ಪರಿಯಲ್ಲಿ ಹಾರ ತುರಾಯಿಗಳನ್ನ ಹಾಕಿ ಆನಂದದಿಂದ ಕೊಂಡಾಡಿದ್ರು.ತುಮಕೂರಿನಲ್ಲಿ 2 ಟನ್ನಿನ ಹೂವಿನ ಹಾರ, ಸಾವಿರಾರು ಸೇಬುಗಳನ್ನ ಹೆಣೆದು ಬೃಹತ್ ಮಾಲೆಯನ್ನ ತಾಯಾರಿಸಿ ಅದನ್ನು ಅಪ್ಪು ಅವರಿಗೆ ಅರ್ಪಿಸಲಾಯಿತ್, ಕ್ರೇನ್ ಬಳಸಿ ಹಾರ ಹಾಕ್ತಿದ್ರು, ಜೊತೆ ಜೊತೆಯಲ್ಲೇ ಪುಷ್ಪವೃಷ್ಟಿಯನ್ನು ಸಹ ನೆರವೇರಿಸಿದ್ರು. ಅಭಿಮಾನಿಗಳು ಪ್ರೀತಿಯಿಂದ ತರುತ್ತಿತದ ಹಾರವನ್ನ ಕಣ್ಣಿಗೊತ್ತಿಕೊಂಡ ನಂತರ ಕೊರಳಿಗೆ ಹಾಕೊಳ್ತಿದ್ರು ಅಪ್ಪು, ದೇವರ ಪ್ರಸಾದದ ಹಾಗೆ ಸ್ವೀಕರಿಸ್ತಿದ್ರು ಅಭಿಮಾನಕ್ಕೆ ಶರಣು ಎಂದ್ರು.. ನೆರೆದಿದ್ದ ಅಭಿಮಾನಿಗಳಿಗೆ ಸಂತಸ ಪಡಿಸಲು ಹೆಜ್ಜೆ ಹಾಕಿ ಕುಣಿದ್ರು, ಮೈಕ್ ಹಿಡಿದು ಹಾಡಿದ್ರು ಹಾಗೆ ಒಂದೆರೆಡು ಡೈಲಾಗ್ ಕೂಡ ಹೊಡೆದು ಕಿಕ್ಕೇರಿಸಿದ್ರು… ಸಿನಿಮಾನೆ ಒಂದು ಹಬ್ಬ ಅಂತ ಪರಿಗಣಿಸಿರುವ ಜನರ ಮಧ್ಯದಲ್ಲಿ ಸಾಕ್ಷಾತ್ ಕಲಾವಿದರುಗಳೇ ಬಂದರೆ ಆ ಕ್ಷಣ ಯಾವ ಜಾತ್ರೆಗೂ ಕಡಿಮೆ ಇಲ್ಲಾ ಅನ್ನೋ ಮಾತಿಗೆ “ಯುವ ಸಂಭ್ರಮ” ಸಾಕ್ಷಿಯಾಯಿತು.


ಎರಡು ವರ್ಷಗಳ ಬಳಿಕ ಬೆಳ್ಳಿ ಪರದೆಯಮೇಲೆ ಪವಾರ್ ಸ್ಟಾರನ್ನ ಕಾಣಲಿರುವ ಅಭಿಮಾನಿ ದೇವರುಗಳ ಕಾತುರ ಮುಗಿಲು ಮುಟ್ಟಿದ್ದು, ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ನ ಮುಂಗಡ ಬುಕ್ಕಿಂಗ್ ಪ್ರಾರಂಭಗೊಂಡಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಿನಿಮಾಗೆ ಸಂಭದಿಸಿದ ಹಾಗೆ ಸುದ್ದಿಗೋಷ್ಠಿ -ಸಂದರ್ಶನ ನಡೆದಿದ್ದು ಅಲ್ಲಿಂದಲುಕೂಡ ಉನ್ನತ ಪ್ರತಿಕ್ರಿಯೆ ದೊರಕಿದೆ. ನಟ ಪ್ರಕಾಶ್ ರಾಜ ಸಿನಿಮಾದಲ್ಲಿ ದೊಡ್ಡ ಜವಾಬ್ದಾರಿಯುತ ಪಾತ್ರವನ್ನ ನಿರ್ವಹಿಸಿದ್ದು, ಸಿನಿಮಾ ಮೂಡಿ ಬಂದಿರುವ ಪರಿಯನ್ನ ಕಂಡು ಅವರು ಕೂಡ ತಮ್ಮ ಮೆಚ್ಚುಗೆ ಮತ್ತು ಪ್ರಶಂಸೆಯನ್ನ ಹಂಚಿಕೊಂಡಿದ್ದಾರೆ.