ಕರೋನ್ ಹಾವಳಿಯಿಂದಾಗಿ ಕನ್ನಡದ ಚಿತ್ರಮಂದಿರವು ಸ್ತಬ್ಧಗೊಂಡಿತ್ತು. ನಿರ್ದೇಶಕರು ನಿರ್ಮಾಪಕರ,ನಾಯಕ ನಟ,ನಟಿಯರು ಹಾಗೂ ಚಿತ್ರರಂಗದ ಹಲವಾರು ಕಲಾವಿದರು ಕೆಲಸವನ್ನು ಕಳೆದುಕೊಂಡಿದ್ದರು.
ಇದೀಗ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಚಿತ್ರಗಳು ತೆರೆ ಕಾಣುತ್ತಲೇ ಇದೆ ಇಂದು ಶುಕ್ರವಾರ ಆದ್ದರಿಂದ ಕನ್ನಡದ ಹಲವಾರು ಚಿತ್ರಗಳು ಬೆಳ್ಳಿತೆರೆಯ ಮೇಲೆ ಪ್ರದರ್ಶನ ನೀಡುತ್ತಿವೆ.
ಸಿನಿಮಾ ಪತ್ರಕರ್ತರಾಗಿ ಅಪಾರ ಅನುಭವವಿರುವ ರಾಜೇಶ್ ಶೆಟ್ಟಿಯರವರು ಈಗ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದು, ಅವರ ನಿರ್ಮಾಣದ “ರಾ” ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ರಾಜೇಶ್ ಗೌಡ ಅವರು ನಿರ್ಮಾಣ ಮಾಡಿದ ಮೊದಲ ಚಲನಚಿತ್ರವಾಗಿದ್ದು ಇದನ್ನು ಅವರು ತಮ್ಮ ಗೆಳೆಯರ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಹಾಗೂ ಉದಯ ಟಿವಿ ಉದಯ ಮ್ಯೂಸಿಕ್ ಉದಯ ಕಾಮಿಡಿ ಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.
ಗೌಡರು ತಮ್ಮ ಗೆಳೆಯರ ಸಹಕಾರದೊಂದಿಗೆ ನಾಯಕನಟರಾಗಿ ಮತ್ತು ನಿರ್ದೇಶಕರಾಗಿ ತೆರೆಯಮೇಲೆ ಕಾಣಿಸಿದ್ದು ನಾಯಕಿ ನಟಿಯಾಗಿ ಸೋನು ನಾಯಕನ ನಿರ್ವಹಿಸಿದ್ದಾರೆ ಮತ್ತು ಸಂಗೀತವನ್ನು ಜೀನ್ಸ್ ಆರ್ಕಿಟಿಕ್ ಮತ್ತು ಛಾಯಾಗ್ರಹಣವನ್ನು ತ್ರಿಭುವನ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾವನ್ನು ಬೆಂಗಳೂರು-ಚಾಮರಾಜನಗರ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಸುಂದರ ಲೊಕೇಶನ್ ಗಳಲ್ಲಿ ಚಿತ್ರೀಕರಣವನ್ನು ಮಾಡಿದ್ದಾರೆ ಇಂದು ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲೂ ಕೂಡ ರಾ ಸಿನಿಮಾ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರು ಸಂತೋಷದಿಂದ ಚಿತ್ರಮಂದಿರದ ಕಡೆಗೆ ಬಂದಿದ್ದು. ರಾ ಸಿನಿಮಾ ಪ್ರೇಕ್ಷಕರ ಮನ ಗೆದ್ದು 100 ದಿನಗಳ ಶತಕ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ
ರಾ ಸಿನಿಮಾ ತಂಡಕ್ಕೆ ಚಿತ್ರೋದ್ಯಮ ತಂಡದಿಂದ ಒಂದು ಆಲ್ ದಿ ಬೆಸ್ಟ್.
ಪೈರೇಟೆಡ್ ಸಿನಿಮಾಗಳಿಗೆ ಗುಡ್ ಬೈ ಹೇಳಿ. ಕನ್ನಡ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಿ ಆನಂದಿಸಿ.
.