ರಾಜ ನನ್ನ ರಾಜ @45 ರ ಸಂಭ್ರಮ

raj

ಒಂದು ಹಾಡು ಸಾಕಷ್ಟು ಸಲ ಕೇಳಿದ್ರೂ ಇನ್ನೂ ಕೇಳೋಣ ಅನ್ಸುತ್ತೆ ಆರತಿ ರವರು ಹೂವಿನ ತೋಟದಲ್ಲಿ ವಿಹಾರ ಮಾಡೋವಾಗ ಅವರಿಗೆ ನಾಯಕ ಹಾಡಿದ ಹಾಡು, ಪೂರ್ವ ಜನ್ಮ ನೆನಪಿಸಿಕೊಳ್ಳೊದು, ಹಿನ್ನೆಲೆ ಗಾಯಕರು ದಿ ಪಿ ಬಿ ಶ್ರೀನಿವಾಸ್ ರವರ ಮಧುರ ಕಂಠ.. ನಿಮಗೇನಾದ್ರೂ ಗೊತ್ತಾಯ್ತ ಆ ಹಾಡು ಮತ್ತು ಚಿತ್ರ ಯಾವುದು ಅಂತ…ಪವಾ೯ಗಿಲ್ಲ ಬಿಡಿ ನಾನೇ ಹೇಳ್ತೀನಿ ಆ ಹಾಡು “ನಿನದೇ ನೆನಪು ದಿನವೂ ಮನದಲ್ಲಿ ನೋಡುವ ಆಸೆಯೂ ತುಂಬಿದೆ ” ಚಿತ್ರ ರಾಜ ನನ್ನ ರಾಜ ಹೀರೋ ಅಣ್ಣಾವ್ರ ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 45 ವಷ೯ಗಳು.

ಅಣ್ಣಾವ್ರ ದ್ವಿಪಾತ್ರ ಅಭಿನಯ, ಗೀತ – ಆರತಿ ತಾನು ಮದುವೆಯಾಗಲು ತನಗೆ ತಕ್ಕನಾದ ಗಂಡು ಹುಡುಕಿ ಸರಿಯಾದ ಆಯ್ಕೆ ಮಾಡಿದೆ ಎಂದು ನಂಬಿರೋದು, ಆದರೆ ಆಕೆಯನ್ನು ಹಿಂಬಾಲಿಸುವವನಿಗೂ ಈಕೆಗೂ ಪೂವ೯ ಜನ್ಮದಲ್ಲಿ ಈಗಾಗಲೇ ಈಕೆಯೇ ಅವರ ಪ್ರೇಯಸಿ ಎಂದು ಹೇಳುವ ಕಥೆ.

ಗಂಗಮ್ಮ ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ಅಣ್ಣಾವೃ ಹಿಂದಿನ ಜನ್ಮದಲ್ಲಿ ಆರತಿ ಜೊತೆ ಹಾಡ್ತಾರೆ, ಇವರಿಬ್ಬರೂ ಒಂದು ಸೇತಾ೯ರಾ.. ಇಲ್ಲ ಇಬ್ಬರಿಗೂ ತೊಂದ್ರೆ ಆಗುತ್ತಾ..
ಗೀತಳಿಗೆ ಹಿಂದಿನ ಜನ್ಮದಲ್ಲಿ ಇಬ್ಬರೂ ಪರಸ್ಪರ ಪ್ರೀತಿ ಮಾಡಿದ ಸನ್ನಿವೇಶ ಅಥ೯ ಮಾಡ್ಕೊಂಡು ರಾಜನೇ ನನ್ನವರು ಅಂತ ಒಪ್ಕೊತರಾ…
ಇವೆಲ್ಲಾ ಡೌಟು ಕ್ಲಿಯರ್ ‌ಮಾಡ್ಕೊಳೋಕೆ ಫಿಲಂ ನೋಡಿದ್ರೆ ಗೊತ್ತಾಗುತ್ತೆ,
ಆರತಿ ಬಗ್ಗೆ ಹೊಗಳೋ “ನೂರು ಕಣ್ಣು ಸಾಲದು ಹಾಡು ತುಂಬಾ ಕಾಡುತ್ತೆ, ಇದರ ಮಧ್ಯದಲ್ಲಿ ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ತಾನೇ ಆರತಿನ ಪ್ರೀತಿಸ್ತಿರೋದು ಅಂತ ಸುಳ್ಳು ನಾಟಕವಾಡೋದನ್ನ ರಾಜ ಕೊನೆಗೆ ಬಯಲಿಗೆಳಿತಾರಾ.. ಚಿತ್ರ ನೋಡಿ.

ತಾರಾಗಣದಲ್ಲಿ ಕೆ ಎಸ್ ಅಶ್ವಥ್ , ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ , ರಾಜಾನಂದ್, ಸಂಪತ್ , ಎಂ ಪಿ ಶಂಕರ್, ಜಯಶ್ರೀ, ಬಿ ಜಯ, ಹೊನ್ನವಳ್ಳಿ ಕೃಷ್ಣ, ಪ್ರಭಾಕರ್ ಮತ್ತಿತರರು..

ಚಿತ್ರದ ಕೆಲವು ಮಾಹಿತಿಗಳು :

💜ನಿದೇ೯ಶನ : ಎ ವಿ ಶೇಷಗಿರಿ ರಾವ್.
💙ಸಹಾಯ ನಿದೇ೯ಶಕ : ಚಿ ದತ್ತರಾಜ್.
🦆ಸಹಾಯಕ ನಿದೇ೯ಶಕ: ಹೊನ್ನವಳ್ಳಿ ಕೃಷ್ಣ.
💪ಬ್ಯಾನರ್ : ಮಧು ಆಟ್೯ ಫಿಲಮ್ಸ್.
🧡ನಿಮಾ೯ಪಕ : ಎ ಎಲ್ ಅಬ್ಬಯ್ಯ ನಾಯ್ಡು.
🐴ಕಥೆ : ಶ್ರೀಮತಿ ಸಲೀಂ ಜಾವೇದ್.
🌹ಸಂಭಾಷಣೆ : ಚಿ ಉದಯಶಂಕರ್.
💐ಸಾಹಿತ್ಯ : ಚಿ ಉದಯಶಂಕರ್.
🎶ಸಂಗೀತ : ಜಿ ಕೆ ವೆಂಕಟೇಶ್.
👒ಛಾಯಾಗ್ರಾಹಕ : ಆರ್ ಚಿಟ್ಟಿಬಾಬು.
😍ಸಂಕಲನಕಾರ : ಪಿ ಭಕ್ತವತ್ಸಲಂ.
💪ಸಾಹಸ : ಶಿವಯ್ಯ.
🦆ನೃತ್ಯ ನಿದೇ೯ಶಕ : ಉಡುಪಿ ಜಯರಾಂ.

ಈ ಚಿತ್ರ ಬಿಡುಗಡೆಯಾದಾಗ ನಾನಂತೂ ಇರಲಿಲ್ಲ, ಆದರೆ ಈಗ ಚಿತ್ರ ನೋಡಿ ಖುಷಿ ಪಡ್ತೀನಿ, 45 ಅಲ್ಲ 100 ವಷ೯ವಾದರೂ ಚಿತ್ರದ ಗೀತೆಗಳು ಎಂದೆಂದಿಗೂ ಸೂಪರ್ ಹಿಟ್.

ಕೊನೆಯಲ್ಲಿ ಇನ್ನೊಂದು ರೋಮ್ಯಾಂಟಿಕ್ ಹಾಡು “ತನುವು ಮನವು ಇಂದು ನಿಂದಾಗಿದೆ “.

ಚಿತ್ರ ಬಿಡುಗಡೆಯಾಗಿದ ಕೇಂದ್ರಗಳಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿತ್ತು.

ಕನ್ನಡ ಚಿತ್ರರಂಗ ಇರುವವರೆಗೂ ನಮ್ಮ ಅಣ್ಣಾವ್ರ ಸದಾ ಇತಾ೯ರೆ.
ಮುಂದಿನ ಲೇಖನದಲ್ಲಿ ನಿಮ್ಮನ್ನು ಭೇಟಿ ಮಾಡುವೆ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply