ರಾಜ್ಯಾದ್ಯಂತ ತುರ್ತು ನಿರ್ಗಮನ ಬಿಡುಗಡೆ

ಜೂನ್ 24ರಿಂದ ಬಿಡುಗಡೆಗೊಂಡ ತುರ್ತುನಿರ್ಗಮನ ಚಿತ್ರವೂ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ, ವಿಭಿನ್ನ ಕಥೆ ಹೊಂದಿರುವ ಈ ಚಿತ್ರವೂ, ಮನುಷ್ಯನ ಹುಟ್ಟು ಮತ್ತು ಸಾವಿಗೆ ಯಾವುದೇ ತುರ್ತು ನಿರ್ಗಮವಿರುವುದಿಲ್ಲ, ಒಂದು ಪಕ್ಷ ತುರ್ತು ನಿರ್ಗಮ ವಿದ್ದರೆ ಅದು ಹೇಗಿರುತ್ತದೆ, ಎಂಬ ಪ್ರಶ್ನೆಗೆ ಉತ್ತರ ಈ ಚಿತ್ರವಾಗಿದೆ.

ಜೀವನದಲ್ಲಿ ಗೊತ್ತು ಗುರಿ ಇಲ್ಲದ ಯುವಕನೊಬ್ಬ, ತನ್ನ ಬಾಳಿನ ಕೊನೆಯ ಕ್ಷಣ ಬಂದಾಗ ಹೇಗೆವರ್ತನೆ ಮಾಡುತ್ತಾನೆ , ಎಂದು ಈ ಚಿತ್ರದಲ್ಲಿ ಕಾಲ್ಪನಿಕವಾಗಿ ತೋರಿಸಿದ್ದಾರೆ, ಹುಟ್ಟು ಸಾವು ಎಲ್ಲವನ್ನು ಅದರದೇ ದೃಷ್ಟಿಕೋನದಲ್ಲಿ ಹಾಸ್ಯಭರಿತವಾಗಿ ಈ ಚಿತ್ರದಲ್ಲಿ ಮೂಡಿಬಂದಿದೆ, ಒಮ್ಮೆ ಎಲ್ಲರು ಕುಟುಂಬ ಸಮೇತರಾಗಿ ಈ ಚಿತ್ರವನ್ನು ನೋಡಬಹುದಾಗಿದೆ.

ಈ ಚಿತ್ರದ ತಾರಾಬಳಗದಲ್ಲಿ ಸುನಿಲ್ ರಾವ್, ಸುಧಾ ರಾಣಿ , ಸಂಯುಕ್ತ ಹೆಗ್ಡೆ, ಅಚ್ಯುತ್ ಕುಮಾರ್, ರಾಜ್ ಬಿ ಶೆಟ್ಟಿ, ಹಿತ ಚಂದ್ರಶೇಖರ್, ಮುಂತಾದವರು ನಟಿಸಿದ್ದಾರೆ, ಈ ಚಿತ್ರವನ್ನು ಹೇಮಂತ್ ಕುಮಾರವರು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ, ಒಟ್ಟಿನಲ್ಲಿ ಈ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ, ಈ ಚಿತ್ರಕ್ಕೆ ಚಿತ್ರೋದ್ಯಮ,ಕಾಂ ರವರಿಂದ ಶುಭ ಆರೈಕೆ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply