ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

( ಮುಂದುವರೆದ ಭಾಗ )

೧೯೬೨ ರಲ್ಲಿ ಬಿಗ್ ಆಂಡ್ ಲಿಟಲ್ ವಾಂಗ್ ಟಿನ್ ಬಾರ್ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಬಾಲಕಲಾವಿದನಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಲೀ ಲೀ ಹಾವಾ ಎಂಬ ನಟಿ ಇವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು.

 ನಾಲ್ಕು ವರ್ಷಗಳ ನಂತರ ನಟಿ ಲೀ ಲೀ ಹಾವಾ ಜೊತೆಗೆ ಕಿಂಗ್ ಹೂ  ನಿರ್ದೇಶನದಲ್ಲಿ ಮೂಡಿ ಬಂದ ಡ್ರಿಂಕ್ ವಿಥ್ ಮಿ ಎಂಬ ಚಿತ್ರದಲ್ಲಿ  ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರು. ಪುನಃ  ೫ ವರ್ಷಗಳ ನಂತರ ೧೯೭೧ ರಲ್ಲಿ ಕಾಂಗ್ ಫೂನ್  ನಿರ್ಮಾಣದ ಟಚ್ ಆಫ್ ಝೆನ್ ನಲ್ಲಿ ಓರ್ವ ಸಹಕಲಾವಿದನಾಗಿ ಕಾಣಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಚಿತ್ರ ರಂಗ ಪ್ರವೇಶಿಸಿದರು.

೧೯೭೧ ನೇ ಇಸ್ವಿ ಬ್ರೂಸ್ಲಿ ಯುಗ ಇವರ ಚಿತ್ರಗಳ ಮುಂದೆ ಯಾವ ಚಿತ್ರಗಳು ನಿಲ್ಲುತ್ತಿರಲಿಲ್ಲ. ಈ ಸಮಯದಲ್ಲಿ ಚಿತ್ರ ರಂಗಕ್ಕೆ ಪ್ರವೇಶಿಸಿದಾಗ ಚಾನ್ ಗೆ ಕೇವಲ ೧೭ ವರ್ಷ. ಚು.ಮು ಎಂಬುವರ ಗ್ರೇಟ್ ಅರ್ಥ್ ಫಿಲಂ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ತಮ್ಮ ಪ್ರೌಢ ವೃತ್ತಿಯನ್ನು ಆರಂಭಿಸಿದರು. ಚೆನ್ – ಯುಯಾನ್- ಲೋಂಗ್ ಎಂಬ ರಂಗನಾಮ ಅಡಿಯಲ್ಲಿ ಬ್ರೂಸ್ಲಿ ಅಭಿನಯದ ಫಿಸ್ಟ ಆಫ್ ಫ್ಯೂರಿ ಮತ್ತು ಎಂಟರ್ ದಿನ ಡ್ರ್ಯಾಗನ್ ಚಿತ್ರಗಳಿಗೆ ಸಾಹಸ ಪ್ರದರ್ಶಕನಾಗಿ ಕೆಲಸ ಮಾಡಿದರು. ಅದೇ ವರ್ಷದಲ್ಲಿ ಲಿಟಲ್ ಟೈಗರ್ ಆಫ್ ಕ್ಯಾಂಟೀನ್ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಚಿತ್ರ ಒಂದು ವರ್ಷದ ನಂತರ ೧೯೭೩ ರಲ್ಲಿ ಹಾಂಕಾಂಗ್ ನಲ್ಲಿ ಸೀಮಿತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ದುರಾದೃಷ್ಟಕರ ವಿಷಯವೇನೆಂದರೆ ಚಿತ್ರಗಳಲ್ಲಿನ ಇವರ ಆರಂಭಿಕ ಸಾಹಸಗಳು ಹಣಕಾಸಿನ ದೃಷ್ಟಿಯಿಂದ ನಿರೀಕ್ಷಿಸಿದಷ್ಟು ಹಣವನ್ನು ಗಳಿಸಲಿಲ್ಲ. 

ಎರಡು ವರ್ಷಗಳ ಬಿಡುವಿನ ನಂತರ ೧೯೭೫ ರಲ್ಲಿ ಆಲ್ ಇನ್ ದಿ ಫ್ಯಾಮಿಲಿ  ಎಂಬ ಹಾಸ್ಯ ವಯಸ್ಕರ ಚಿತ್ರದಲ್ಲಿ ಚಾನ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಆಶ್ಚರ್ಯದ ವಿಷಯವೇನೆಂದರೆ ಒಂದು ಹೊಡೆದಾಟದ ದೃಶ್ಯವಾಗಲಿ,ಸಾಹಸ ಪ್ರದರ್ಶನದ ಸನ್ನಿವೇಶವಾಗಲಿ ಒಂದು ಇಲ್ಲ. ೧೯೭೬ ರಲ್ಲಿ ಕ್ಯಾನ್ ಬೆರಿಯಲ್ಲಿದ್ದ ತನ್ನ ಪೋಷಕರ ಬಳಿ ಸೇರಿದ ಚಾನ್ ಅಲ್ಲಿಯೇ ಡಿಕ್ಸನ್ ಕಾಲೇಜಿನಲ್ಲಿ ನಿರ್ಮಾಣ ಕಾಮಗಾರಿ ಕೆಲಸ ನಿರ್ವಹಿಸಿದರು. ಅಲ್ಲಿಯೇ ಇದ್ದ ಜಾಕ್ ಎಂಬ ಸಹವರ್ತಿ ಚಾನ್ ನನ್ನು ತನ್ನ ಬಳಿ ಸೇರಿಸಿಕೊಂಡು ಲಿಟ್ಲ್ ಜ್ಯಾಕ್ ಎಂಬ ಅಡ್ಡ ಹೆಸರು ನೀಡಿದರು. ಈ ಹೆಸರು ಮುಂದೆ ಜಾಕಿ ಎಂದು ಕರೆಯಲ್ಪಟ್ಟಿತು. ಅಲ್ಲಿಂದ ಚಾನ್ ಹೆಸರು ಅವರೊಂದಿಗೆ ಅಂಟಿಕೊಂಡು ಬಂದು ಮುಂದೆ ಜಾಕಿ ಚಾನ್ ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದರು.

 ಆದರೆ ವಿಧಿಯ ಆಟ ಬಲ್ಲವರಾರು? ಅಲ್ಲವೇ.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply