ರಾಮ್ ಚಿತ್ರ ಸಂಭ್ರಮ 11 ವಷ೯ಗಳು

ನಾವೆಲ್ಲರೂ ಅತೀ ಹೆಚ್ಚು ಸಲ ಕೇಳಿರೋ ಹಾಡು “ಹೊಸ ಗಾನ ಬಜಾನಾ ” ಜೊತೆಲಿ ಡ್ಯಾನ್ಸ್ ಮಾಡೋಥರ ಪವರ್ ಸ್ಟಾರ್ ಮತ್ತು ಪ್ರಿಯಾಮಣಿ ಕುಣಿದು ಕುಪ್ಪಳಿಸಿ ಭಜ೯ರಿ ಯಶಸ್ಸು ಪಡೆದ ಚಿತ್ರ “ರಾಮ್” ಬಿಡುಗಡೆಯಾಗಿ ಇಂದಿಗೆ 11 ವಷ೯ಗಳು 🌹

ರಾಮ್ ಬಿ ಇ ಸ್ಟೂಡೆಂಟ್ ಬಳ್ಳಾರಿ ಯಿಂದ ರಜೆಗೆ ಮೈಸೂರಿಗೆ ಅವರ ತುಂಬು ಕುಟುಂಬ ನೋಡಲು ಮನೆಗೆ ಎಂಟ್ರಿ, ಅವರ ಚಿಕ್ಕಪ್ಪ ಮಗಳು ಮದುವೆ ನಿಶ್ಚಯ ಆದರೆ ಅವರಿಗೆ ಮತ್ತೊಬ್ಬ ಎನ್ ಆರ್ ಐ ಜೊತೆ ಲವ್ವಾಗಿರೋ ವಿಷಯ ರಾಮ್ ಗೆ ಗೊತ್ತಾಗುತ್ತೆ, ನಂತರ ಇಬ್ಬರನ್ನು ಒಂದು ಮಾಡೊವಾಗ ವಿಲನ್ ಫೈಟಿಂಗ್ ಜೋಡಿ ಸಕ್ಸಸ್.
ನಂತ್ರ ರಾಮ್ ಮತ್ತೆ ಕಾಲೇಜ್ ವಾಪಸ್ ಅಲ್ಲಿ ಪೂಜ (ಪ್ರಿಯಾಮಣಿ) ನಾಯಕಿ ನೋಡಿ ಮೊದಲ ನೋಟಕ್ಕೆ ಇಷ್ಟವಾಗುತ್ತೆ,


ರಾಮ್ ಫ್ರೆಂಡ್ ಬೇಜಾರಾಗೊ ಕಾರಣ ಅವರು ಪ್ರೀತ್ಸೋ ಹುಡುಗಿಗೆ ಬೇರೆಯವನ ಜೊತೆ ವಿವಾಹ ನಡೆಯೋ ದಿನ ರಾಮ್ ಅವರನ್ನು ಕರ್ಕೊಂಡ್ ಬಂದು ಇವರಿಗೆ ಮದ್ವೆ ಮಾಡ್ಸೋ ಪ್ಲಾನ್ ಆದ್ರೆ ಕಲ್ಯಾಣ ಮಂಟಪದಲ್ಲಿ ಆ ಹುಡುಗಿ ಅಂತ ಈ ಪೂಜನ ಪ್ರಜ್ನೆ ತಪ್ಪಿಸಿ ಕಕೊ೯ಂಡ್ ಬತಾ೯ರೆ ನಂತ್ರ ಈ ಹುಡುಗಿ ಅಲ್ಲ ಬೇರೆ ಹುಡುಗಿ ಅನ್ನೋ ಅರಿವು ಒಂದ್ ಕಡೆ ಖುಷಿ ತಾನು ಪ್ರೀತಿಸೊ ಹುಡುಗಿ ನನ್ನ ಕಣ್ಣ ಮುಂದೆ ಇದಾರೆ ನಂತ್ರ ಪೂಜೆ ಪ್ರಜ್ನೆ ಇಂದ ವಾಪಸ್ ಬಂದಾಗ ಅವರಿಗೆ ಹ್ಯಾಪಿ ಯಾಕಂದ್ರೆ ಪೂಜಾಗೆ ಮದ್ವೆ ಆಗೋ ಇಷ್ಟ ಇರಲ್ಲ ವಾಪಸ್ ಬಸ್ ಸ್ಟಾಪ್ ಗೆ ಬಿಡಲು ಕೇಳಿದಾಗ ಕಾಡಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡೋದು ರಾಮ್ ಗೆ ಭಾರಿ ಖುಷಿ ಅಲ್ಲಿಂದ ಮರಳಿ ಬರೋಕೆ ಮಾಡೋ ಪ್ಲಾನ್ ಮುಂದೆ ಕಾಡಿಂದ ಅವರ ಫ್ರೆಂಡ್ ಇರೋ ಕಡೆ ಬಿಟ್ಟು ಹೋಗೋದು, ಮಧ್ಯದಲ್ಲಿ ಸಾಧು ಕೋಕಿಲ ಕಾಮಿಡಿ.

ಪೂಜ ಅವರ ಫ್ರೆಂಡ್ ಗೆ ಫೋನ್ ಮಾಡಿ ವೀಸಾ ಬರೋಕೆ 15 ದಿನ ಅನ್ನೋ ವಿಷಯ ಗೊತ್ತಾಗಿ ಬೇಜಾರಾಗಿ ಹೊರಡೊ ಸಮಯ ಕೆಲ ಪುಂಡರು ಅಟ್ಟಿಸುವಾಗ ರಾಮ್ ಮತ್ತು ಫ್ರೆಂಡ್ಸ್ ಬಚಾವ್ ಮಾಡ್ತಾರೆ,
ರಾಮ್ ಹೊಸ ಪ್ಲಾನ್ ಹೇಳೋದು ಪೂಜ ಅನಾಥೆ ಅವರಿಗೆ ಯಾರು ಇಲ್ಲ ಒಂದು ಆಶ್ರಮದಿಂದ ಬಂದಿದೀನಿ ಅಂತ ರಾಮ್ ತಂದೆಗೆ ಹೇಳೋ ಕಥೆ ನಿಜ ಅಂತ ಒಪ್ಕೊಂಡು ಅಲ್ಲೇ ಇರೋ ಸೀನ್, ಶ್ರೀನಾಥ್ ಚಿತ್ರದಲ್ಲಿ ಅಣ್ಣಾವ್ರ ಅಭಿಮಾನಿ, ರಾಮ್ ತಂದೆ. ಪೂಜ ಯಾಕ್ ಮನೆ ಬಿಟ್ಟು ಬರೋ ಪರಿಸ್ಥಿತಿ ಎಲ್ಲಾ ಹೇಳೋ ಮನವರಿಕೆ ಸೀನ್, ಪೂಜಾಗೂ ರಾಮ್ ಮೇಲೆ ಲವ್ವಾಗೋದು.

ಪೂಜನ ಬೇರೆ ಜನ ಕಿಡ್ನಾಪ್ ಮಾಡೋವಾಗ ಫೈಟ್ ವಿಲನ್ ಪ್ರಜ್ನೆ ತಪ್ಪಿ ಬೀಳೋದು, ಇಲ್ಲಿ ಪೂಜ ತಾನು ಯಾರು ಎಲ್ಲಿಂದ ಬಂದೆ ಅನ್ನೋ ಫುಲ್ ಸ್ಟೋರಿ ರಾಮ್ ಗೆ ಹೇಳೋದು, ಪೂಜಾ ತಂದೆಗೆ ಇಬ್ಬರು ತಂಗಿಯರು, ಪೂಜ ತಾಯಿ ಅಣ್ಣಂದಿರು ಮದ್ವೆ ಆಗಿರೋದು, ಇಬ್ಬರು ಅಣ್ಣಂದಿರು ಆಸ್ತಿ ವಿಚಾರಕ್ಕೆ ಬೇರೆಯಾಗಿರೋ ವಿಷಯ, ಪೂಜ ಅಮೇರಿಕಾಲಿ ಬೆಳೆದಿದ್ದು 100 ಕೋಟಿ ಆಸ್ತಿಗೆ ಒಡತಿ , ಪೂಜ ಹೆತ್ತವರು ಆಕ್ಸಿಡೆಂಟ್ ನಲ್ಲಿ ತೀರೋಗಿರೋದು, ಇಬ್ಬರು ಅಣ್ಣಂದಿರು ಅವರ ಮಕ್ಕಳನ್ನು ಪೂಜಾಗೆ ಕೊಡೋ ವಿಚಾರ ಇಬ್ಬರ ಜಗಳ ನಂತ್ರ ಪೂಜ ಚಿಕ್ಕಪ್ಪ ಮನೆಗೆ ಅಕೌಂಟೆಂಟ್ ಆಗಿ ಸೇರೋಕೆ ಅಲ್ಲಿ ಯ ಮುಖ್ಯ ಪಾತ್ರ ಚಿಕಾಗೊ ಚಂದ್ರಶೇಖರ್ ರಂಗಾಯಣ ರಘು ಅವರನ್ನು ಬುಟ್ಟಿ ಹಾಕೊಳೋದು ಹೀಗೆ ಅಲ್ಲಿ ಅಕೌಂಟೆಂಟ್ ಆಗಿ ಮುಂದೆ ಪೂಜ ಚಿಕ್ಕಪ್ಪ ಇಬ್ಬರಿಗೂ ಬುಧ್ಧಿ ಕಲಿಸೋದು ತಮ್ಮ ತಪ್ಪಿನ ಅರಿವು ಮೂಡಿಸುವ ಸನ್ನಿವೇಶಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ..

ಮೂಲಕಥೆ ತೆಲುಗಿನ ರೆಡಿ ಚಿತ್ರದ ರಿಮೇಕ್ ಆದ್ರೂ ಕನ್ನಡದ ಜನರಿಗೆ ತಕ್ಕಂತೆ ತಿಳಿಸೋ ಕೆ ಮಾದೇಶ್ ನಿದೇ೯ಶನ ಯಶಸ್ವಿ, ವಿ ಹರಿಕೃಷ್ಣ ಸಂಗೀತ ಯೋಗರಾಜ್ ಭಟ್ ಮತ್ತು ಇತರರ ಸಾಹಿತ್ಯ, ಆದಿತ್ಯ ಆಟ್ಸ್೯ ನಿಮಾ೯ಣ, ಜಯಣ್ಣ ಫಿಲ್ಮ್ಸ್ ಹಂಚಿಕೆ.

ತಾರಾಗಣದಲ್ಲಿ ದೊಡ್ಡಣ್ಣ, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಸುಂದರ್ ರಾಜ್, ಧಮ೯, ಪದ್ಮ ವಾಸಂತಿ, ಶೋಭರಾಜ್, ಕುರಿ ಪ್ರತಾಪ್, ನಂದಕಿಶೋರ್, ಅಚ್ಯುತ್ ಕುಮಾರ್, ಸಂಗೀತ ದೊಡ್ಡ ಬಳಗವೇ ಇದೆ.

ಳಿಕೆಯಲ್ಲೂ ಹೆಸರು ಮಾಡಿದ ಕೌಟುಂಬಿಕ ಚಲನಚಿತ್ರ, ಸತತ 25 ವಾರ ಪ್ರದಶ೯ನ, 2010 ರ ಮೊದಲ 100 ದಿನ ಓಡಿದ ಪ್ರಮುಖ ಚಿತ್ರ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply