ರಂಗಕಮಿ೯,ಕಲಾತ್ಮಕ ಜೀವಿ, ಐತಿಹಾಸಿಕ, ಸದಭಿರುಚಿಯ ನಿದೇ೯ಶಕರು – ಟಿ. ಎಸ್.ನಾಗಾಭರಣ

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು

ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು “

ಸಂಗ್ಯಾ ಬಾಳ್ಯ ಈ ನಾಟಕ ಯಾರು ತಾನೆ ನೋಡಿರೋಲ್ಲ, ದೂರದರ್ಶನದಲ್ಲಿ ನಮಗೆ ಮನೋರಂಜನೆ ಸಿಗುತ್ತಿದ್ದ ನಾಟಕ ಅಂದರೆ ಇದು.

ಕಥೆ,ಕವನ,ಕಾದಂಬರಿಗಳ ವಿಶೇಷ ವಿಷಯಗಳನ್ನು ಸಂಗ್ರಹಿಸಿ ಅದನ್ನು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರು ಮೆಚ್ಚುವ ಹಾಗೆ ತೋರಿಸುವ ಕಲಾತ್ಮಕ ಮತ್ತು ಸೃಜನಶೀಲ ನಿದೇ೯ಶಕರಲ್ಲಿ ನಾಗಾಭರಣರು ಒಬ್ಬರು.

ಮೈಸೂರ ಮಲ್ಲಿಗೆ, ಬ್ಯಾಂಕರ್ ಮಾಗ೯ಯ್ಯ, ರಾಮರಾಜ್ಯ, ಚಿನ್ನಾರಿ ಮುತ್ತ, ಗ್ರಹಣ, ಅನ್ವೇಷಣೆ,  ಆಸ್ಪೋಟ, ಸಾಗರ ದೀಪ, ಜನುಮದಾತ, ಸಿಂಗಾರವ್ವ, ಸಂತ ಶಿಶುನಾಳ ಶರೀಫ, ನಾಗಮಂಡಲ,ಕಲ್ಲರಳಿ ಹೂವಾಗಿ,  ಚಿಗುರಿದ ಕನಸು, ಜನುಮದ ಜೋಡಿ, ಆಕಸ್ಮಿಕ , ಅಲ್ಲಮ ಇನ್ನೂ ಮುಂತಾದವು ಚಿತ್ರಗಳನ್ನು ನಿದೇ೯ಶಿಸಿದ ರಂಗಭೂಮಿ ಕಲಾವಿದರೂ,  ನಿದೇ೯ಶಕರಾದ (ತಲಕಾಡು ಶ್ರೀನಿವಾಸಯ್ಯ ನಾಗಾಭರಣ- ಶ್ರೀ. ಟಿ. ಎಸ್ ನಾಗಾಭರಣ).

ಇವರು ನಿಮಿ೯ಸಿದ ಪ್ರತಿಯೊಂದು ಪಾತ್ರವೂ ವಿಭಿನ್ನವಾದುದು, ಕಲಾವಿದರು ಅಷ್ಟೇ ಇಷ್ಟ ಪಟ್ಟು ಅಭಿನಯಿಸುತ್ತಾರೆ, ಕನ್ನಡ ಭಾಷೆ, ಭಾವಗೀತೆ, ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಚಿತ್ರಗಳಲ್ಲಿ ತೋರಿಸಿದ್ದಾರೆ.

ಚಿಗುರಿದ ಕನಸು” ಚಿತ್ರವು ಖ್ಯಾತ ಕಾದಂಬರಿಕಾರರಾದ “ಶಿವರಾಂ ಕಾರಾಂತ” ರವರ ಕಾದಂಬರಿ ಆಧಾರಿತ ಚಿತ್ರ, ಒಬ್ಬ ಸಾಮಾನ್ಯ ಯುವಕ “ಬಂಗಾಡಿ “ಎಂಬ ಹಳ್ಳಿಗೆ ಬಂದು ಅಲ್ಲಿಯ ಜನರ ಕಷ್ಟವನ್ನು ಅರಿತು ನೀರಿಗೆ ಪರದಾಡುವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವ ಚಿತ್ರವೇ ಚಿಗುರಿದ ಕನಸು,  ಶಿವಣ್ಣ ರವರು ಪಾತ್ರಕ್ಕೆ ತಕ್ಕ ಹಾಗೆ ನಟನೆ ಮಾಡಿದ್ದಾರೆ.

ಒಂದು ಗಂಡು ಹೆಣ್ಣು ಇಬ್ಬರು ಪ್ರೀತಿ ಮಾಡುವಾಗ ಬಂದ ಸಮಸ್ಯೆಯನ್ನು ಎದುರಿಸಲು ನಾಯಕ  ತನ್ನ ಪ್ರೀತಿಯ ತ್ಯಾಗ ಮಾಡುವ ಸಂದರ್ಭ ನಂತರ ಅವರ ನೆನಪಲ್ಲಿ ಉಳಿಯುವುದು ನಾಯಕಿಗೂ ಇಷ್ಟವಿರದೆ ಬಲವಂತವಾಗಿ ಮತ್ತೊಬ್ಬನನ್ನು  ಮದುವೆಯಾಗಿ ಅನುಭವಿಸುವ ನೋವು ಕೊನೆಯಲ್ಲಿ ಪ್ರೇಮಿಗಳು ಒಂದಾಗುವುದು ನಿಜವಾದ ಪ್ರೀತಿ ಗೆಲ್ಲುವುದು ಎಂದು ತೋರಿಸಿಕೊಟ್ಟ ಚಿತ್ರ “ಜನುಮದ ಜೋಡಿ ” ಎಲ್ಲಾ ಹಾಡುಗಳೂ ಸೂಪರ್ ಹಿಟ್, ಇಲ್ಲಿ ಹೆಚ್ಚು ಜಾನಪದ ಗೀತೆಗಳಿಗೆ ಒತ್ತು ನೀಡಿದ್ದಾರೆ, ಖುಷಿಯ ವಿಚಾರ ಈ ಚಿತ್ರ ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ವಿಧ್ಯಾಥಿ೯ಗಳಿಗೆ ಒಂದು ಪಾಠವಾಗಿ ಮಾಡಿದ್ದಾರೆ, ನಮ್ಮ ಕನ್ನಡ ಚಿತ್ರ ನಮಗೆ ಹೆಮ್ಮೆ.

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply