ತ. ರಾ. ಸು ರವರ ಕಾದಂಬರಿ ಆಧಾರಿತ ಚಿತ್ರವೇ “ಆಕಸ್ಮಿಕ ” ಅಣ್ಣಾವ್ರ ನಿಶ್ಟಾವಂತ ಪೋಲೀಸ್ ಅಧಿಕಾರಿ ಪಾತ್ರ, ಮೊದಲನೆ ನಾಯಕಿ “ಗೀತ” ರವರನ್ನು ಖಳನಾಯಕ “ವಜ್ರಮುನಿ ” ರವರಿಂದ ಬಿಡಿಸುವುದು, ಐತಿಹಾಸಿಕ ಗೀತೆ “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ” ಹಾಡಿನ ಸೃಷ್ಟಿ.
“ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು,ಮೆಟ್ಟಿದರೆ ಕನ್ನಡ ಮಣ್ಣಲ್ ಮೆಟ್ಟಬೇಕು,ಬದುಕಿದು ಜಟಕ ಬಂಡಿ,ಇದು ವಿಧಿಯೋಡಿಸುವಾ ಬಂಡಿ,ಬದುಕಿದು ಜಟಕ ಬಂಡಿ,ವಿಧಿ ಗುರಿತೋರಿಸುವಾ ಬಂಡಿ “
ಮಧ್ಯಂತರದಲ್ಲಿ ಎರಡನೇ ನಾಯಕಿ “ಮಾಧವಿ ” ದುಶ್ಚಟಗಳಿಗೆ ದಾಸಿಯಾಗಿರುವರನ್ನು ,ಪ್ರಿಯಕರನಿಂದ ಮೋಸ ಹೋಗಿರುವರನ್ನು ಸರಿದಾರಿಗೆ ತರಲು ಬುಧ್ಧಿ ಹೇಳುವುದು, ಆಕಸ್ಮಾತಾಗಿ ಆಗುಂಬೆಯ ಗೀತೆಯಲ್ಲಿ ಕಾಲುಜಾರಿ ಮಾಧವಿ ಪ್ರಾಣ ಕಳೆದುಕೊಳ್ಳುವುದು, ಪ್ರತಿಯೊಂದು ಸನ್ನಿವೇಶವನ್ನು ಎಳೆ ಎಳೆಯಾಗಿ ಬಿಡಿಸಿದ ನಿದೇ೯ಶಕರು ಟಿ. ಎಸ್ ನಾಗಾಭರಣ ರವರು.
ಇವರು ನಿದೇ೯ಶನವಲ್ಲದೆ ನಟರಾಗಿ ಸಹ ಅಭಿನಯಿಸಿದ್ದಾರೆ, ಅವುಗಳಲ್ಲಿ ಕೆಲವು ಹೆಸರಿಸುವುದಾದರೆ ಆದಿ ಶಂಕರಾಚಾರ್ಯ,ಆಕ್ಸಿಡೆಂಟ್, ನೀಲ, ಮಿ.ಗರಗಸ, ಕಿರಾತಕ, ಜೈ ಲಲಿತ, ಕೆ. ಜಿ. ಎಫ್ ಚಾಪ್ಟರ್ 1.
ಇವರು ಕನಾ೯ಟಕ ಚಲನಚಿತ್ರ ಅಕಾಡೆಮಿಯ ಛೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ, ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ.
ಇವರ ಚಿತ್ರರಂಗದ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
🌺09 ರಾಷ್ಟ್ರ ಪ್ರಶಸ್ತಿ
🍀14ರಾಜ್ಯ ಪ್ರಶಸ್ತಿ
🍁03 ರಾಷ್ಟ್ರೀಯಭಾವೈಕ್ಯತಾ ಪ್ರಶಸ್ತಿ.
💐ಗ್ರಹಣ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ.
🌺ಬ್ಯಾಂಕರ್ ಮಾಗ೯ಯ್ಯ ಅತ್ಯುತ್ತಮ ಚಲನಚಿತ್ರ.
🏵ಮೈಸೂರು ಮಲ್ಲಿಗೆ ಅತ್ಯುತ್ತಮ ಚಲನಚಿತ್ರ.
🌻ಚಿನ್ನಾರಿ ಮುತ್ತ ಅತ್ಯುತ್ತಮ ಚಲನಚಿತ್ರ.
🍀ಸಿಂಗಾರವ್ವ ಅತ್ಯುತ್ತಮ ಚಲನಚಿತ್ರ.
🌿ಕಲ್ಲರಳಿ ಹೂವಾಗಿ ಅತ್ಯುತ್ತಮ ಭಾವೈಕ್ಯತೃ ಸಾರುವ ಚಲನಚಿತ್ರ.
ಇಂಥ ಸದಭಿರುಚಿಯ ನಿದೇ೯ಶಕರನ್ನು ಭೇಟಿ ಮಾಡಿದ ದಿನ ಎಂದಿಗೂ ಮರೆಯಲಾಗದು.
ಇವರ ಮುಂಬರುವ ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹