ಪತ್ರಿಕೋದ್ಯಮದ ಸೆಲೆಬ್ರಿಟಿ, ಸ್ಟಾರ್ ಜರ್ನಲಿಸ್ಟ್ ಅಂತಲೇ ಜನರ ಮಧ್ಯೆ ಚಿರ ಪರಿಚಿತರಾಗಿದ್ದ “ರವಿ ಬೆಳೆಗೆರೆ” ಯವರು ಅಸ್ತಂಗತರಾಗಿ ತಿಂಗಳುಗಳಾದವು. ಕಲಾವಿದರಿಗಾಗಲಿ ಬರಹಗಾರರಿಗಾಗಲಿ ಎಂದಿಗೂ ಸಾವಿಲ್ಲ, ಅವರ ಕೆಲಸ ಕೃತ್ಯೆಗಳ ಮೂಲಕ ಜನರ ಮನದಲ್ಲಿ ಸದಾ ಜೀವಂತವಾಗಿ ಇರ್ತಾರೆ ಅನ್ನೋದಕ್ಕೆ ಹಾಲವಾರು ನಿದರ್ಶನಗಳಿವೆ.
ಈ ಮಾತನ್ನ ಮತ್ತೊಮ್ಮೆ ನಿಜವೆಂದು ಸಾಬೀತು ಮಾಡಲು ಈಗ ರವಿ ಬೆಳೆಗೆರೆಯವರು ಸರದಿ. ಅವರು ಬದುಕಿಗೆ ಫುಲ್ ಸ್ಟಾಪ್ ಇಡೋ ಮುನ್ನ, ಸಾವಿರಾರು ಸಾಲುಗಳನ್ನು ಹೆಣದಿದ್ರು, ಸಾಲುಗಳು ಪುಟವಾಗಿ ಪುಟಗಳು ಪುಸ್ತಕಾವಗಿ ಹೊರಬಂದಿದೆ, “ಒಂದೇ ದಿನ 6 ಪುಸ್ತಕಗಳು ಬಿಡುಗಡೆಗೊಂಡವು” .
ರವಿ ಬೆಳೆಗೆರೆ ಮಕ್ಕಳಾದ ಭಾವನ ಬೆಳಗೆರೆ ಮತ್ತು ಕಲ್ಪನಾ ಬೆಳೆಗೆರೆಯ ಮುಂದಾಳತ್ವದಲ್ಲಿ ಇದು ಜರಗಿತು. ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ವಿಜಿಯಮ್ಮ,ಸಿನಿಮಾ ನಿರ್ದೇಶಕರಾದ ನಗಾತಿಹಳ್ಳಿ ಚಂದ್ರಶೇಖರ್, ಪತ್ರಕರ್ತರಾದ ಜೋಗಿ, ಮಿತ್ರರಾದ ಸುರೇಶ್ ಶೆಟ್ಟರು ಹಾಗೂ ವಕೀಲರಾದ ರೇವಣ ಸಿದ್ದಯ್ಯನವರು ಉಪಸ್ಥಿತರಿದ್ದರು. ರವಿ ಬೆಳಗೆರ ಅವರೊಂದಿಗಿನ ಒಡನಾಟವನ್ನ ಹಂಚಿಕೊಳ್ಳುವುದರ ಜೊತೆಗೆ ತಲಾ ಒಂದೊಂದು ಪುಸ್ತಕವನ್ನ ಲೋಕಾರ್ಪಣೆ ಮಾಡಿದ್ರು.
“ರೇಖಾ, ಹಿಮಗಿರಿಯ ಗರ್ಭದಲ್ಲಿ, ಅಮ್ಮಾ ನನ್ನನ್ನು ಯಾಕೆ ಕೊಂದೇ, ದಿ ಗಿಫ್ಟ್, ಬೆಸ್ಟ್ ಆಫ್ ಲವಲವಿಕೆ ಹಾಗೂ ಅಭಿನಂದನ ಎನ್ನುವ ಪುಸ್ತಕಗಳನ್ನ ಬರ್ದಿದ್ರು ಬೆಳೆಗೆರೆಯವ್ರು.
ತನ್ನ ವಿಭಿನ್ನವಾದ ಬರವಣಿಗೆ , ನಿರೂಪಣೆಯಿಂದ ಯುದ್ಧ ಭೂಮಿಯ ನೋವುಗಳನ್ನ, ದುರಂತ ನಾಯಕರ ಜೇವನದ ದುಗುಡವನ್ನ , ಭೂಗತ ಲೋಕದ ಪಾತಕಿಗಳ ಚೂಪಾದ ಮಚ್ಚಿಗೆ ಅಂಟಿದ ಬಿಸಿ ರಕ್ತದ ಹಿಂದಿರುವ ದ್ವೇಷ, ಹುನ್ನಾರ, ಗೊಳಿನ ಕಥೆಯನ್ನ ಕಾವ್ಯಮಯವಾಗಿ, ಮನಕಲಕುವಂತೆ, ಸರಳವಾಗಿ ತಿಳಿಸಿಕೊಟ್ಟ ಸ್ವರ ರಾಕ್ಷಸ ..
ಅವರ ಕೈಯಲ್ಲಿದೆ ಲೇಖನ ಹಲವರ ಹಣೆ ಬರಹವನ್ನು ಬಡಲಾಯಿಸಿದೆ, ಕೆಲವರು ಉಪ್ಪರಿಗೆ ಏರಿದ್ದಾರೆ ಇನ್ನು ಕೆಲವರ ಜುಟ್ಟು ಹಿಡಿದು ಅಲ್ಲಾಡಿಸಿದೆ , ಒಂದೇ ಮಾತಿನಲ್ಲಿ ಹೇಳಬೇಕೆಂದ್ರೆ ಅದು ಬರೀ ಪೆನ್ ಆಗಿರಲಿಲ್ಲ ಒಂದು ರೀತಿಯ ಮಂತ್ರ ದಂಡವಾಗಿತ್ತು..