ಕನ್ನಡ ಸಿನಿಮಾರಂಗದ ಕನಸುಗಾರ ರವಿಚಂದ್ರನ್. ರವಿಚಂದ್ರನ್ ಅವರ ಎರಡನೇ ಮಗ ಈಗ ತ್ರಿವಿಕ್ರಮ ಸಿನಿಮಾದ ಮೂಲಕ ನಾಯಕನಾಗಿ ತೆರೆಯ ಮೇಲೆ ಬಂದು ನಮ್ಮೆಲ್ಲರನ್ನೂ ರಂಜಿಸಲಿದ್ದಾರೆ. ಈ ಚಿತ್ರವೂ ಇದೆ ಶುಕ್ರವಾರ ೨೪ ನೆಯ ತಾರೀಕು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಎಲ್ಲರ ನಿರೀಕ್ಷೆ ಈ ಸಿನಿಮಾ ಮೇಲೆ ನೆಟ್ಟಿದೆ.
ರವಿಚಂದ್ರನ್ ಅಂತಹ ಹಿರಿಯ ನಟನ ಮಗನಾಗಿದ್ದು ಕೂಡ ಸ್ವಲ್ಪವೂ ಅಹಂ ಇಲ್ಲದ ವಿಕ್ರಂ ಅವರಿಗೆ ನಿರ್ದೇಶನ ಮಾಡುವುದು ಹೆಮ್ಮೆಯ ವಿಷಯ ಎಂದು ತ್ರಿವಿಕ್ರಮ ಚಿತ್ರದ ನಿರ್ದೇಶಕ ಸಹನಾ ಮೂರ್ತಿ ಹೇಳಿದ್ದಾರೆ.
ದಶಕಗಳ ಕಾಲ ನಮ್ಮನ್ನು ರಂಜಿಸಿ ಪರದೆ ಮೇಲೆ ಮೆರೆದ ರವಿಚಂದ್ರನ್ ಅವರ ಕೀರ್ತಿ ವಿಕ್ರಮ ಮೂಲಕ ಇನ್ನೂ ಬೆಳಗಲಿ. ತ್ರಿವಿಕ್ರಮ ಚಿತ್ರ ಶತದಿನೋತ್ಸವ ಆಚರಿಸಲಿ ಎಂಬುದೇ ಚಿತ್ರೋದ್ಯಮ.ಕಾಮ್ ನ ಹಾರೈಕೆ.