ದೇವೃ ತುಂಬಾ ಕ್ರೂರಿ ಫ್ರೆಂಡ್ಸ್ ಯಾಕ್ ಈ ಮಾತು ಹೇಳ್ತಿದೀನಿ ಅದಕ್ಕೆ ರೀಸನ್ ಕೆಲವರು ಲೈಫ್ನಲ್ಲಿ ಆಚೀವ್ ಮಾಡೋಕೆ ಅವರಿಗಿಷ್ಟದ ದಾರಿ ಆಯ್ಕೆ ಮಾಡ್ಕೊತಾರೆ, ಇನ್ನೂ ಕೆಲವರು ದೊಡ್ಡವರು ಹೇಳಿಕೊಟ್ಟದ್ದು ಮುಂದುವರಿಸ್ಕೊಂಡ್ ಹೋಗ್ತಾರೆ, ಇನ್ ಕೆಲವರಿಗೆ ಆಚೀವ್ ಮಾಡೋಕೆ ಚಾನ್ಸ್ ಸಿಕ್ಕಿದ್ರೆ ಸಾಕು ಅಂತಾರೆ, ಸ್ವಂತ ಟ್ಯಾಲೆಂಟಿಂದ ಮುಂದೆ ಬರೋರು ಬೆರಳೆಕಿಯಷ್ಟು, ಅತೀ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ತಾರೆಗಳು ಸುನೀಲ್, ಕಲ್ಪನ, ಶಂಕರ್ ನಾಗ್ ಇನ್ನೂ ಹಲವರು ಬೇಗ ಹೆಸರು ಮಾಡಿ ನಮ್ಮನ್ನೆಲ್ಲ ಅಗಲಿದ ಘಟನೆಗಳು ನೋಡಿದೀವಿ.
ಬಾಲಿವುಡ್ ಫಿಲ್ಮೀ ದುನಿಯಾದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ರಂಗೀನ್ ಪ್ರಪಂಚಕ್ಕೆ ಕಾಲಿಟ್ಟು ಹೆಸರು ಮಾಡಿ ಇನ್ನೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳೊ ಪ್ರಯತ್ನಕ್ಕೆ ಕೊಳ್ಳಿ ಇಟ್ಟ ದೇವರು ಕ್ರೂರಿ ತಾನೆ, ಸಾಕಷ್ಟು ಆಸೆ ಆಕಾಂಕ್ಷೆಗಳನ್ನು ಹೊತ್ತು ಬದುಕಬೇಕೆಂಬ ಆಸೆ ದೇವರೇ ಕಿತ್ತುಕೊಂಡಿದ್ದು ವಿಪಯಾ೯ಸ.
ಸುಶಾಂತ್ ಸಿಂಗ್ ರಜಪೂತ್ ಇವರ ಬಗ್ಗೆ ಹೇಳೋಕು ಮೊದಲು ಹ್ಯಾಪಿ ಬರ್ತ್ಡೇ ಸುಶಾಂತ್ 💐🏍🦋.
ನೋಡೋಕೆ ಒಳ್ಳೆ ಹೈಟ್, ಚಾಮಿ೯ಂಗ್ ಲುಕ್, ಅದೇನೊ ಸೆಕ್ಸಿ ಬಾಡಿ ಅಂತರಲ್ಲ ಹಾಗೆ, ಒಟ್ನಲ್ಲಿ ಹೀ ಈಸ್ ಹ್ಯಾಂಡ್ಸಂ ಹಂಕ್.
ಸುಶಾಂತ್ ಪಟ್ನಾದಲ್ಲಿ 21 ಜನವರಿ ಜನನ, ಪೂವ೯ಜರ ಮನೆ ಬಿಹಾರದ ಪೂಣೆ೯ಯ ಜಿಲ್ಲೆ, ತಂಗಿಯಲ್ಲಿ ಒಬ್ಬರು ಕ್ರಿಕೆಟ್ ಆಟಗಾತಿ೯, ದುಘ೯ಟನೆ ಅಂದ್ರೆ ನೋಡಿ ಅವರ ತಾಯಿ ಮರಣವಾದದ್ದು ನಿಜಕ್ಕೂ ಸುಶಾಂತ್ ದಿಗ್ಭ್ರಮೆ ಆದದ್ದು, ಅದೇ ವಷ೯ದಲ್ಲಿ ಕುಟುಂಬವು ಪಾಟ್ನಾದಿಂದ ದೆಹಲಿಗೆ ಸ್ಥಳಾಂತರಗೊಂಡಿತು, ಸುಶಾಂತ್ ಪಟ್ನಾದ ಸೇಂಟ್ ಕರೆನ್ಸ್ ಹೈ ಸ್ಕೂಲ್ ಮತ್ತು ನ್ಯೂಡೆಲ್ಲಿ ಕುಲಾಚಿ ಹಂಸ್ರಾಜ್ ಮಾದರಿ ಶಾಲೆಯಲ್ಲಿ ಶಿಕ್ಷಣ, ಡಿ ಸಿ ಎ ಎಂಟ್ರನ್ಸ್ ಎಗ್ಸಾಂ ನಲ್ಲಿ 7ನೇ ಸ್ಥಾನ, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಮೆಕ್ಯಾನಿಕಲ್ ಇಂಜಿನಿಯರ್) ದೆಹಲಿ ಕಾಲೇಜಿಗೆ ಪ್ರವೇಶ ಪಡೆದರು, ಆಸ್ಟ್ರೋ ಫಿಸಿಕ್ಸ್ ನಲ್ಲಿ ನ್ಯಾಷನಲ್ ಒಲಿಂಪಿಯಾಡ್ ವಿನ್ನರ್.
ಎಷ್ಟು ಇಂಟೆಲಿಜೆಂಟ್, ಓದೋದ್ರಲ್ಲಿ ಆಸಕ್ತಿ, ಇಂಜಿನಿಯರಿಂಗ್ ನಲ್ಲಿ ಆಸಕ್ತಿ ಇಲ್ಲದೆ ತಂದೆ ಬಲವಂತಕ್ಕಾಗಿ ಓದದ್ದು ಇವರ ಆಸೆ ಆಸ್ಟ್ರೊನಾಟ್ ಆಗಬೇಕೆಂದು ನಂತರ ಪೈಲಟ್.
ಬಾಲಿವುಡ್ ನಲ್ಲಿ ಇಂಟ್ರಷ್ಟು ಬರೋಕೆ ಕಾರಣ ಶಾರುಖ್ ಖಾನ್ ಫ್ಯಾನ್.
ಟೆಲಿವಿಷನ್ ಶೋಗಳಲ್ಲಿ ಕಾಣಿಸಿಕೊಂಡು ಪರಿಚಿತರಾದರು ಕಿಸ್ ದೇಶ್ ಮೇ ಹೇ ಮೇರಾ ದಿಲ್, ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ , ಜರಾ ನಾಚ್ಕೆ ದಿಖಾ, ಜಲಕ್ ದಿಖಲಾಜ, ಸಿಐಡಿ..
ಮ್ಯೂಸಿಕ್ ವಿಡಿಯೋ ಪಾಸ್ ಆವೋ ನಲ್ಲಿ ಅಮಾ೯ನ್ ಮತ್ತು ಅಮಾಲ್ ಮಲ್ಲಿಕ್ ಹಾಡಿನಲ್ಲಿ ನೋಡಬಹುದು.
ಇವರು ನಟಿಸಿದ ಕೆಲವು ಚಿತ್ರಗಳ ಹೆಸರುಗಳು :-
💐ಕೈ ಪೂಚೆ ರೋಲ್ ಇಶಾನ್ ಭಟ್.
🌺ಶುಧ್ ದೇಸಿ ರೊಮ್ಯಾನ್ಸ್ ರಘುರಾಮ್ ರೋಲ್.
🏍ಪಿಕೆ ಸಫ೯ರಾಜ್ ಯೂಸಫ್
🌲ವೆಲ್ಕಂ ಟು ನ್ಯೂಯಾರ್ಕ್.
🌹ರಾಬ್ತ ಜಿಲಾನ್ /ಶಿವ ಕಕ್ಕರ್.
👑ಕೇದಾರ್ನಾಥ್ ಮನ್ಸೂರ್ ಖಾನ್.
🦚ಸೋಂಚಿರಿಯ ಲಖನ್ ಸಿಂಗ್
👒ಚಿಚೋರೆ ಅನಿರುಧ್ ಪಾಠಕ್.
🦋ಡ್ರೈವ್ ಸಮರ್.
🎷ದಿಲ್ ಬೇಚಾರ ಮನ್ನಿ (ಕೊನೆಯ ಚಿತ್ರ).
ನೋಡಿ ಓದುಗರಾಗಿ ನಿಮ್ಗೆ ಅನ್ಸ್ಬೋದು ಇಷ್ಟೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರಾ ಅಂತ ಹೌದು, ಇವರ ಶ್ರಮ, ಶ್ರಧ್ಧೆ, ಗೌರವ ಎಲ್ಲಾ ಬೆಳವಣಿಗೆಗೆ ಸಾಕ್ಷಿ.
ಒಬ್ಬ ಕ್ರಿಕೆಟ್ ತಾರೆ ದಂತಕಥೆಯಾಗಿ ಮೆರೆದ ಶ್ರೇಷ್ಠ ಆಟಗಾರ ಎಂ ಎಸ್ ಧೋನಿ ಜೀವನಾಧಾರಿತ ಚಿತ್ರದಲ್ಲಿ ನಟಿಸೋದು ಸುಲಭದ ಮಾತಲ್ಲ, ಅವರ ಹಾಗೆ ಸ್ಟೈಲ್ ಗೊತ್ತಿರಬೇಕು, ಮಾತು ಹಾಗೆ ಇರಬೇಕು, ಕ್ಯಾರೆಕ್ಟರ್ ಸೂಟಾಗಬೇಕು, ಒಬ್ಬ ಪರಿಪೂರ್ಣ ಕಲಾವಿದನಿಗೆ ಎಲ್ಲ ತಿಳಿದಿದ್ದರೆ ಆ ಕಥೆ ಸಕ್ಸಸ್ ಆಗುತ್ತೆ, ಮುಂದೆ ಚಿತ್ರದ ನಟನೆಯಿಂದ ಹೆಚ್ಚು ಪ್ರಶಂಸೆ ಖುದ್ದಾಗಿ ಎಂ ಎಸ್ ಧೋನಿ ರವರೇ ತಮ್ಮ ಚಿತ್ರ ನೋಡಿ ಸುಶಾಂತ್ ನಟನೆ ಬಗ್ಗೆ ಹೊಗಳಿದ್ರಂತೆ. ಆ ಚಿತ್ರದ ಹೆಸರೇ ಎಂ ಎಸ್ ಧೋನಿ, ದಿ ಅನ್ಟೋಲ್ಡ್ ಸ್ಟೋರಿ. ತೆರೆಯ ಮೇಲೆ ನೋಡೋಕೆ ಧೋನಿಯ ಪ್ರತಿರೂಪ ಅನ್ನೋ ಹಾಗಿತ್ತು.
🏇ಈ ಚಿತ್ರದ ನಟನೆಗೆ ಅತ್ಯುತ್ತಮ ನಟ ಸ್ಕ್ರೀನ್ ಅವಾಡ್೯, ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋನ್೯ ಪ್ರಶಸ್ತಿ ಲಭಿಸಿದೆ.
🎩ಪವಿತ್ರ ರಿಷ್ತಾ ಅತ್ಯುತ್ತಮ ಟೆಲಿವಿಷನ್ ನಟ ಬಿಗ್ ಸ್ಟಾರ್ ಎಂಟಟೈ೯ನ್ಮೆಂಟ್, ಗೋಲ್ಡ್ ಅವಾಡ್೯, ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾಡ್೯ ,ಎಫ್ ಸಿ ಸಿ ಐ ಅವಾಡ್.
🎸ಕೈ ಪೂಛೆ ಚಿತ್ರದ ನಟನೆಗೆ ಅತ್ಯುತ್ತಮ ನಟ ಸ್ಕ್ರೀನ್ ಅವಾಡ್೯, ಪ್ರೊಡ್ಯೂಸರ್ ಗಿಲ್ಡ್ ಫಿಲಂ ಅವಾಡ್೯.
ಒಂದು ನಿಮಿಷನೂ ವ್ಯಥ೯ ಮಾಡದೇ ಏನಾದರೂ ಕಲಿಯೋದು, ಓದಿ ತಿಳ್ಕೊಳೋದು ಒಳ್ಳೆ ಒಳ್ಳೆ ಹವ್ಯಾಸ ಇದ್ದವರು, ಶೂಟಿಂಗ್ ಸೆಟ್ ನಲ್ಲಿ ಎಲ್ಲರ ಜೊತೆ ತಮಾಷೆಯಾಗಿ ಇದ್ದು ಎಲ್ಲರನ್ನೂ ನಕ್ಕು ನಗಿಸೋದು.
ಚಲನಚಿತ್ರ ನಟ, ದೂರದಶ೯ನ ನಟ, ನತ೯ಕ, ಉದ್ಯಮಿ, ಇಷ್ಟೆಲ್ಲಾ ಸಾಧನೆ ಮಾಡಿದವರು ತಮ್ಮ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು ಆಂದ್ರೆ ನಂಬೋ ಮಾತೆ, ಇನ್ನೂ ಬದುಕಿ ಬಾಳಬೇಕಾಗಿದ್ದ ಇನ್ನೂ ಎತ್ತರಕ್ಕೆ ಬೆಳೆಯುವ ಹಂಬಲವಿದ್ದ ಈ ಯುವ ನಟ ಹೀಗೆ ಮಾಡಲು ಸಾಧ್ಯವೇ.
ದೇವರೇ ಉತ್ತರ ಕೊಡಬೇಕು..
ಎನಿವೇ ವಿ ಮಿಸ್ ಯೂ ಸುಶಾಂತ್ ಆಂಡ್ ಒನ್ಸ್ ಅಗೇನ್ ಹ್ಯಾಪಿ ಬರ್ತ್ಡೇ 💐🌹🦋